ETV Bharat / state

ದಾಂಡೇಲಿಯಲ್ಲಿ ಮೊಸಳೆ ಎಳೆದೊಯ್ದಿದ್ದ ಬಾಲಕನ ಮೃತದೇಹ ಪತ್ತೆ - crocodile dragged a boy

ದಾಂಡೇಲಿ ನಗರದ ಹಳಿಯಾಳ ರಸ್ತೆಯ ವಿನಾಯಕ ನಗರದಲ್ಲಿರುವ ಕಾಳಿ ನದಿಯ ದಂಡೆಯ ಮೇಲೆ ಮೀನು ಹಿಡಿಯುತ್ತಿದ್ದ ಬಾಲಕನೋರ್ವನನ್ನು ಮೊಸಳೆಯೊಂದು ಎಳೆದೊಯ್ದಿತ್ತು. ಇಂದು ಬಾಲಕನ ಶವ ಪತ್ತೆಯಾಗಿದೆ.

dead body of boy found in dandeli who dragged by crocodile
ದಾಂಡೇಲಿಯಲ್ಲಿ ಮೊಸಳೆ ಎಳೆದೊಯ್ದಿದ್ದ ಬಾಲಕನ ಮೃತದೇಹ ಪತ್ತೆ!
author img

By

Published : Oct 26, 2021, 12:55 PM IST

ಕಾರವಾರ: ಮೀನು ಹಿಡಿಯಲು ತೆರಳಿದಾಗ ಮೊಸಳೆ ಪಾಲಾಗಿದ್ದ ಬಾಲಕನ ಶವ ಎರಡು ದಿನಗಳ ಬಳಿಕ ಇಂದು ಪತ್ತೆಯಾಗಿದೆ.

ಮೊಹಿನ್ ಮೆಹಬೂಬ್ ಅಲಿ(15) ಮೃತ ಬಾಲಕ. ವಿನಾಯಕನಗರದ ಬಳಿಯ ಕಾಳಿ ನದಿ ದಂಡೆಯಲ್ಲಿ ಮೀನು ಹಿಡಿಯುತ್ತಿರುವಾಗ ದಾಳಿ ಮಾಡಿದ ಮೊಸಳೆ ಬಾಲಕನನ್ನು ಎಳೆದೊಯ್ದಿದಿತ್ತು. ಒಂದೆರಡು ಬಾರಿ ನದಿಯಲ್ಲಿ ಮೊಸಳೆಯು ಬಾಲಕನನ್ನು ಮೇಲಕ್ಕೆ ಎತ್ತಿ ಮುಳುಗಿಸಿದ್ದ ಬಳಿಕ ಬಾಲಕನ ಸುಳಿವು ಪತ್ತೆಯಾಗಿರಲಿಲ್ಲ. ಬಾಲಕನಿಗಾಗಿ ಸ್ಥಳೀಯರು ತೆಪ್ಪದ ಮೂಲಕ ಮತ್ತು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೋಟ್​ಗಳ ಮೂಲಕ ಹುಡುಕಾಟ ನಡೆಸಿದ್ದರೂ ಬಾಲಕ ಪತ್ತೆಯಾಗಿರಲಿಲ್ಲ.

dead body of boy found in dandeli who dragged by crocodile
ದಾಂಡೇಲಿಯಲ್ಲಿ ಮೊಸಳೆ ಎಳೆದೊಯ್ದಿದ್ದ ಬಾಲಕನ ಮೃತದೇಹ ಪತ್ತೆ!

ಇದನ್ನೂ ಓದಿ: ದಾಂಡೇಲಿಯಲ್ಲಿ ಮೀನು ಹಿಡಿಯುತ್ತಿದ್ದ ಬಾಲಕನ ಎಳೆದೊಯ್ದ ಮೊಸಳೆ

ಇಂದು ಮತ್ತೆ ಕಾರ್ಯಾಚರಣೆ ನಡೆಸಿದಾಗ ಬಾಲಕನ ಶವ ಪತ್ತೆಯಾಗಿದೆ. ಬಾಲಕನ ಒಂದು ಕೈ ಅನ್ನು ಮೊಸಳೆ ತಿಂದು ಹಾಕಿದೆ. ಈ ಬಗ್ಗೆ ದಾಂಡೇಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.