ETV Bharat / state

ಭಟ್ಕಳದಲ್ಲಿ ನಿಬಂಧನೆಗಳನ್ನೊಳಗೊಂಡ ನಿಷೇಧಾಜ್ಞೆ ಜಾರಿಗೊಳಿಸಿದ ಡಿಸಿ ಡಾ.ಕೆ.ಹರೀಶಕುಮಾರ್ - ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್

ಭಟ್ಕಳದಲ್ಲಿ ಕೋವಿಡ್- 19 ಪ್ರಕರಣಗಳು ತೀವ್ರಗತಿಯಲ್ಲಿ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆ ಪುರಸಭೆ ವ್ಯಾಪ್ತಿಗೆ ಸೀಮಿತವಾಗಿ ಕೆಲವು ನಿಬಂಧನೆಗಳನ್ನೊಳಗೊಂಡ ನಿಷೇಧಾಜ್ಞೆಯನ್ನು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಹೊರಡಿಸಿದ್ದಾರೆ.

ಕೋವಿಡ್- 19 ಪ್ರಕರಣ
ಕೋವಿಡ್- 19 ಪ್ರಕರಣ
author img

By

Published : Jul 2, 2020, 11:46 PM IST

ಭಟ್ಕಳ (ಉತ್ತರ ಕನ್ನಡ): ಕೋವಿಡ್- 19 ಪ್ರಕರಣಗಳು ತೀವ್ರಗತಿಯಲ್ಲಿ ಉಲ್ಬಣಗೊಳ್ಳುತ್ತಿರುವುದರಿಂದ ಪ್ರಸ್ತುತ ಪರಿಸ್ಥಿತಿಯನ್ನು ಪರಾಮರ್ಶಿಸಿ, ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಹಾಗೂ ಹೆಚ್ಚಿನ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲು ಭಟ್ಕಳ ಪುರಸಭೆ ವ್ಯಾಪ್ತಿಗೆ ಸೀಮಿತವಾಗಿ ಕೆಲವು ನಿಬಂಧನೆಗಳನ್ನೊಳಗೊಂಡ ನಿಷೇಧಾಜ್ಞೆಯನ್ನು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಹೊರಡಿಸಿದ್ದಾರೆ.

ಜಿಲ್ಲಾಧಿಕಾರಿ ಆದೇಶ ಪ್ರತಿ
ಜಿಲ್ಲಾಧಿಕಾರಿ ಆದೇಶ ಪ್ರತಿ

ಸಾರ್ವಜನಿಕರು ವೈದ್ಯಕೀಯ ಕಾರಣಕ್ಕೆ ಬಿಟ್ಟು ಇತರೆ ಯಾವುದೇ ಕಾರಣಕ್ಕೂ ಪ್ರತಿದಿನ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಹೊರಗಡೆ ಸಂಚರಿಸುವಂತಿಲ್ಲ. ಭಟ್ಕಳ ಉಪವಿಭಾಗಾಧಿಕಾರಿ ಅಥವಾ ಸಹಾಯಕ ಪೊಲೀಸ್ ಅಧೀಕ್ಷಕರ ಪೂರ್ವಾನುಮತಿ ಪಡೆಯದೇ 70 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರು, ಗರ್ಭಿಣಿ ಸ್ತ್ರೀಯರು, ಬಹು ಅಸ್ವಸ್ಥತೆಯಿಂದ ಬಳಲುತ್ತಿರುವ ವ್ಯಕ್ತಿಗಳು ಮತ್ತು10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸ್ವಗೃಹದಿಂದ ಹೊರಗೆ ಬರುವಂತಿಲ್ಲ ಎಂದು ಆದೇಶಿಸಿದ್ದಾರೆ.

ಜಿಲ್ಲಾಧಿಕಾರಿ ಆದೇಶ ಪ್ರತಿ
ಜಿಲ್ಲಾಧಿಕಾರಿ ಆದೇಶ ಪ್ರತಿ

ಕೋವಿಡ್-19 ರೋಗ ಲಕ್ಷಣ ಹೊಂದಿದ್ದವರು ಸರ್ಕಾರ ನಿಗದಿಪಡಿಸಿದ ಫೀವರ್ ಕ್ಲಿನಿಕ್​ಗಳಿಗೆ ತೆರಳಿ ತಪಾಸಣೆಯನ್ನು ಮಾಡಿಕೊಳ್ಳಬೇಕು. ತಪ್ಪಿದಲ್ಲಿ ಸಂಬಂಧಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ. ಎಲ್ಲಾ ರೀತಿಯ ಸಭೆ, ಸಮಾರಂಭಗಳು, ಸಾರ್ವಜನಿಕ ಮತ್ತು ಖಾಸಗಿ ಕಾರ್ಯಕ್ರಮಗಳನ್ನು (ಧಾರ್ಮಿಕ ಕಾರ್ಯಕ್ರಮಗಳನ್ನೂ ಒಳಗೊಂಡಂತೆ) ಭಟ್ಗಳ ಉಪವಿಭಾಗೀಯ ಆಡಳಿತದ ಮತ್ತು ಅಧಿಕಾರಿಗಳ ಉಪಸ್ಥಿತಿಯಲ್ಲಿಯೇ ಆಯೋಜಿಸಬೇಕು. ನಿಯಮಾನುಸಾರ ಅನುಮತಿ ಪಡೆಯಬೇಕು. ಭಟ್ಕಳ ಪುರಸಭೆ ವ್ಯಾಪ್ತಿಯ ಗಡಿಯೊಳಗೆ ಎಲ್ಲಾ ರೀತಿಯ ಸಾರ್ವಜನಿಕರ ಆಗಮನ ಮತ್ತು ನಿರ್ಗಮನವನ್ನು ನಿಯಂತ್ರಿಸಿದೆ. ಆದರೆ, ಇದು ಅಗತ್ಯ ಸರಂಜಾಮುಗಳ ಸಾಗಾಣಿಕೆ ಮತ್ತು ಅಧಿಕೃತ ಸರ್ಕಾರಿ ಪರವಾನಗಿ ಹೊಂದಿದವರಿಗೆ ಅನ್ವಯಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹಾಟ್ ಸ್ಪಾಟ್​ಗಳನ್ನು ತುರ್ತಾಗಿ ಉಪವಿಭಾಗಾಧಿಕಾರಿಗಳು ಗುರುತಿಸಿ ಭಟ್ಕಳ ಸಹಾಯಕ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಕಂಟೇನ್​​ಮೆಂಟ್ ಕ್ರಮಗಳನ್ನು ತಕ್ಷಣ ಜರುಗಿಸುವಂತೆ ಅವರು ಆದೇಶಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.