ಕಾರವಾರ : ಡ್ರೈವರ್ ಮಾಡಿದ ತಪ್ಪಿಗೆ ಪ್ಯಾಸೆಂಜರ್ ಹೊಣೆ ಎಂಬುದನ್ನು ಯಾವ ಕಾನೂನು ಹೇಳಿಲ್ಲ. ಹಾಗೇ ಹೇಳುವುದಾದರೆ ಲಾ ಓದಿದ ಸಿದ್ದರಾಮಯ್ಯ ಲಾಯರ್ ಆಗುವುದಕ್ಕೆ ನಾಲಾಯಕ್ ಎಂದು ಸಿದ್ದರಾಮಯ್ಯ ಹೇಳಿಕೆಗೆ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಕಿಡಿಕಾರಿದ್ದಾರೆ.
ಅಧಿಕಾರ ಇಲ್ಲದೇ ಮಾನಸಿಕ ಕಾಯಿಲೆಯಿಂದ ನರಳುವವರು ಕಂಠಪೂರ್ತಿ ಕುಡಿದು ಕಾರು ಅಪಘಾತದಲ್ಲಿ ಅಮಾಯಕರನ್ನು ಸಾಯಿಸುತ್ತಾರೆ. ನಮ್ಮಂತಹವರು ರಾಜಕೀಯದ ಮಧ್ಯೆ ಇತಿಹಾಸ ಓದಿ ಸತ್ಯ ತಿಳಿದು ಮಾತನಾಡುತ್ತೇವೆ ಎಂಬ ಹೇಳಿಕೆಗೆ, ಸಿದ್ದರಾಮಯ್ಯ ಮನಸ್ಥಿತಿ ಇಷ್ಟು ಕೆಳಗೆ ಹೋಗುತ್ತದೆ ಎಂದು ತಿಳಿದಿರಲಿಲ್ಲ. ಕುಡಿದು ಯಾರು ತೂರಾಡುತ್ತಾರೆ ಎಂದು ಸಿದ್ದರಾಮಯ್ಯ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ನನಗೆ ಕುಡಿವ ಅಭ್ಯಾಸವೇ ಇಲ್ಲ. ನಾನು ಡ್ರೈವಿಂಗ್ ಸಹ ಮಾಡುವುದಿಲ್ಲ. ನನ್ನ ಕಾರು ಅಪಘಾತವಾದಾಗ ಡ್ರೈವರ್ ಬೇರೆಯವರು ಇರುವುದು ಹತ್ತಿರದ ಟೋಲ್ ನಲ್ಲಿ ನನ್ನ ಕಾರು ಸಾಗಿದಾಗಿನ ಫೋಟೋದಲ್ಲಿ ನೋಡಬಹುದು. ಬೇರೆ ಡ್ರೈವರ್ ಮಾಡಿದ ಅಪಘಾತಕ್ಕೆ ಪ್ಯಾಸೆಂಜರ್ ಹೊಣೆ ಎನ್ನುವುದನ್ನು ಯಾವ ಕಾನೂನು ಹೇಳಿಲ್ಲ. ಅದು ಅಪಘಾತ ಮಾತ್ರ ಕೊಲೆಯಲ್ಲ. ಇದು ತಿಳಿಯದವರು ಇಂತಹ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ನನಗೆ ಯಾವ ಚಟವೂ ಇಲ್ಲ. ಸಿದ್ದರಾಮಯ್ಯ ನವರಿಗೆ ಯಾವ ಯಾವ ರೀತಿ ಚಟ ಇದೆ ಎಂದು ಅವರೇ ಸ್ಟಡಿ ಮಾಡಿಕೊಳ್ಳಲಿ ಎಂದು ದೂರಿದರು.