ETV Bharat / state

ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ತೆರಳಿದ ಆರೋಪ ವಿಚಾರ​: ಕಾಂಗ್ರೆಸ್​ ಕಿಡಿ, ಮಂಡ್ಯದಲ್ಲಿ ಸಿಟಿ ರವಿ ಸ್ಪಷ್ಟನೆ - ಆರೋಪ ನಿರಾಕರಿಸಿದ ಬಿಜೆಪಿ ನಾಯಕರು

ಸಿಟಿ ರವಿ ಮಾಂಸ ಸೇವಿಸಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಬಲವಾಗಿ ಖಂಡಿಸಿದೆ.

CT Ravi reaction about meat eating photo

author img

By

Published : Feb 22, 2023, 4:54 PM IST

Updated : Feb 22, 2023, 5:29 PM IST

ಸಿಟಿ ರವಿ ಅವರ ಮಾಂಸಾಹಾರ ಸೇವನೆಯ ವೈರಲ್​ ಫೋಟೋ ಬಗ್ಗೆ ಪ್ರತಿಕ್ರಿಯೆ

ಕಾರವಾರ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಮಾಂಸ ಸೇವಿಸಿ ದೇವಸ್ಥಾನಕ್ಕೆ ಭೇಟಿ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ, ಈ ಬಗ್ಗೆ ಇನ್ನೊಬ್ಬರಿಗೆ ಹೇಳುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮೊದಲು ಅವರನ್ನೇ ಪ್ರಶ್ನೆ ಮಾಡಿಕೊಳ್ಳಲಿ ಎಂದು ಕಾಂಗ್ರೆಸ್​ ಮಾಜಿ ಶಾಸಕ ಸತೀಶ್​ ಸೈಲ್​ ಕಿಡಿಕಾರಿದ್ದರು.

ಸಿ.ಟಿ. ರವಿ ಅವರು ಮಾಂಸ ಸೇವಿಸಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು​, ಶಿವಾಜಿ ಜಯಂತಿ ಆಚರಣೆ ಹಿನ್ನೆಲೆ ಸಿಟಿ ರವಿ ಅವರು ಅತಿಥಿಯಾಗಿ ಆಗಮಿಸಿದ್ದರು. ಅಂದು ಶಾಸಕ ಸುನೀಲ್​ ಅವರ ಮನೆಗೆ ತೆರಳಿ ಮಾಂಸ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದಾರೆ. ಆದರೆ, ಕೆಲವು ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಂಸ ಸೇವಿಸಿ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಸಿಟಿ ರವಿ ಆರೋಪ ಮಾಡಿದ್ದರು. ಇದೀಗ ಅದೇ ಕೆಲಸವನ್ನು ಇವರು ಮಾಡಿದ್ದಾರೆ.

ಸಿಟಿ ರವಿ ಅವರು ಧೈವಿ ಭಕ್ತರು. ಆದರೆ, ಮಾಂಸ ಸೇವಿಸಿರುವುನ್ನು ಹೇಗೆ ಮರೆತರು? ಅಥವಾ ನಾನು ಮಾಡಿದರೆ ನಡೆಯುತ್ತೆ ಎನ್ನುವ ಕಾರಣದಿಂದ ನಡೆದುಕೊಂಡಿರಬಹುದು. ಇದು ತಪ್ಪು. ಇವರು ಇನ್ನು ಮುಂದೆ ಈ ಬಗ್ಗೆ ಏನಾದರೂ ಟೀಕೆ ಟಿಪ್ಪಣಿ ಮಾಡುವುದಿದ್ದರೆ ಮೊದಲು ಆಲೋಚನೆ ಮಾಡಬೇಕು. ಯಾವ ಸಮಯದಲ್ಲಿ ಏನು ಮಾಡಿದೆ ಅನ್ನೋದನ್ನು ಮರೆತು ಏನೋನೇ ಮಾತನಾಡುತ್ತಾರೆ. ಅವರು ಅಂದು ಮಾತನಾಡಿದ್ದು ಅವರಿಗೆಯೇ ನೆನಪು ಇಲ್ಲ. ಇವತ್ತು ಬಂದು ಅದನ್ನೇ ಮಾಡಿದ್ದಾರೆ ಎಂದು ಮಾಜಿ ಶಾಸಕ ಸತೀಶ್​ ಸೈಲ್​ ಹೇಳಿದ್ದಾರೆ.

ಆರೋಪ ನಿರಾಕರಿಸಿದ ಬಿಜೆಪಿ ನಾಯಕರು: 'ಸಿಟಿ ರವಿ ಅವರು ಮಾಂಸ ಸೇವಿಸಿ ದೇವಸ್ಥಾನಕ್ಕೆ ತೆರಳಿದ್ದಾರೆ ಅನ್ನೋದು ಶುದ್ಧ ಸುಳ್ಳು. ಆ ಫೋಟೋಗಳನ್ನು ಯಾವ ಸಂದರ್ಭದಲ್ಲಿ ತೆಗೆದಿದ್ದಾರೆ ಅನ್ನೋದು ಯಾರಿಗೂ ಗೊತ್ತಿಲ್ಲ. ದೇವಸ್ಥಾನಕ್ಕೆ ಹೋಗಿ ಬಂದ ಬಳಿಕ ತೆಗೆದ ಫೋಟೋಗಳು ಇದ್ದರೂ ಇರಬಹುದು. ಅವರು ದೇವರ ಬಗ್ಗೆ ಅಪಾರವಾದ ಭಕ್ತಿ ಇಟ್ಟುಕೊಂಡವರು. ಆ ಬದ್ಧತೆ ಇರುವುರಿಂದಲೇ ಅವರು ಇದೀಗ ರಾಷ್ಟ್ರಮಟ್ಟದಲ್ಲಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಮೀನು ಸೇವಿಸಬಾರದು ಅನ್ನೋದಕ್ಕೆ ನಮ್ಮ ಆಕ್ಷೇಪವಿಲ್ಲ. ಮೀನು ನಮ್ಮ ಆಹಾರ. ತಾತ್ವಿಕ ಆಹಾರ ಸೇವಿಸಿ ದೇವಸ್ಥಾನಕ್ಕೆ ತೆರಳಬಹುದು. ಆದರೆ, ಯಾವ ಸಂದರ್ಭದಲ್ಲಿ ಸೇವಿಸಬೇಕು ಅನ್ನೋದರ ಬಗ್ಗೆ ನಮ್ಮ ವಾದವಿದೆ' ಎಂದು ಜಿಲ್ಲಾ ಬಿಜೆಪಿ ವಕ್ತಾರ ನಾಗರಾಜ ನಾಯಕ ಪ್ರತಿಕ್ರಿಯೆ ನೀಡಿದ್ದಾರೆ.

ಮಂಡ್ಯದಲ್ಲಿ ಆರೋಪಕ್ಕೆ ಸ್ಪಷ್ಟನೆ ಕೊಟ್ಟಿರುವ ಸಿಟಿ ರವಿ: ಈ ಬಗ್ಗೆ ಮಂಡ್ಯದಲ್ಲಿ ಸ್ಪಷ್ಟನೆ ನೀಡಿದ ಸಿ.ಟಿ.ರವಿ, ’’ನಾನು ಹುಟ್ಟಿರೋದೇ ಮಾಂಸ ತಿನ್ನೋ‌ ಜಾತಿಯಲ್ಲಿ. ಆದರೆ, ಮಾಂಸ ತಿಂದು ದೇವಾಲಯಕ್ಕೆ ಹೋಗಿಲ್ಲ ಎಂದಿದ್ದಾರೆ. ಭಟ್ಕಳಕ್ಕೆ ಹೋದಾಗ ನಾಗಬನ ನೋಡಲು ಕರೆದಿದ್ದರು. ಹೊಸದಾಗಿ ದೇವಾಲಯ ಕಟ್ಟಲಾಗಿತ್ತು. 45 ದಿನಗಳು ಓಪನ್ ಇರಲಿಲ್ಲ. ನಾಗಬನದ ಹೊರಾವರಣದಲ್ಲಿ ನಿಂತು ದರ್ಶನ ಪಡೆದಿದ್ದೇವೆ. ನನಗೆ ದೇವರ ಬಗ್ಗೆ ಶ್ರದ್ಧೆ ಇದೆ. ದೇವಾಲಯಕ್ಕೆ ಮಾಂಸ ತಿಂದು ಹೋಗಿಲ್ಲ. ನಾನು ಹುಟ್ಟಿರೋದೆ ಮಾಂಸ ತಿನ್ನೋ‌ ಜಾತಿಯಲ್ಲಿ. ಆದರೆ, ಮಾಂಸ ತಿಂದು ದೇವಾಲಯಕ್ಕೆ ಹೋಗಿಲ್ಲ. ಸುಮ್ಮನೆ ವಿವಾದ ಹುಟ್ಟು ಹಾಕಲು ಕೆಲವರು ಹೀಗೆ ಮಾಡ್ತಿದ್ದಾರೆ. ವ್ರತ, ಪೂಜೆಗಳನ್ನ ಆಚರಿಸುವವನು ನಾನು. ದೇವರ ಬಗ್ಗೆ ಶ್ರದ್ಧೆ ಇದೆ. ಮಾಂಸ ತಿನ್ನುತ್ತೇನೆ. ಹಾಗಂತ ತಿಂದು ದಾರ್ಷ್ಟ್ಯ ತೋರಿಸಲ್ಲ’’ ಎಂದಿದ್ದಾರೆ.

ಇದನ್ನೂ ಓದಿ: ಮಹಿಳೆಯ ಕೊಂದು ಶವದ ಜೊತೆ ಫೇಸ್‌ಬುಕ್ ಲೈವ್! ಬಳಿಕ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

Last Updated : Feb 22, 2023, 5:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.