ETV Bharat / state

ಕೈ-ಕಾಲು ತೊಳೆಯಲು ಕಾಳಿ ನದಿಗೆ ಇಳಿದ ಯುವಕನನ್ನ ಎಳೆದೊಯ್ದ ಮೊಸಳೆ! - ಯುವಕನನ್ನ ಎಳೆದೊಯ್ದ ಮೊಸಳೆ

ಕೆಲಸ ಮುಗಿಸಿ ಮನೆಗೆ ಹೋಗುವ ವೇಳೆ ಕಾಳಿ ನದಿಯಲ್ಲಿ ಕೈ ತೊಳೆಯಲು ಹೋದ ವ್ಯಕ್ತಿಯೋರ್ವನನ್ನ ಮೊಸಳೆ ಎಳೆದುಕೊಂಡು ಹೋಗಿದ್ದು, ಯುವಕನಿಗಾಗಿ ಶೋಧಕಾರ್ಯ ಮುಂದುವರೆದಿದೆ.

Crocodile catch young boy in Dandeli kali river

author img

By

Published : Feb 7, 2022, 10:54 PM IST

Updated : Feb 7, 2022, 11:03 PM IST

ದಾಂಡೇಲಿ(ಕಾರವಾರ): ಕೈ-ಕಾಲು ತೊಳೆಯಲು ಕಾಳಿ ನದಿಗೆ ಇಳಿದಿದ್ದ ಯುವಕನನ್ನು ಮೊಸಳೆ ಎಳೆದೊಯ್ದಿರುವ ಘಟನೆ ದಾಂಡೇಲಿ ಬಳಿಯ ಕಾಳಿ ನದಿಯಲ್ಲಿ ಇಂದು ಸಂಜೆ ನಡೆದಿದೆ. ದಾಂಡೇಲಿಯ ಪಟೇಲ್ ನಗರದ ಹರ್ಷದ್ ಖಾನ್ ರಾಯಚೂರು (22) ಮೊಸಳೆ ದಾಳಿಗೆ ಬಲಿಯಾದ ಯುವಕ.

ಕೈ-ಕಾಲು ತೊಳೆಯಲು ಕಾಳಿ ನದಿಗೆ ಇಳಿದ ಯುವಕನನ್ನ ಎಳೆದೊಯ್ದ ಮೊಸಳೆ!

ಪ್ರತಿ ನಿತ್ಯದಂತೆ ಕೆಲಸ ಮುಗಿಸಿ ಕೈಕಾಲು ತೊಳೆಯಲು ಕಾಳಿ ನದಿ ದಡಕ್ಕೆ ತೆರಳಿದ ಯುವಕ ನೀರಿಗೆ ಕೈ ಹಾಕುತ್ತಿದ್ದಂತೆ ಮೊಸಳೆ ಎಳೆದೊಯ್ದಿದೆ. ನೋಡು ನೋಡುತ್ತಿದ್ದಂತೆ ಯುವಕನನ್ನು ಮೊಸಳೆ ನೀರಿನಲ್ಲಿ ಮುಳುಗಿಸಿದೆ ಎಂದು ಪ್ರತ್ಯಕ್ಷದರ್ಶಿ ಹಾಗೂ ಮೃತ ಯುವಕನ ಸ್ನೇಹಿತ ಮಾಹಿತಿ ನೀಡಿದ್ದಾನೆ.

ಇದನ್ನೂ ಓದಿರಿ: ಎದೆ ನೋವಿನಿಂದ ಶಾಸಕ ತನ್ವೀರ್ ಸೇಠ್ ಆಸ್ಪತ್ರೆಗೆ ದಾಖಲು

ಘಟನೆ ಬಗ್ಗೆ ಗೊತ್ತಾಗುತ್ತಿದ್ದಂತೆ ಅರಣ್ಯಾಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಯುವಕನ ದೇಹಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಇನ್ನು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಕೂಡ ಭೇಟಿ‌ ನೀಡಿದ್ದು, ಮಾಹಿತಿ ಪಡೆದು ಯುವಕನಿಗೆ ಹುಡುಕಾಟ ನಡೆಸಿದ್ದಾರೆ. ಈ ಬಗ್ಗೆ ದಾಂಡೇಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಅಕ್ಟೋಬರ್​ ತಿಂಗಳಲ್ಲೂ ಇಂತಹದೊಂದು ಘಟನೆ ನಡೆದಿತ್ತು.

Last Updated : Feb 7, 2022, 11:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.