ETV Bharat / state

ಕಾರವಾರ: ಕಾಳಿ ನದಿಯಲ್ಲಿ ಈಜಲು ಹೋದ ವ್ಯಕ್ತಿಯನ್ನು ಹೊತ್ತೊಯ್ದ ಮೊಸಳೆ - Swim In Kali River

ಕುಳಗಿ ರಸ್ತೆಯ ಈಶ್ವರ ದೇವಸ್ಥಾನದ ಹತ್ತಿರ ಕಾಳಿ ನದಿಯಲ್ಲಿ ಗುರುವಾರ ಬೆಳಗ್ಗೆ ಈಜಲು ನೀರಿಗಿಳಿದ ವ್ಯಕ್ತಿಯನ್ನು ಮೊಸಳೆ ಎಳೆದುಕೊಂಡು ಹೋಗಿದೆ.

Crocodile carrying a man
ಗುಜರಾತ್ ಮೂಲದ ದಾಂಡೇಲಿ ನಿವಾಸಿ ಪೀತಾಂಬರದಾಸ್
author img

By

Published : Nov 3, 2022, 2:22 PM IST

Updated : Nov 3, 2022, 3:49 PM IST

ಕಾರವಾರ: ಕಾಳಿ ನದಿಯಲ್ಲಿ ಈಜಲು ಹೋದ ವ್ಯಕ್ತಿಯನ್ನು ಮೊಸಳೆಗಳು ಎಳೆದೊಯ್ದ ಘಟನೆ ದಾಂಡೇಲಿಯ ಕುಳಗಿ ರಸ್ತೆಯ ಈಶ್ವರ ದೇವಸ್ಥಾನದ ಬಳಿ ಗುರುವಾರ ಬೆಳಗ್ಗೆ ನಡೆದಿದೆ. ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯ ನಿರಂತರ ಹುಡುಕಾಟ ನಡೆಸಿದ ಬಳಿಕ ಶವ ಪತ್ತೆಯಾಗಿದೆ.

ಈಜಲು ಹೋದ ವ್ಯಕ್ತಿಯನ್ನು ಹೊತ್ತೊಯ್ದ ಮೊಸಳೆ

ಗುಜರಾತ್ ಮೂಲದ ದಾಂಡೇಲಿ ನಿವಾಸಿ ಪೀತಾಂಬರದಾಸ್ ಮೃತಪಟ್ಟ ವ್ಯಕ್ತಿ. ಕಾಳಿ ನದಿಯಲ್ಲಿ ಈಜಲು ತೆರಳಿದ್ದಾಗ ದಂಡೆಯ ಮೇಲೆ ಚಪ್ಪಲಿ, ಬಟ್ಟೆ ಇಟ್ಟು ನದಿಗೆ ಇಳಿದಿದ್ದಾರೆ. ಈ ವೇಳೆ, ಎರಡು ಮೊಸಳೆಗಳು ಈತನ ಮೇಲೆ ದಾಳಿ ನಡೆಸಿ ಹೊತ್ತೊಯ್ದಿವೆ. ಇದನ್ನು ಸ್ಥಳೀಯ ಜನರು ನೋಡಿ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಅದರಂತೆ ನಾಪತ್ತೆಯಾದ ವ್ಯಕ್ತಿಗೆ ನಿರಂತರ ಹುಡುಕಾಟ ನಡೆಸಲಾಗಿದೆ. ಸಿಬ್ಬಂದಿ ಕೊನೆಗೂ ಮೃತದೇಹವನ್ನು ಹೊರತೆಗೆದಿದ್ದಾರೆ. ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 2 ತಾಸು ಮೊಸಳೆಯೊಂದಿಗೆ ಯುವಕನ ಹೋರಾಟ.. ಕೊನೆಗೆ ಆಗಿದ್ದೇನು? ಭಯಾನಕ ವಿಡಿಯೋ

Last Updated : Nov 3, 2022, 3:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.