ETV Bharat / state

ಪ್ರಮುಖ ಘಟ್ಟದತ್ತ ತಲುಪಿದ ಮುಂಡಗೋಡ ಕಟ್ಟಿಗೆ ಡಿಪೋ ಪ್ರಕರಣ; ತನಿಖೆ ತೀವ್ರ

ಮುಂಡಗೋಡ ಸರ್ಕಾರಿ ಮರಮಟ್ಟು ಸಂಗ್ರಹಾಲಯದಿಂದ ಅಕ್ರಮ ಮರಗಳ ಸಾಗಣೆಯಲ್ಲಿ ಅಧಿಕಾರಿಗಳೇ ಶಾಮೀಲಾಗಿರುವ ಶಂಕೆ ಮೂಡಿದೆ.

ಮುಂಡಗೋಡ ಕಟ್ಟಿಗೆ ಡಿಪೊ ಪ್ರಕರಣ
ಮುಂಡಗೋಡ ಕಟ್ಟಿಗೆ ಡಿಪೊ ಪ್ರಕರಣ
author img

By

Published : Jul 3, 2023, 12:18 PM IST

Updated : Jul 3, 2023, 12:24 PM IST

ಮುಂಡಗೋಡ ಕಟ್ಟಿಗೆ ಡಿಪೋ ಪ್ರಕರಣ ಕುರಿತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೇಳಿಕೆ

ಶಿರಸಿ (ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಸರ್ಕಾರಿ ಮರಮಟ್ಟು ಸಂಗ್ರಹಾಲಯದಿಂದ ಅಕ್ರಮ ಮರಗಳ ಸಾಗಣೆ ಪ್ರಕರಣ ಗಂಭೀರ ಸ್ವರೂಪ ಪಡೆದಿದೆ. ಹಲವು ಅಧಿಕಾರಿಗಳ ಶಾಮೀಲಾತಿ ಕಂಡು ಬಂದಿದ್ದು, ಶಿಸ್ತು ಕ್ರಮದ ತೂಗುಗತ್ತಿ ಎದುರಾಗಿದೆ. ಪ್ರಕರಣದ ಹಿಂದೆ ಹಲವು ಹಿರಿಯ ಅಧಿಕಾರಿಗಳು, ಅರಣ್ಯ ಇಲಾಖೆಯ ಸಿಬ್ಬಂದಿ ಇರುವ ಅನುಮಾನ ವ್ಯಕ್ತವಾಗಿದ್ದು, ತನಿಖೆ ತೀವ್ರಗೊಂಡಿದೆ.‌

ಕಳೆದ ಕೆಲವು ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ 2 ಲಾರಿಸಹಿತ ಬೃಹತ್ ನಾಟಾಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಕುರಿತು ವಿಚಾರಣೆ ನಡೆದಾಗ ಬಗೆದಷ್ಟು ಮಾಹಿತಿಗಳು ಹೊರಬರುತ್ತಿವೆ. ಮುಂಡಗೋಡಿನ ಕಟ್ಟಿಗೆ ಡಿಪೊದಿಂದ ಈ ಅಕ್ರಮ ನಾಟಾಗಳ ಸಾಗಣೆ ಮಾಡಲಾಗುತ್ತಿತ್ತು.

ಇದೀಗ ವಿಚಾರಣೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳೇ ಶಾಮಿಲಾಗಿರುವ ಬಗ್ಗೆ ಮಾಹಿತಿಗಳು ಹೊರಬರುತ್ತಿವೆ. ಮೂಲಗಳ ಪ್ರಕಾರ, ಅಕ್ರಮ ಮರ ಸಾಗಣೆ ಪ್ರಕರಣ ಬಹಳ ಹಿಂದಿನಿಂದಲೂ ನಡೆದಿದೆ ಎನ್ನಲಾಗಿದ್ದು, ಅರಣ್ಯದಲ್ಲಿ ಮರಗಳ ಕಟಾವು ಮಾಡುವ ಸಂದರ್ಭದಲ್ಲಿಯೇ ಪರವಾನಗಿ ಪಡೆದ ಮರಗಳ ಜೊತೆ ಕೆಲವು ಮರಗಳನ್ನು ಅಕ್ರಮವಾಗಿ ಕಟಾವು ಮಾಡಿ ಡಿಪೊದಲ್ಲಿ ಇಡಲಾಗುತ್ತಿತ್ತು.

ಅದನ್ನು ನಂತರ ಹರಾಜು ಆದ ಮರಗಳ ಜೊತೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ವರ್ಷದಲ್ಲಿ ಮುಂಡಗೋಡ ಡಿಪೋದಲ್ಲಿ ಎರಡು ಬಾರಿ ಹರಾಜು ಪ್ರಕ್ರಿಯೆ ನಡೆಯುತ್ತದೆ. ಹರಾಜು ಆದ ಕಟ್ಟಿಗೆ ಸಾಗಿಸುವ ಸಂದರ್ಭದಲ್ಲಿ ಬೆಲೆಬಾಳುವ ಮರಗಳನ್ನು ಸಾಗಿಸಲಾಗುತ್ತಿತ್ತು ಅನ್ನೋ ಆರೋಪ ಕೇಳಿಬಂದಿದೆ.

ಈಗಾಗಲೇ ಮರಮಟ್ಟು ಸಂಗ್ರಹಾಲಯದ ಆರ್​ಎಫ್‍ಒ ಜಿ.ಟಿ. ರೇವಣಕರ್ ಸೇರಿದಂತೆ 5 ಡಿಆರ್​ಎಫ್‍ಒಗಳನ್ನು ಅಮಾನತು ಮಾಡಲಾಗಿದೆ. ಆದರೆ ಈ ಪ್ರಕರಣದಲ್ಲಿ ಹಲವು ಪ್ರಭಾವೀ ಖಾಸಗೀ ವ್ಯಕ್ತಿಗಳ ಶಾಮೀಲಾತಿಯೂ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇದರಲ್ಲಿ ಟಿಂಬರ್ ಏಜೆಂಟ್ ಆಗಿ ಕೆಲಸ ಮಾಡುವ ಅನೇಕರು ಅಕ್ರಮದ ಹಿಂದೆ ಇದ್ದಾರೆ ಅಂತ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ಜೊತೆಗೆ ಮುಂಡಗೋಡ ಮರ ಮಟ್ಟು ಸಂಗ್ರಹಾಲಯಕ್ಕೆ ಹಲವು ಬಾರಿ ಬೆಂಕಿ ಬಿದ್ದ ಪ್ರಕರಣಗಳು ದಾಖಲಾಗಿವೆ. ಪ್ರತಿ ಬಾರಿಯೂ ಬೆಲೆಬಾಳುವ ಮರಗಳನ್ನು ಸಂಗ್ರಹಿಸಿಟ್ಟ ಪ್ರದೇಶಕ್ಕೇ ಬೆಂಕಿ ಬೀಳುತ್ತಿದ್ದು, ಹಲವು ಮರಗಳು ಸುಟ್ಟು ಹೋದ ಬಗ್ಗೆ ಎಫ್‍ಐಆರ್ ದಾಖಲಾಗಿದ್ದವು. ಇದೂ ಸಹ ಅನುಮಾನಕ್ಕೆ ಕಾರಣ.

ಡಿಪೊದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಮರಗಳ ಸಾಗಣೆಯ ನಂತರ ಈ ರೀತಿಯ ಬೆಂಕಿ ಬೀಳುವ ಪ್ರಕರಣಗಳು ದಾಖಲಾಗುತ್ತಿವೆ. ಅಲ್ಲದೇ ಕೆಲವು ಮರಗಳು ಸಂಗ್ರಹಿಸಿಟ್ಟಲ್ಲೇ ಹಾಳಾಗಿವೆ ಎನ್ನುವ ಬಗ್ಗೆಯೂ ದಾಖಲೆಗಳು ಸೃಷ್ಟಿಯಾಗುತ್ತವೆ ಎನ್ನುವ ದೂರುಗಳೂ ಸ್ಥಳೀಯರಿಂದ ಕೇಳಿ ಬಂದಿದೆ. ಟಿಂಬರ್ ಡಿಪೊದಿಂದ ಕಟ್ಟಿಗೆ ಸಾಗಿಸಿದ ಪ್ರಕರಣಕ್ಕೆ ಸಂಬಂದಿಸಿದಂತೆ ಬೆಂಗಳೂರಿನ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳ ತಂಡ ಟಿಂಬರ್ ಡಿಪೊಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ತನಿಖೆ ಆರಂಭಿಸಿದ್ದಾರೆ.

ಬೆಂಗಳೂರಿನ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಪ್) ಕುಮಾರ ಪುಷ್ಕರ ಅವರ ತಂಡದವರು ಡಿಪೊದ ಅಧಿಕಾರಿ ಹಾಗೂ ಸಿಬ್ಬಂದಿಗಳಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಇಲಾಖೆಯಲ್ಲಿರುವ ಪ್ರಕರಣಕ್ಕೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಿ ಡೀಪೋದಲ್ಲಿರುವ ನಾಟಾಗಳನ್ನು ಪರಿಶೀಲಿಸಿದ್ದಾರೆ. ಸಣ್ಣಪುಟ್ಟ ಪ್ರಕಣಗಳಾಗಿದ್ದರೆ ಇಂತಹ ಮೇಲ್ಮಟ್ಟದ ಅಧಿಕಾರಿಗಳು ಇಲ್ಲಿಗೆ ಬರುತ್ತಿರಲಿಲ್ಲ. ಇದೊಂದು ಗಂಭೀರ ಪ್ರಕರಣ ಆಗಿರುವುದರಿಂದ ಪ್ರಕರಣವಾದ ದಿನದಿಂದಲೇ ಡಿಎಫ್ ಓ, ಸಿಸಿಎಫ್ ಅವರಿಂದ ದಿನನಿತ್ಯ ಮಾಹಿತಿ ಸಂಗ್ರಹಿಸಿದ್ದರು.

ಕೆಲ ದಿನಗಳ ಹಿಂದೆ ಶಿರಸಿಯ ಎಕ್ಕಂಬಿ ಚೆಕ್ ಪೋಸ್ಟ್ ನಲ್ಲಿ ಎರಡು ಲಾರಿ ಸಿಜ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅದರಲ್ಲಿ ಪರವಾನಗಿ ಇಲ್ಲದೆ ನಾಟಾಗಳು ಇದ್ದವು. ಈ ನಾಟಾಗಳು ಮುಂಡಗೋಡದ ಟಿಂಬರ್ ಡೀಪೋದಿಂದ ಬಂದಿದ್ದವು. ಇಲ್ಲಿಯ ಡೀಪೋದಲ್ಲಿ ಏನೂ ನಡೆದಿದೆ ಅಂತ ತಿಳಿದುಕೊಳ್ಳಲು ಇಲಾಖೆಯ ಹಿರಿಯ ಅಧಿಕಾರಿಗಳು ಬಂದಿದ್ದರು. ಮುಖ್ಯವಾಗಿ ಒಂದು ವರ್ಷದಲ್ಲಿ ಈ ಟಿಂಬರ್ ಡಿಪೊಕ್ಕೆ ಹೊಸದಾಗಿ ಎಷ್ಟು ಕಟ್ಟಿಗೆ ಹಾಗೂ ನಾಟಾಗಳು ಬಂದಿವೆ. ಎಷ್ಟು ನಾಟಾಗಳು ಉಳಿದಿವೆ ಹಾಗೂ ಹರಾಜಾಗಿವೆ ಮತ್ತು ಹೊಸದಾಗಿ ಬಂದ ನಾಟಾ ಕಟ್ಟಿಗೆಗಳ ಪರಿಶೀಲನೆ ನಡೆಸಲಾಗುತ್ತಿದೆ.

ಇದರ ಮಧ್ಯೆ ಇಲಾಖೆಯ ಮಟ್ಟದಲ್ಲಿ ತನಿಖೆ ನಡೆಸಲಾಗುತ್ತಿದೆ. ಲಾರಿಗಳಲ್ಲಿ ಅನಧಿಕೃತವಾಗಿ ಬಂದ ಕಟ್ಟಿಗೆ ಎಲ್ಲಿಂದ ಬಂತು ಎಲ್ಲಿಗೆ ಒಯ್ಯಲಾಗುತ್ತಿತ್ತು ಎಂದು ಸೂಕ್ತವಾಗಿ ತನಿಖೆಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಟಿಂಬರ್ ಡಿಪೊಕ್ಕೆ ವೃತ್ತದ ನೋಡಲ್ ಅಧಿಕಾರಿ ಕುಮಾರ ಪುಷ್ಕರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇಲಾಖೆಯವರೇ ಈ ಪ್ರಕರಣದಲ್ಲಿ ಭಾಗಿಯಾಗಿರುವುದರಿಂದ ಈ ಪ್ರಕರಣವನ್ನು ಮುಂದಿನ ದಿನಗಳಲ್ಲಿ ಸೂಕ್ತ ತನಿಖೆ ಮಾಡಿ ಇದರ ಸಂಪೂರ್ಣವಾದ ವರದಿಯನ್ನು ನಾವು ಇಲಾಖೆಗೆ ಸಲ್ಲಿಸುತ್ತೇವೆ ಅಂತಾರೆ ಕೆನರಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ.

ಅರಣ್ಯ ಜಿಲ್ಲೆ ಎನಿಸಿಕೊಂಡಿರೋ ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಜನ ಅಡಿಗೆ ಒಲೆಗಾಗಿ ಕಟ್ಟಿಗೆ ಕಡಿದರು ಕೂಡ ಹಿಡಿದು ಕೇಸ್ ದಾಖಲಿಸುವ ಇಲಾಖೆ, ಈಗ ಇಲಾಖೆಯಲ್ಲಿರೋ ಅಧಿಕಾರಿಗಳೇ ಇಂತಹ ಪ್ರಕರಣದಲ್ಲಿ ಭಾಗಿಯಾಗಿರೋದು ಇಲಾಖೆಗೆ ಇರಿಸು ಮುರುಸು ತಂದಿದೆ. ಈ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ನಡೆದು ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ಆಗುವುದರಿಂದ ಮುಂದೆ ಇಂತಹ ಪ್ರಕರಣಗಳಿಗೆ ಕಡಿವಾಣ ಬೀಳುತ್ತೆ ಅನ್ನುವುದು ಸಾರ್ವಜನಿಕರ ಅಭಿಪ್ರಾಯ.

ಇದನ್ನೂ ಓದಿ: ಕಲಬುರಗಿಯಲ್ಲಿ ಅನಧಿಕೃತ ಗುಟಕಾ ತಯಾರಿಕಾ ಘಟಕದ ಮೇಲೆ‌ ದಾಳಿ; 20 ಲಕ್ಷ ಮೌಲ್ಯದ ಗುಟಕಾ ಜಪ್ತಿ, 19 ಜನ ವಶಕ್ಕೆ

Last Updated : Jul 3, 2023, 12:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.