ETV Bharat / state

ಭಟ್ಕಳ: ಕಾರಲ್ಲಿ ಬಂದು ಕ್ಷಣಾರ್ಧದಲ್ಲಿ ಹಸು ಕಳ್ಳತನ ಮಾಡಿದ ಖತರ್ನಾಕ್​ಗಳು - ಗೋವುಕಳ್ಳತನ ಸಿಸಿಟಿವಿಯಲ್ಲಿ ಸೆರೆ

ಭಟ್ಕಳದ ಬೀದಿಯೊಂದರಲ್ಲಿ ಗೋಕಳ್ಳರು ಬೆಳಗಿನ ಜಾವ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಹಸುವನ್ನು ಕೈಕಾಲು ಕಟ್ಟಿ ಕಾರಿನಲ್ಲಿ ಹಾಕಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

cow theft  captured in cctv
ಭಟ್ಕಳದಲ್ಲಿ ಮುಂಜಾನೆ ಗೋ ಕಳ್ಳತನ
author img

By

Published : Aug 31, 2020, 8:58 PM IST

ಭಟ್ಕಳ: ತಾಲೂಕಿನ ವಿ.ವಿ ರೋಡ್​​ನಲ್ಲಿ ಮುಂಜಾನೆ ಕಾರಿನಲ್ಲಿ ಬಂದು ಗೋವುಗಳನ್ನು ಕಳ್ಳತನ ಮಾಡುತ್ತಿದ್ದ ದೃಶ್ಯ ಸಿ.ಸಿ ಟಿವಿಯಲ್ಲಿ ಸೆರೆಯಾಗಿದೆ.

ಭಟ್ಕಳದಲ್ಲಿ ಮುಂಜಾನೆ ಗೋ ಕಳ್ಳತನ

ಆ.28 ರ ಮುಂಜಾನೆ 4.30 ಗಂಟೆಯ ಸುಮಾರಿಗೆ ನಂಬರ್​​ ಪ್ಲೇಟ್ ಇಲ್ಲದ ಬಿಳಿ ಬಣ್ಣದ ಕಾರಿನಲ್ಲಿ ನಾಲ್ವರು ಗೋ ಕಳ್ಳರು ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ದನವನ್ನು ಕೈಕಾಲು ಕಟ್ಟಿ ಕಾರಿನ ಹಿಂಬದಿಯಲ್ಲಿ ತುಂಬುತ್ತಿರುವ ದೃಶ್ಯ ಇಲ್ಲಿನ ವಡೇರ ಮಠ ದೇವಸ್ಥಾನದ ಸಿ.ಸಿ ಟಿವಿಯಲ್ಲಿ ಸೆರೆಯಾಗಿದೆ. ಮುಂಜಾನೆ 4.30 ರಿಂದ 4.45 ರ ವೇಳೆ ಈ ಗೋ ಕಳ್ಳತನದ ದೃಶ್ಯ ಸೆರೆಯಾಗಿದ್ದು. ಕಳ್ಳತನ ಮಾಡುತ್ತಿರುವ ಸಮಯದಲ್ಲಿ ಅದೇ ರಸ್ತೆಯಲ್ಲಿ ಬೈಕ್​​ನಲ್ಲಿ ಬಂದ ಹಾಲು ಮಾರಾಟ ಮಾಡುವ ವ್ಯಕ್ತಿಯನ್ನು ಹೆದರಿಸಿ ಓಡಿಸಿದ ಘಟನೆ ಕೂಡ ರೆಕಾರ್ಡ್​ ಆಗಿದೆ.

ಈ ಬಗ್ಗೆ ಹಾಲು ಮಾರಾಟ ಮಾಡಲು ಹೋಗುತ್ತಿದ್ದ (ಪ್ರತ್ಯಕ್ಷದರ್ಶಿ) ವ್ಯಕ್ತಿ ಅಲ್ಲಿನ ಅಕ್ಕಪಕ್ಕದವರಿಗೆ ತಿಳಿಸಿದ್ದಾನೆ. ಸ್ಥಳೀಯರು ಅಲ್ಲಿಯೇ ಪಕ್ಕದಲ್ಲಿದ್ದ ದೇವಸ್ಥಾನದ ಸಿಸಿಟಿವಿ ಪರಿಶೀಲಿಸಿದಾಗ ಗೋ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.