ETV Bharat / state

ಉಪ್ಪು ಉದ್ಯಮಕ್ಕೂ ಪೆಟ್ಟು ಕೊಟ್ಟ ಕೋವಿಡ್‌:  ರಫ್ತಾಗದೇ ಗೋಕರ್ಣದಲ್ಲಿದೆ  ಉಪ್ಪಿನ ರಾಶಿ

ಲಾಕ್‌ಡೌನ್‌ನಿಂದಾಗಿ ಕೆಲದಿನಗಳ ಮಟ್ಟಿಗೆ ಸ್ಥಗಿತಗೊಂಡಿದ್ದ ಉಪ್ಪು ಉತ್ಪಾದನೆ ಉದ್ಯಮಕ್ಕೆ ಅನುಮತಿ ನೀಡಲಾಗಿದೆ. ಅತ್ಯವಶ್ಯಕ ವಸ್ತುಗಳ ಪಟ್ಟಿಯಲ್ಲಿ ಬರುವುದರಿಂದ ಉತ್ಪಾದನೆ ಆರಂಭಿಸಲಾಗಿದ್ದು, ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಸಾಣಿಕಟ್ಟಾದ ಉಪ್ಪಿನ ಆಗರದಲ್ಲಿ ರಪ್ತು ಮಾಡಲಾಗದೇ ರಾಶಿ ರಾಶಿ ಉಪ್ಪು ಶೇಖರಣೆಗೊಂಡಿದೆ.

covid-19-effected-for-salt-business-in-uttara-kannda-district
ಉಪ್ಪು ಉದ್ಯಮಕ್ಕೂ ಪೆಟ್ಟು ಕೊಟ್ಟ ಕೋವಿಡ್‌; ರಪ್ತಾಗದೆ ಗೋಕರಣದಲ್ಲಿದೆ ಉಪ್ಪಿನ ರಾಶಿ
author img

By

Published : Jun 3, 2020, 2:43 PM IST

ಕಾರವಾರ: ಉಪ್ಪು ಜೀವನಾವಶ್ಯಕ ವಸ್ತುಗಳಲ್ಲಿ ಒಂದು. ಅದರಲ್ಲಿಯೂ ಪ್ರಾಕೃತಿಕವಾಗಿ ಬೆಳೆಯುವ ಉಪ್ಪಿಗೆ ಎಲ್ಲಿಲ್ಲದ ಬೇಡಿಕೆ. ಆದರೆ, ಇಡೀ ವಿಶ್ವವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ ವೈರಸ್ ಉಪ್ಪಿನ ಉದ್ಯಮಕ್ಕೂ ಪೆಟ್ಟು ನೀಡಿದೆ. ಗೋಕರ್ಣದ ಸಾಣಿಕಟ್ಟಾದ ಉಪ್ಪಿನ ಆಗರದಲ್ಲಿ ಸಮಯಕ್ಕೆ ಸರಿಯಾಗಿ ಉಪ್ಪು ರಫ್ತಾಗದೇ ರಾಶಿ ರಾಶಿ ಉಪ್ಪು ಶೇಖರಣೆಗೊಂಡಿದೆ.

ರಫ್ತಾಗದೇ ಗೋಕರ್ಣದಲ್ಲಿದೆ ಉಪ್ಪಿನ ರಾಶಿ

ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಸಾಣಿಕಟ್ಟಾದಲ್ಲಿ ಪ್ರಾಕೃತಿಕವಾಗಿ ಬೆಳೆಯುವ ಉಪ್ಪು ಜಿಲ್ಲೆ ಮಾತ್ರವಲ್ಲದೇ ಹೊರ ಜಿಲ್ಲೆಗಳಲ್ಲಿ ಅತಿ ಹೆಚ್ಚು ಬೇಡಿಕೆ ಇಟ್ಟುಕೊಂಡಿದೆ. 1,720 ರಿಂದಲೇ ಇಲ್ಲಿನ ಸುತ್ತಮುತ್ತಲಿನ 50 ಎಕರೆ ಪ್ರದೇಶದಲ್ಲಿ ಉತ್ಪಾದಿಸಲಾಗುತ್ತಿದ್ದ ಉಪ್ಪು ಇದೀಗ 1952ರಲ್ಲಿ ಆರಂಭಗೊಂಡ ನಾಗರಬೈಲ್ ಉಪ್ಪು ತಯಾರಕರ ಸಹಕಾರಿ ಸಂಘದ ಮೂಲಕ ಸುಮಾರು 450 ಎಕರೆ ಪ್ರದೇಶದಲ್ಲಿ ಉಪ್ಪು ಬೆಳೆಯಲಾಗುತ್ತಿದೆ.

ಸಾಮಾನ್ಯವಾಗಿ ಸೆಪ್ಟೆಂಬರ್ - ಅಕ್ಟೊಬರ್ ತಿಂಗಳಿನಲ್ಲಿ ಆರಂಭವಾಗುತ್ತಿದ್ದ ಉಪ್ಪು ತಯಾರಿಕೆ ಕಳೆದ ಬಾರಿ ಸುರಿದ ಮಹಾಮಳೆಯಿಂದಾಗಿ ಉತ್ಪಾದನೆ ತಡವಾಗಿ ಶುರುವಾಗಿತ್ತು. ಇದರ ಬೆನ್ನಲ್ಲೆ ರಾಜ್ಯಕ್ಕೂ ಕೊರೊನಾ ವಕ್ಕರಿಸಿದ ಪರಿಣಾಮ ಕೆಲ ದಿನಗಳ ಕಾಲ ಉಪ್ಪು ಉತ್ಪಾದನೆಯೇ ಬಂದಾಗುವಂತಾಗಿತ್ತು. ಆದರೆ, ಜೀವನಾವಶ್ಯಕ ವಸ್ತುಗಳಲ್ಲಿ ಬರುವ ಕಾರಣ ಉಪ್ಪು ಉತ್ಪಾದನೆ ಆರಂಭಿಸಲಾಗಿತ್ತು.

ಅನುಮತಿ ಸಿಕ್ಕ ಬಳಿಕ ನಿರಂತರವಾಗಿ ಉಪ್ಪಿನ ಉತ್ಪಾದನೆಯಾಗುತ್ತಿದೆ. ಸುಮಾರು 7 ಮೆಟ್ರಿಕ್ ಟನ್ ಉತ್ಪಾದನೆಯಾಗಿದೆ. ಮಳೆ ಬಾರದಿದ್ದರೆ ಇನ್ನಷ್ಟು ದಿನ ಉತ್ಪಾದನೆ ಸಾಧ್ಯವಿದೆ ಎನ್ನುತ್ತಾರೆ, ಉಪ್ಪಿನ ಉತ್ಪಾದನೆ ವಿಭಾಗದ ಮುಖ್ಯಸ್ಥರು. ಇನ್ನು, ಇಲ್ಲಿ ಉತ್ಪಾದನೆಯಾದ ಉಪ್ಪನ್ನು ಉತ್ತರಕನ್ನಡ, ಗದಗ, ಹಾವೇರಿ, ಹುಬ್ಬಳ್ಳಿ, ಧಾರವಾಡ ಭಾಗಗಳಿಗೆ ರಪ್ತು ಮಾಡಲಾಗುತ್ತದೆ. ಆದರೆ, ಈ ಭಾರಿ ಕೆಲ ದಿನಗಳವರೆಗೆ ರಪ್ತಿಗೆ ಲಾಕ್ ಡೌನ್ ಅಡ್ಡಿಯಾಗಿತ್ತು.

ಆದರೆ, ನಿರಂತರವಾಗಿ ಉಪ್ಪು ಉತ್ಪಾದನೆಯಾದ ಪರಿಣಾಮ ಸಾಣಿಕಟ್ಟಾದ ಉಪ್ಪಿನ ಶೇಖರಣೆ ಮನೆಗಳು ತುಂಬಿ ಹೊರಗಡೆ ರಾಶಿ ಮಾಡಲಾಗುತ್ತಿದೆ. ಹೀಗೆ ತಯಾರಾದ ಉಪ್ಪು ಸಂಗ್ರಹಣೆ ದೊಡ್ಡ ತಲೆನೋವಾಗಿದೆ. ಆದರೆ, ಎಷ್ಟೇ ಉಪ್ಪು ತಯಾರಾದರೂ ಅದನ್ನು ಜೋಪಾನವಾಗಿ ಶೇಖರಣೆ ಮಾಡಿದಲ್ಲಿ ಮಳೆಗಾಲ ಹಾಗೂ ಮಳೆಗಾಲ ಮುಗಿದ ಬಳಿಕ ಇದನ್ನು ಬಳಕೆ ಮಾಡಿಕೊಳ್ಳಬಹುದು. ಅದರಲ್ಲಿಯೂ ಇತ್ತಿಚೀನ ದಿನಗಳಲ್ಲಿ ಪ್ರಾಕೃತಿಕವಾಗಿ ಬೆಳೆಯುವ ಉಪ್ಪನ್ನು ಇಷ್ಟಪಡುವ ಕಾರಣ ಹೆಚ್ಚು ಬೇಡಿಕೆ ಇದೆ ಎನ್ನುತ್ತಾರೆ ಉಪ್ಪು ಮಾರಾಟ ವಿಭಾಗದ ವ್ಯವಸ್ಥಾಪಕರಾದ ನವೀನ ನಾಡಕರ್ಣಿ.

ಹಲವು ಶತ ಶತಮಾನಗಳಿಂದ ಉತ್ಪಾದಿಸಲಾಗುತ್ತಿರುವ ಉಪ್ಪಿಗೂ ಕೊರೊನಾ ಅಡ್ಡಿಯಾಗಿದೆ. ಆದರೆ, ಉಪ್ಪು ಉತ್ಪಾದನಾ ಘಟಕಗಳಲ್ಲಿ ಕೆಲಸ ಮಾಡುವವರಿಗೆ ಲಾಕ್ ಡೌನ್ ಮಧ್ಯದಲ್ಲಿ ಸ್ವಲ್ಪ ದಿನ ಕೆಲಸ ಇಲ್ಲದಂತಾದರೂ ಬಳಿಕ ನಿರಂತರವಾಗಿ ಉತ್ಪಾದನೆ ನಡೆದಿರುವುದು ಉದ್ಯೋಗ ಸಿಕ್ಕಂತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.