ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿಂದು ಒಂದೇ ದಿನ 35 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 333ಕ್ಕೆ ಏರಿಕೆಯಾಗಿದೆ.
ಜಿಲ್ಲೆಯ ಭಟ್ಕಳಕ್ಕೆ ದುಬೈನಿಂದ ವಾಪಸಾಗಿದ್ದ 33 ವರ್ಷದ ಪುರುಷ, 22 ವರ್ಷದ ಯುವತಿ, 42 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ವಿಜಯವಾಡದಿಂದ ವಾಪಸ್ ಆಗಿದ್ದ 2 ವರ್ಷದ ಬಾಲಕಿ, 13 ವರ್ಷದ ಬಾಲಕಿ, 2 ವರ್ಷದ ಬಾಲಕಿ ಹಾಗೂ 8 ವರ್ಷದ ಬಾಲಕಿ, 28 ವರ್ಷದ ಪುರುಷ, 15 ವರ್ಷದ ಯುವಕ, 25 ವರ್ಷದ ಮಹಿಳೆ, 4 ವರ್ಷದ ಬಾಲಕ ಹಾಗೂ 36 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಮಹಾರಾಷ್ಟ್ರದಿಂದ ವಾಪಸ್ ಆಗಿದ್ದ 46 ವರ್ಷದ ಪುರುಷ, ಉತ್ತರ ಪ್ರದೇಶದಿಂದ ವಾಪಸ್ ಆಗಿದ್ದ 18, 22 ವರ್ಷದ ಇಬ್ಬರು ಯುವಕರು, 35 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಹೊನ್ನಾವರಕ್ಕೆ ಉಡುಪಿ ಜಿಲ್ಲೆಯ ಬೈಂದೂರಿನಿಂದ ವಾಪಸ್ ಆಗಿದ್ದ 28 ವರ್ಷದ ಮಹಿಳೆ, 7, 5 ವರ್ಷದ ಬಾಲಕರು, ಮಹಾರಾಷ್ಟ್ರದಿಂದ ವಾಪಸ್ ಆಗಿದ್ದ 51 ವರ್ಷದ ಮಹಿಳೆ, 21 ವರ್ಷದ ಯುವತಿಗೆ ಸೋಂಕು ದೃಢಪಟ್ಟಿದೆ. ಶಿರಸಿಯಲ್ಲಿ ಸೋಂಕಿತ ಕಳ್ಳನ ಸಂಪರ್ಕಕ್ಕೆ ಬಂದಿದ್ದ 35, 26, 51, 30, 20 ವರ್ಷದ ವ್ಯಕ್ತಿಗಳಿಗೆ ಸೋಂಕು ತಗುಲಿದೆ. ಶಿರಸಿ ತಾಲೂಕು ಆಸ್ಪತ್ರೆ ಸಿಬ್ಬಂದಿ 47 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಅಂಕೋಲಾ ತಾಲೂಕಿನ ಅಗ್ರಗೋಣದಲ್ಲಿ ಸೋಂಕು ದೃಢಪಟ್ಟಿದ್ದವರ ಸಂಪರ್ಕಕ್ಕೆ ಬಂದಿದ್ದ 26 ವರ್ಷದ ಬೀಟ್ ಪೊಲೀಸ್, ಮಂಗಳೂರಿನಿಂದ ವಾಪಸ್ ಆಗಿದ್ದ 22 ವರ್ಷದ ಯುವಕ, 20, 21, ವರ್ಷದ ಇಬ್ಬರು ಯುವಕರು, 91 ವರ್ಷದ ವೃದ್ಧೆ, 7 ವರ್ಷದ ಬಾಲಕ ಹಾಗೂ ಯಲ್ಲಾಪುರದ 16 ವರ್ಷದ ಬಾಲಕಿಗೆ ವಿಷಮಶೀತ ಜ್ವರ ಕಾಣಿಸಿಕೊಂಡಿದೆ. ಇನ್ನು ಯಲ್ಲಾಪುರದ 25 ವರ್ಷದ ಯುವಕನಿಗೆ ಸೋಂಕಿತನ ಸಂಪರ್ಕದಿಂದ ಕೊರೊನಾ ದೃಢಪಟ್ಟಿದೆ.