ETV Bharat / state

ಪೊಲೀಸ್ ಬಂದೋಬಸ್ತ್​​ನಲ್ಲಿ ನಾಗಬನಕ್ಕೆ ಕಾಂಪೌಂಡ್ ನಿರ್ಮಾಣ

ತಾಲೂಕಿನಲ್ಲಿ ಹಲವು ವರ್ಷಗಳ ಇತಿಹಾಸ ಹೊಂದಿರುವ ನಾಗಬನದ ಮುಂದೆ ಪೊಲೀಸ್​ ಬಿಗಿ ಬಂದೋಬಸ್ತ್‌ ಏರ್ಪಡಿಸಿ ಕಾಂಪೌಂಡ್ ನಿರ್ಮಾಣ ಮಾಡಲಾಯಿತು.

author img

By

Published : Apr 19, 2021, 8:29 AM IST

Construction of Nagabana Compound in Police tightening Security
ನಾಗಬನ ಕಂಪೌಂಡ ನಿರ್ಮಾಣ

ಭಟ್ಕಳ: ಹಳೆ ಬಸ್ ನಿಲ್ದಾಣದ ಸಮೀಪದ ಹಳೆಯ ನಾಗಬನ ದೇವಸ್ಥಾನದ ಕಾಂಪೌಂಡ್ ನಿರ್ಮಾಣಕ್ಕೆ ಅನ್ಯಕೋಮಿನವರ ತಕರಾರಿತ್ತು. ಹಾಗಾಗಿ, ಮುನ್ನೆಚ್ಚರಿಕಾ ಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಿ ಪೊಲೀಸ್​ ಬಿಗಿ ಬಂದೋಬಸ್ತ್‌ನಲ್ಲಿ ಕಾಂಪೌಂಡ್ ನಿರ್ಮಾಣ ಕಾರ್ಯವನ್ನು ಕೊನೆಗೂ ಪೂರ್ಣಗೊಳಿಸಲಾಯಿತು.

ನಾಗಬನಕ್ಕೆ ಕಾಂಪೌಂಡ್ ನಿರ್ಮಾಣ

ತಾಲೂಕಿನಲ್ಲಿ ಹಲವು ವರ್ಷಗಳ ಇತಿಹಾಸ ಹೊಂದಿರುವ ನಾಗಬನದ ತಡೆಗೋಡೆ ನಿರ್ಮಾಣ ಮಾಡುವ ವಿಷಯದಲ್ಲಿ ಶುಕ್ರವಾರ ಸಾಕಷ್ಟು ಪರ-ವಿರೋಧಗಳು ವ್ಯಕ್ತವಾಗಿದ್ದವು. ತಾಲೂಕಾಡಳಿತ, ಪೊಲೀಸ್​ ಇಲಾಖೆ, ಶಾಸಕ ಸುನೀಲ ನಾಯ್ಕ ಹಾಗೂ ತಂಜೀಮ್ ಮುಖಂಡರನ್ನು ಒಳಗೊಂಡಂತೆ ಸಭೆ ಕರೆದು ಸಮಸ್ಯೆಗೆ ತಾರ್ಕಿಕ ಅಂತ್ಯ ಹಾಡುವ ಪ್ರಯತ್ನ ಮಾಡಲಾಗಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಇಷ್ಟಕ್ಕೆ ಈ ವಿಚಾರ ಮುಗಿಯದೆ ತಾಲೂಕಾಡಳಿತ, ಪೊಲೀಸ್​ ಇಲಾಖೆ ರಾತ್ರಿ 10.30ರ ಸುಮಾರಿಗೆ ಮತ್ತೆ ತಂಜೀಮ್ ಮುಖಂಡರೊಂದಿಗೆ ಸಭೆ, ಮಾತುಕತೆ ನಡೆಸಿ ಕಾಂಪೌಂಡ್ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ ಮೇಲೆ ಶನಿವಾರದಂದು ಮುಂಜಾನೆಯಿಂದ ಕಾಮಗಾರಿ ಆರಂಭಿಸಲಾಯಿತು.

10-12 ಮಂದಿ ಕೆಲಸಗಾರೊಂದಿಗೆ ಕೆಲಸ ಆರಂಭಗೊಂಡಿದ್ದು, ರಾತ್ರಿ ಕಾಮಗಾರಿ ಪೂರ್ಣವಾಯಿತು.

ಇದನ್ನೂ ಓದಿ: ಕೊರೊನಾ ಕಾಲದಲ್ಲಿ ಚಿಣ್ಣರಿಗೆ ವಿಶೇಷ ಮಾದರಿಯ ಶಿಕ್ಷಣ: ಇಡೀ ಗ್ರಾಮವೇ ಪಾಠಶಾಲೆ, ಮನೆಗೋಡೆಗಳೇ ಕಪ್ಪುಹಲಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.