ಶಿರಸಿ:ಯಲ್ಲಾಪುರ ವಿಧಾನಸಭೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಲಕ್ಷ್ಮಣ್ ಬನ್ಸೋಡೆ ಅವರ ನಾಮಪತ್ರವನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದು, ಪಕ್ಷೇತರ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎಂದು ಪ್ರತ್ಯೇಕ ಎರಡು ನಾಮಪತ್ರ ಸಲ್ಲಿಸಿದ್ದ ಮುಂಡಗೋಡಿನ ಲಕ್ಷ್ಮಣ್ ಬಣ್ಸೋಡಿ ಕಾಂಗ್ರೆಸ್ನಿಂದ ಬಂಡಾಯವಾಗಿ 18ರಂದು ನಾಮಪತ್ರ ಸಲ್ಲಿಸಿದ್ದರು.
ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್ ಅಭ್ಯರ್ಥಿ ಎಂದು ಬರೆದಿದ್ದರಿಂದ ಬಿ.ಫಾರ್ಮ್ ಇಲ್ಲದ ಕಾರಣ ಚುನಾವಣಾಧಿಕಾರಿಗಳು ಈ ಕ್ರಮಕ್ಕೆ ಮುಂದಾಗಿದ್ದಾರೆ. ಸಲ್ಲಿಕೆಯಾದ ಎರಡು ನಾಮಪತ್ರದಲ್ಲಿ ಒಂದು ನಾಮಪತ್ರ ತಿರಸ್ಕರಿಸಿದ್ದು, ಪಕ್ಷೇತರವಾಗಿ ಸಲ್ಲಿಸಿದ ನಾಮಪತ್ರ ಪುರಸ್ಕೃತ ಮಾಡಲಾಗಿದೆ.
19 ನಾಮಪತ್ರ: ಯಲ್ಲಾಪುರ ಉಪ ಕದನದಲ್ಲಿ 19 ನಾಮಪತ್ರ ಪುರಸ್ಕೃತವಾಗಿದ್ದು, ಒಟ್ಟೂ 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ.