ಭಟ್ಕಳ (ಉತ್ತರ ಕನ್ನಡ) : ಕಾಂಗ್ರೆಸ್ ಪಕ್ಷಕ್ಕೆ ತಲೆಯೂ ಇಲ್ಲ, ಬುಡವೂ ಇಲ್ಲವೆಂದು ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ ವ್ಯಂಗ್ಯವಾಡಿದ್ದಾರೆ. ಭಟ್ಕಳದ ಬಿಜೆಪಿ ಚುನಾವಣೆ ಕಾರ್ಯಾಲಯದಲ್ಲಿ ನಡೆದ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಮೋದ್ ಮಧ್ವರಾಜ, ಬಿಜೆಪಿ ಪಕ್ಷ ಎನ್ನುವುದು ಕಾರ್ಯಕರ್ತರ ಪಕ್ಷ ಎನ್ನುವುದು ಸತ್ಯ. ತಲೆಬುಡ ಇಲ್ಲದ ಪಕ್ಷದ ಕಾಂಗ್ರೆಸ್ ಆಗಿದೆ. ಕಾಂಗ್ರೆಸ್ ಪಕ್ಷದ ದಲ್ಲಿ ಕೇಂದ್ರದಲ್ಲಿ(ತಲೆ) ಸರಿಯಾದ ನಾಯಕರಿಲ್ಲ ಬೂತ್(ಬುಡ)ಮಟ್ಟದಲ್ಲಿ ಸರಿಯಾದ ಕಾರ್ಯಕರ್ತರಿಲ್ಲ ಎಂದು ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ಕೊಟ್ಟರು.
ಇದನ್ನೂ ಓದಿ : ಅಂಬಾರಿ ಸಾಗುವ ರಾಜಪಥದಲ್ಲಿ ಮೋದಿಯವರ ರೋಡ್ ಶೋ: ಇದೇ 30ರಂದು ಪ್ರಧಾನಿಯಿಂದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ
ನಾನು ಪರೀಕ್ಷೆಯಲ್ಲಿ ಫಸ್ಟ್ ರ‍್ಯಾಂಕ್ ಬಂದಿದ್ದೇನೆ. ಆದರೆ, ಕಳೆದ ಬಾರಿ ಚುನಾವಣೆಯಲ್ಲಿ ನಾನು ಸೋತಿದ್ದೇನೆ. ನನ್ನನ್ನು ಸೋಲಿಸುವ ಕೆಲಸ ಬಿಜೆಪಿ ಕಾರ್ಯಕರ್ತರು ಮಾಡಿದ್ದಾರೆ. ನಾನು ಸೋತಿರುದಕ್ಕಿಂತ ಬಿಜೆಪಿ ಕಾರ್ಯಕರ್ತರ ಮೇಲೆ ಅಭಿಮಾನ ಹುಟ್ಟಿತು. ಏಕೆಂದರೆ ಕಾರ್ಯಕರ್ತರು ಅಲ್ಲಿ ನನಗೆ ಅಭಿಮಾನ ಬಂದು ನಾನು ಸೋತಿರ ಬಹುದು. ಆದರೆ, ಎದುರಾಳಿ ಪಕ್ಷದಲ್ಲಿ ಎಷ್ಟೇ ಬಲಿಷ್ಠ ಅಭ್ಯರ್ಥಿ ನಿಂತಿದ್ದರು ಕೂಡ ಅಂತ ಅಭ್ಯರ್ಥಿಯನ್ನು ಸೋಲಿಸುವ ಶಕ್ತಿ ಬಿಜೆಪಿಯ ತಳ ಮಟ್ಟದ ಕಾರ್ಯಕರ್ತನಿಗಿದೆ ಎಂದು ಪ್ರಮೋದ್ ಮಧ್ವರಾಜ ಹೇಳಿದರು.
ನಾನು ಕಾಂಗ್ರೆಸ್ ಬಿಟ್ಟು ಬರಲು 2 ಕಾರಣ : ಕಾಂಗ್ರೆಸ್ ಬಿಟ್ಟು ಬಂದವರಲ್ಲಿ ನಾನು ಸಹ ಇದ್ದು, ಎರಡು ಕಾರಣಕ್ಕೆ ನಾನು ಕಾಂಗ್ರೆಸ್ ಪಕ್ಷ ತೊರೆದಿದ್ದೇನೆ. ಮೊದಲು ಕೋವಿಡ್ ಸಂಧರ್ಭದಲ್ಲಿ ಜಗತ್ತು ತತ್ತರಿಸುವ ವೇಳೆ ಭಾರತದಲ್ಲಿ ಮೋದಿ ನಿಭಾಯಿಸಿದ ರೀತಿ ನಾನು ಮೆಚ್ಚಿ ಪಕ್ಷಕ್ಕೆ ಬಂದಿದ್ದೇನೆ. ದೇಶದಲ್ಲಿ ಎರಡು ಹಂತದ ವಾಕ್ಸಿನ್ ನೀಡಿ ಉಳಿದಂತೆ 50 ದೇಶಕ್ಕೆ ವಾಕ್ಸಿನ್ ನೀಡಿದ್ದಾರೆ. ದೇಶವನ್ನು ಅಲ್ಲಿನ ಜನರನ್ನು ಉಳಿಸುವ ಕೆಲಸದಲ್ಲಿ ಮೋದಿ ನಿರತರಾಗಿದ್ದರು ಎಂದು ಗುಣಗಾನ ಮಾಡಿದರು.
ಇದನ್ನೂ ಓದಿ : ಡಬಲ್ ಎಂಜಿನ್ ಸರ್ಕಾರದ ಯೋಜನೆಗಳನ್ನು ಮುಂದಿಟ್ಟು ಬಿಜೆಪಿ ಮತಬೇಟೆ: ಕೇಂದ್ರದ ಪುರಸ್ಕೃತ ಯೋಜನೆ ಹಣ ಏನಾಗಿದೆ?
ಇನ್ನು ಒಂದು ಸರ್ವೇಯ ಪ್ರಕಾರ ಉಡುಪಿಯಲ್ಲಿ ನಾನು ಕಾಂಗ್ರೆಸ್ ಪಕ್ಷದಲ್ಲಿರುವ ವೇಳೆ 5 ವರ್ಷ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರೂ ಸಹ ನನ್ನನ್ನು ಸೋಲಿಸುವ ಕೆಲಸ ಬಿಜೆಪಿ ಕಾರ್ಯಕರ್ತರು ಮಾಡಿದ್ದಾರೆ. ನಾನು ಸೋತಿರುವುದಕ್ಕಿಂತ ಬಿಜೆಪಿ ಕಾರ್ಯಕರ್ತರ ಮೇಲೆ ಅಭಿಮಾನ ಹುಟ್ಟಿತು. ಇನ್ನು ಬಿಜೆಪಿ ಪಕ್ಷ ಎನ್ನುವುದು ಕಾರ್ಯಕರ್ತರ ಪಕ್ಷ ಎನ್ನುವುದು ಸತ್ಯ. ತಲೆಬುಡ ಇಲ್ಲದ ಪಕ್ಷ ಕಾಂಗ್ರೆಸ್ ಆಗಿದೆ. ಈ ಚುನಾವಣೆಯಲ್ಲಿ ನಾವುಗಳು ಮೋದಿ ಅವರನ್ನು ಬಲಪಡಿಸಿ ಸುನೀಲ ನಾಯ್ಕ ಅವರಿಗೆ ಮತ ನೀಡಬೇಕಿದೆ ಎಂದು ಮದ್ವರಾಜ್ ಕರೆ ನೀಡಿದರು.
ಇದನ್ನೂ ಓದಿ : ಕರ್ನಾಟಕ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸುತ್ತೇವೆ, ಯಾರೂ ನಿಲ್ಲಿಸಲು ಸಾಧ್ಯವಿಲ್ಲ: ರಾಹುಲ್ ಗಾಂಧಿ ವಿಶ್ವಾಸ