ETV Bharat / state

ಉತ್ತರಕನ್ನಡ ನೆಲೆ ಕಳೆದುಕೊಂಡ ಕೈ.. ಅಳಿದುಳಿದ ಪಕ್ಷಕ್ಕೆ ಆರ್ ವಿ ದೇಶಪಾಂಡೆ ಒಬ್ಬರೇ ಭರವಸೆ..

ಕಳೆದ ಏಪ್ರಿಲ್‌ನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ನಿಲ್ಲಿಸಲಾಗದೇ ಸಾರ್ವಜನಿಕರ ಪಾಲಿಗೆ ನಗೆಪಾಟಲೀಗಿಡಾಗಿದ್ದ ರಾಷ್ಟ್ರೀಯ ಪಕ್ಷ ಇಂದು ಇರುವ ಎರಡು ಶಾಸಕರಲ್ಲಿ ಒಬ್ಬರನ್ನು ಕಳೆದುಕೊಂಡು ಜಿಲ್ಲೆಯಲ್ಲಿದ್ದ ತನ್ನ ಶಕ್ತಿಯನ್ನು ಕಳೆದುಕೊಂಡಿದೆ. ಆರ್ ವಿ ದೇಶಪಾಂಡೆ ಕಾಂಗ್ರೆಸ್​ಗೆ ಭರವಸೆಯ ಬೆಳಕಾಗಿದ್ದಾರೆ.

ನೆಲ ಕಳೆದುಕೊಂಡ ಕೈ
author img

By

Published : Jul 30, 2019, 12:11 PM IST

Updated : Jul 30, 2019, 12:20 PM IST

ಶಿರಸಿ: ಕೇವಲ15 ತಿಂಗಳ ಹಿಂದೆ ಜಿಲ್ಲೆಯಲ್ಲಿ ಐವರು ಶಾಸಕರನ್ನು ಹೊಂದಿ ತನ್ನದೇ ಅಧಿಪತ್ಯ ಹೊಂದಿದ್ದ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಈಗ ಅಕ್ಷರಶಃ ಅಧೋಗತಿಗೆ ಬಂದು ತಲುಪಿದೆ. ಆರ್ ವಿ ದೇಶಪಾಂಡೆ ಬಿಟ್ಟರೆ ಬೇರೆ ನಾಯಕರ ಆಸರೆ ಕೈ ಪಾಳಯಕ್ಕಿಲ್ಲ.

ಕಾಂಗ್ರೆಸ್ ರೆಬೆಲ್ ಶಾಸಕ ಶಿವರಾಮ ಹೆಬ್ಬಾರ್ ಅನರ್ಹತೆಯೊಂದಿಗೆ ಕೇವಲ ಒಬ್ಬರೇ ಒಬ್ಬ ಶಾಸಕರನ್ನು ಮಾತ್ರ ಹೊಂದಿದಂತಾಗಿದೆ. 2018ರ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಜಿಲ್ಲೆಯಲ್ಲಿ ಐವರು ಶಾಸಕರನ್ನು ಹೊಂದಿದ್ದ ಕಾಂಗ್ರೆಸ್, ವಿಧಾನಸಭೆ ಚುನಾವಣೆಯ ನಂತರದಲ್ಲಿ ಕೇವಲ ಎರಡು ಸ್ಥಾನಗಳಿಗೆ ಸಿಮೀತವಾಗಿತ್ತು. ಆದರೆ, ಬದಲಾದ ರಾಜಕೀಯ ವಿದ್ಯಮಾನದಲ್ಲಿ ಕಾಂಗ್ರೆಸ್ ರೆಬೆಲ್ ಶಾಸಕ ಶಿವರಾಮ ಹೆಬ್ಬಾರ್ ಅವರ ಶಾಸಕತ್ವ ಅನರ್ಹವಾದ ಕಾರಣ ಜಿಲ್ಲೆಯಲ್ಲಿ ಈಗ ಓರ್ವ ಕಾಂಗ್ರೆಸ್​ ಶಾಸಕ ಇದ್ದಾರೆ.

ಉ.ಕ ಜಿಲ್ಲೆಯಲ್ಲಿ ನೆಲ ಕಳೆದುಕೊಂಡ ಕೈ

ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಉತ್ತರ ಕನ್ನಡವೀಗ ಕಾಂಗ್ರೆಸ್ ಮುಕ್ತ ಜಿಲ್ಲೆಯಾಗುವತ್ತ ಹೊರಟಿದೆಯೇನೋ ಎಂಬ ಆತಂಕ ಪಕ್ಷದ ವಲಯದಲ್ಲಿ ವ್ಯಕ್ತವಾಗ್ತಿದೆ. ಹಳಿಯಾಳ, ಯಲ್ಲಾಪುರ, ಕುಮಟಾ, ಭಟ್ಕಳ ಹಾಗೂ ಕಾರವಾರ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಹೊಂದಿದ್ದ ಕಾಂಗ್ರೆಸ್, ವಿಧಾನಸಭೆ ಚುನಾವಣೆಯಲ್ಲಿ ಯಲ್ಲಾಪುರ ಮತ್ತು ಹಳಿಯಾಳವನ್ನು ಮಾತ್ರ ಗೆಲ್ಲುವಲ್ಲಿ ಸಫಲವಾಗಿತ್ತು. ಅದರಲ್ಲಿ ಈಗ ಯಲ್ಲಾಪುರ ಕ್ಷೇತ್ರ ಕೈತಪ್ಪಿ ಹೋಗಿದ್ದು, ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕ ಆರ್ ವಿ ದೇಶಪಾಂಡೆ ಪ್ರತಿನಿಧಿಸುವ ಹಳಿಯಾಳ ಕ್ಷೇತ್ರ ಮಾತ್ರ ಉಳಿದುಕೊಂಡಿದೆ.

ಕಳೆದ ಏಪ್ರಿಲ್‌ ತಿಂಗಳಿನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ನಿಲ್ಲಿಸಲಾಗದೇ ಸಾರ್ವಜನಿಕರ ಪಾಲಿಗೆ ನಗೆಪಾಟಲಿಗೀಡಾಗಿದ್ದ ರಾಷ್ಟ್ರೀಯ ಪಕ್ಷ ಇಂದು ಇರುವ ಎರಡು ಶಾಸಕರಲ್ಲಿ ಒಬ್ಬರನ್ನು ಕಳೆದುಕೊಂಡು ಜಿಲ್ಲೆಯಲ್ಲಿದ್ದ ತನ್ನ ಶಕ್ತಿಯನ್ನು ಕಳೆದುಕೊಂಡಿದೆ.

ಆರ್​ವಿಡಿಗೆ ಆಹ್ವಾನ:

ಜಿಲ್ಲೆಯ ಹಿರಿಯ ರಾಜಕಾರಣಿ ಆರ್​ ವಿ ದೇಶಪಾಂಡೆ ಅವರು ಜನತಾದಳದಿಂದ ಕಾಂಗ್ರೆಸ್​ಗೆ ಸೇರ್ಪಡೆಯಾಗಿ ಹಲವಾರು ವರ್ಷಗಳಿಂದ ಪಕ್ಷ ಬೆಳೆಸಿಕೊಂಡು ಬಂದಿದ್ದಾರೆ. ಅವರ ಅಭಿಮಾನಿಗಳು ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದು, ಇದೇ ಕಾರಣದಿಂದ ಪಕ್ಷ ಬೆಳೆದುಕೊಂಡು ಬಂದಿದೆ. ಆದರೆ, ಈಗ ಕಾಂಗ್ರೆಸ್ ಪಕ್ಷ ಸಂಪೂರ್ಣ ನೆಲಕಚ್ಚಿದೆ. ಹಾಗಾಗಿ ಆರ್‌ವಿಡಿ ಅವರನ್ನು ಬಿಜೆಪಿಗೆ ಕರೆತರುವ ಪ್ರಯತ್ನವೂ ನಡೆಯುತ್ತಿದೆಯಂತೆ. ಬಿಜೆಪಿ ಕಾರ್ಯಕರ್ತರು ಈಗ ಬಗ್ಗೆ ಮುಖಂಡರ ಮೇಲೆ ಒತ್ತಡ ಹಾಕುತ್ತಿದ್ದಾರಂತೆ.

Intro:ಶಿರಸಿ :
ಕೇವಲ ೧೫ ತಿಂಗಳ ಹಿಂದೆ ಜಿಲ್ಲೆಯಲ್ಲಿ ಐವರು ಶಾಸಕರನ್ನು ಹೊಂದಿ ತನ್ನದೇ ಅಧಿಪತ್ಯ ಹೊಂದಿದ್ದ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಈಗ ಅಕ್ಷರಶಃ ಅಧೋಗತಿಗೆ ಬಂದು ತಲುಪಿದೆ. ಕಾಂಗ್ರೆಸ್ ರೆಬೆಲ್ ಶಾಸಕ ಶಿವರಾಮ ಹೆಬ್ಬಾರ್ ಅನರ್ಹದೊಂದಿಗೆ ಕೇವಲ ಒಂದು ಶಾಸಕರನ್ನು ಮಾತ್ರ ಹೊಂದಿದಂತಾಗಿದ್ದು, ಹಿಂದೆಂದೂ ಕಾಣದಂತಹ ಕನಿಷ್ಠ ಸ್ಥಿತಿ ಕಾಂಗ್ರೆಸ್ ಗೆ ಬಂದಂತಾಗಿದೆ.

೨೦೧೮ ರ ವಿಧಾನಸಭೆ ಪೂರ್ವದಲ್ಲಿ ಜಿಲ್ಲೆಯಲ್ಲಿ ಐವರು ಶಾಸಕರನ್ನು ಹೊಂದಿದ್ದ ಕಾಂಗ್ರೆಸ್ ವಿಧಾನಸಭೆ ಚುನಾವಣೆಯ ನಂತರದಲ್ಲಿ ಕೇವಲ ಎರಡು ಸ್ಥಾನಗಳಿಗೆ ಸಿಮೀತವಾಗಿತ್ತು. ಆದರೆ ಬದಲಾದ ರಾಜಕೀಯದಲ್ಲಿ ಕಾಂಗ್ರೆಸ್ ರೆಬೆಲ್ ಶಾಸಮ ಶಿವರಾಮ ಹೆಬ್ಬಾರ್ ಅವರ ಶಾಸಕತ್ವ ಅನರ್ಹವಾದ ಕಾರಣ ಜಿಲ್ಲೆಯಲ್ಲಿ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಉಳಿದುಕೊಂಡಿದೆ. ಇದರಿಂದ ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಉತ್ತರ ಕನ್ನಡವೀಗ ಕಾಂಗ್ರೆಸ್ ಮುಕ್ತ ಜಿಲ್ಲೆಯಾಗುವತ್ತ ಹೊರಟಿದೆ.

Body:ಹಳಿಯಾಳ, ಯಲ್ಲಾಪುರ, ಕುಮಟಾ, ಭಟ್ಕಳ ಹಾಗೂ ಕಾರವಾರ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಹೊಂದಿದ್ದ ಕಾಂಗ್ರೆಸ್ ವಿಧಾನಸಭೆ ಚುನಾವಣೆಯಲ್ಲಿ ಯಲ್ಲಾಪುರ ಮತ್ತು ಹಳಿಯಾಳವನ್ನು ಮಾತ್ರ ಗೆಲ್ಲುವಲ್ಲಿ ಸಫಲವಾಗಿತ್ತು. ಅದರಲ್ಲಿ ಈಗ ಯಲ್ಲಾಪುರ ಕ್ಷೇತ್ರ ಕೈತಪ್ಪಿ ಹೋಗಿದ್ದು, ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕ ಆರ್.ವಿ.ದೇಶಪಾಂಡೆ ಪ್ರತಿನಿಧಿಸುವ ಹಳಿಯಾಳ ಕ್ಷೇತ್ರ ಮಾತ್ರ ಉಳಿದುಕೊಂಡಿದೆ. ಕಳೆದ ಏಪ್ರಿಲ್ ನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ನಿಲ್ಲಿಸಲಾಗದೇ ಸಾರ್ವಜನಿಕರ ನಗೆಪಾಟಲೀಗಿಡಾಗಿದ್ದ ರಾಷ್ಟ್ರೀಯ ಪಕ್ಷ ಇಂದು ಇರುವ ಎರಡು ಶಾಸಕರಲ್ಲಿ ಒಬ್ಬರನ್ನು ಕಳೆದುಕೊಂಡು ಜಿಲ್ಲೆಯಲ್ಲಿ ತನ್ನ ಶಕ್ತಿಯನ್ನು ಸಂಪೂರ್ಣ ಕಳೆದುಕೊಂಡಿದೆ.

ಶಾಸಕ ಶಿವರಾಮ ಹೆಬ್ಬಾರ್ ಮೂಲತಃ ಬಿಜೆಪಿಗರಾಗಿದ್ದು, ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಅಲ್ಲದೇ ಮೊದಲಿನಿಂದಲೂ ಬಿಜೆಪಿ ಸೇರುತ್ತಾರೆ ಎಂಬ ಗುಲ್ಲು ಇದ್ದ ಕಾರಣ ಅವರು ಈಗ ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದೆ. ಸುಪ್ರೀಂ ನಿಂದ ಅನುಮತಿ ದೊರೆತಲ್ಲಿ ಅವರೇ ಉಪ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದು, ಗೆಲುವೂ ಸಹ ನಿಶ್ಚಳವಾಗಿದೆ. ಇದರಿಂದ ಬಿಜೆಪಿಯ ಬಲ ಐದಕ್ಕೆ ಏರಲಿದ್ದು, ಕಾಂಗ್ರೆಸ್ ಏಕಾಂಗಿ ಹೋರಾಟ ನಡೆಸಬೇಕಾಗಿದೆ.

ಆರ್.ವಿ.ಡಿ.ಗೆ ಆಹ್ವಾನ ! :
ಜಿಲ್ಲೆಯ ಹಿರಿಯ ರಾಜಕಾರಣಿ ಆರ್.ವಿ.ದೇಶಪಾಂಡೆ ಅವರು ಜನತಾದಳದಿಂದ ಕಾಂಗ್ರೆಸ್ ಸೇರ್ಪಡೆಯಾಗಿ ಹಲವಾರು ವರ್ಷಗಳಿಂದ ಪಕ್ಷ ಬೆಳೆಸಿಕೊಂಡು ಬಂದಿದ್ದಾರೆ. ಅವರ ಅಭಿಮಾನಿಗಳು ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದು, ಇದೇ ಕಾರಣದಿಂದ ಪಕ್ಷ ಬೆಳೆದುಕೊಂಡು ಬಂದಿದೆ. ಆದರೆ ಈಗ ಕಾಂಗ್ರೆಸ್ ಪಕ್ಷ ಸಂಪೂರ್ಣ ನೆಲಕಚ್ಚಿರುವ ಕಾರಣ ಆರ್.ವಿ.ಡಿ
ಅವರನ್ನೇ ಬಿಜೆಪಿಗರು ತಮ್ಮ ಪಕ್ಷಕ್ಕೆ ಸೇರಿಕೊಳ್ಳಿ ಎಂಬ ಆಫರ್ ಇಟ್ಟಿದ್ದಾರೆ. ಈ ಹಿಂದೆಯೂ ಅವರು ಬಿಜೆಪಿ ಸೇರುತ್ತಾರೆ ಎಂಬ ಮಾತುಗಳು ಕೇಳಿಬಂದಿತ್ತು. ಅಲ್ಲದೇ ಅವರ ಮಗ ಪ್ರಶಾಂತ ದೇಶಪಾಂಡೆಗೆ ಬಿಜೆಪಿಯಲ್ಲಿ ಮಾತ್ರ ಭವಿಷ್ಯವಿದೆ ಎನ್ನುವ ಮಾತುಗಳು ಕೇಳಿಬರುತ್ತಿರುವ ಕಾರಣ ಅವರೂ ಬಿಜೆಪಿಗೆ ಬಂದರೆ ಆಶ್ಚರ್ಯವಿಲ್ಲ. ಅಲ್ಲಿಗೆ ಉತ್ತರ ಕನ್ನಡ ಜಿಲ್ಲೆ ಅಧಿಕೃತವಾಗಿ ಕಾಂಗ್ರೆಸ್ ಮುಕ್ತ ಜಿಲ್ಲೆಯಾಗಲಿದೆ.!

ಬೈಟ್ (೧) : ಶ್ರೀರಾಮ್ ನಾಯ್ಕ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ.

..........
ಸಂದೇಶ ಭಟ್ ಶಿರಸಿ. Conclusion:
Last Updated : Jul 30, 2019, 12:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.