ETV Bharat / state

ಪಶ್ಚಿಮ ಪದವೀಧರರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ: ಕುಬೇರಪ್ಪ ವಿಶ್ವಾಸ

ಭಟ್ಕಳದಲ್ಲಿ ಕರ್ನಾಟಕ ಪಶ್ಚಿಮ ಪದವೀಧರರ ಮತ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಬೇರಪ್ಪ ಪರ ಪ್ರಚಾರ ಸಭೆ ನಡೆಯಿತು.

Congress campaign meeting
ಕಾಂಗ್ರೆಸ್ ಪ್ರಚಾರ ಸಭೆ
author img

By

Published : Jan 9, 2020, 4:56 PM IST

ಭಟ್ಕಳ(ಉತ್ತರ ಕನ್ನಡ): ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಬೇರಪ್ಪ ಪರ ಪ್ರಚಾರ ಸಭೆ ನಡೆಯಿತು.

ಸಭೆ ಉದ್ಘಾಟಿಸಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಈ ಬಾರಿ ಚುನಾವಣೆಯಲ್ಲಿ ಪ್ರತೀ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕರ್ತರು ಕೆಲಸ ಮಾಡುತ್ತಿದ್ದು, ಅವರ ಪರಿಶ್ರಮದಿಂದ ನಮ್ಮ ಅಭ್ಯರ್ಥಿ ಗೆಲ್ಲುವುದು ಖಚಿತ ಎಂದರು.

ನಂತರ ಮಾತನಾಡಿದ ಅಭ್ಯರ್ಥಿ ಕುಬೇರಪ್ಪ, ಈಗಾಗಲೇ ಹಾವೇರಿ, ಧಾರವಾಡ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಪದವೀಧರರ ನೋಂದಣಿ ಕಾರ್ಯ ನಡೆಸಲಾಗಿದ್ದು, ಒಟ್ಟು 64 ಸಾವಿರ ಪದವೀಧರ ಮತದಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ‌ ಪೈಕಿ ಧಾರವಾಡ ಜಿಲ್ಲೆಯಿಂದ 17,355, ಗದಗ ಜಿಲ್ಲೆಯಿಂದ 14,345, ಹಾವೇರಿ ಜಿಲ್ಲೆಯಿಂದ 22,000 ಹಾಗೂ ಉತ್ತರ ಕನ್ನಡ ಜಿಲ್ಲೆಯಿಂದ 10,610 ಮಂದಿ ಹೆಸರು ನೋಂದಾಯಿಸಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಪ್ರಚಾರ ಸಭೆ

ಇಂದಿನಿಂದ ಅಧಿಕೃತವಾಗಿ ಚುನಾವಣಾ ಮತಯಾಚನೆಯನ್ನು ಜಿಲ್ಲೆಯಿಂದ ಆರಂಭಿಸಿದ್ದೇವೆ. ಗುರುವಾರದಿಂದ ಭಟ್ಕಳ ಶಾಲಾ,ಕಾಲೇಜಿನಲ್ಲಿ ಮತ ಪ್ರಚಾರ ನಡೆಸಲಿದ್ದೇವೆ ಎಂದು ತಿಳಿಸಿದರು.

ಇನ್ನು ಜಿಲ್ಲಾ ಕಾಂಗ್ರೆಸ್ ಪ್ರಧಾನ‌ ಕಾರ್ಯದರ್ಶಿ ಭಗವತಿ ಮಾತನಾಡಿ, ಪ್ರಾರಂಭಿಕ ಹಂತದ ಪ್ರಯತ್ನದ ಕೆಲಸದಿಂದ ಚುನಾವಣಾ ಪ್ರಚಾರ ಕಾರ್ಯ ನಡೆಸಿದ್ದು, ಜಿಲ್ಲೆಯ ಕಾರ್ಯಕರ್ತರು ನಿಷ್ಠೆಯಿಂದ‌ ಕೆಲಸ ಮಾಡಿದ್ದಾರೆ. ಗೆಲುವು ನಮ್ಮದೇ ಎಂಬ ವಿಶ್ವಾಸವಿದೆ ಎಂದು ಹೇಳಿದರು.

Intro:ಭಟ್ಕಳ: ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಕೆ.ಪಿ.ಸಿ.ಸಿ. ಶಿಕ್ಷಕರ ಮತ್ತು ಪದವೀಧರ ವಿಭಾಗದ ಅಧ್ಯಕ್ಷ ಕುಬೇರಪ್ಪ ಅವರು ತಮ್ಮ ಚುನಾವಣೆಯ ಪ್ರಚಾರ ಸಭೆಯ ಉದ್ಘಾಟನೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಇಲ್ಲಿನ ಖಾಸಗಿ ಹೋಟೆಲನಲ್ಲಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು‌.Body:ಪ್ರಚಾರ ಸಭೆಯನ್ನು ಉದ್ಟಾಟಿಸಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ 'ಈ ಬಾರಿ ಚುನಾವಣೆಯಲ್ಲಿ ಪ್ರತಿ ಪಂಚಾಯತ ಮಟ್ಟದಲ್ಲಿ ಕಾರ್ಯಕರ್ತರು ಕಾರ್ಯ ಮಾಡಿದ್ದು, ಅವರೆಲ್ಲರ ಪರಿಶ್ರಮದಿಂದ ನಮ್ಮ ಅಭ್ಯರ್ಥಿ ಗೆಲ್ಲುವುದು ಖಚಿತವಾಗಿದೆ. ಇದೊಂದೇ ಚುನಾವಣೆಗೆ ಕಾರ್ಯಕರ್ತರು ಪಕ್ಷದ ಪ್ರಚಾರಕ್ಕೆ ಅಣಿಯಾಗದೇ ಮುಂಬರಲಿರುವ ಪಂಚಾಯತ ಚುನಾವಣೆಗೂ ಸಿದ್ದರಾಗಬೇಕು. ಭಟ್ಕಳದಲ್ಲಿನ ಪಕ್ಷ ಸಂಘಟನೆಯೂ, ಬಲ ವರ್ದನೆಯೂ ಇನ್ನು ಹೆಚ್ಚಿನ ರೀತಿಯಲ್ಲಿ ಆಗಬೇಕೆಂದು ಹೇಳಿದರು.
ನಂತರ ಮಾತನಾಡಿದ ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕುಬೇರಪ್ಪ ಈಗಾಗಲೇ ಹಾವೇರಿ, ಧಾರವಾಡ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಪದವೀಧರರ ನೋಂದಣಿ ಕಾರ್ಯ ನಡೆಸಲಾಗಿದ್ದು, ಒಟ್ಟು 64 ಸಾವಿರ ಪದವೀಧರ ಮತದಾರರು ನೋಂದಾಯಿಸಿಕೊಂಡಿದ್ದಾರೆ. ಈ‌ ಪೈಕಿ ಧಾರವಾಡ ಜಿಲ್ಲೆಯಿಂದ 17355, ಗದಗ ಜಿಲ್ಲೆಯಿಂದ 14345, ಹಾವೇರಿ ಜಿಲ್ಲೆಯಿಂದ 22000 ಹಾಗೂ ಉತ್ತರ ಕನ್ನಡ ಜಿಲ್ಲೆಯಿಂದ 10610 ಮಂದಿ ನೋಂದಾಯಿಸಿಕೊಂಡಿದ್ದಾರೆ.‌ ಇಂದಿನಿಂದ ಅಧೀಕ್ರತವಾಗಿ ಚುನಾವಣಾ ಮತಯಾಚನೆ ಉತ್ತರ ಕನ್ನಡಜಿಲ್ಲೆಯಿಂದ ಆರಂಭಿಸಿದ್ದೇವೆ. ಗುರುವಾರದಿಂದ ಭಟ್ಕಳ ಶಾಲಾ ಕಾಲೇಜಿನಲ್ಲಿ ಮತ ಪ್ರಚಾರವನ್ನು ಆರಂಭಿಸಲಿದ್ದೇವೆ. ಫೆಬ್ರವರಿ ಮಾರ್ಚ ತನಕ 4 ಜಿಲ್ಲೆಯಲ್ಲಿ ಎಲ್ಲಾ ಪ್ರಚಾರ ಕಾರ್ಯ ಮುಗಿಸಲಿದ್ದೇವೆ ಎಂದ‌ ಅವರು
ಈ ಹಿಂದೆ 4 ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, 2 ಬಾರಿ ಸೋತಿದ್ದೇವೆ. ಈ ಬಾರಿ ಹಿಂದಿನ ಸೋಲಿನ ಕಾರಣ ಹಾಗೂ ಕೆಲವು ಅಂಶಗಳ ಮೇಲೆ‌ ಗಮನವಿಟ್ಟು ಪಟ್ಟಿ ಮಾಡಿದ್ದೇವೆ. ಅದರ ಮೇಲೆ ಈಗಾಗಲೇ ಕಾರ್ಯ ಮಾಡಿದ್ದು ಜೂನ ತಿಂಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ನಮಗಿದೆ. ಪಕ್ಷದ ಹಿರಿ ಕಿರಿಯ ಮುಖಂಡ ಕಾರ್ಯಕರ್ತರಿಗೆ ಧನ್ಯವಾದವನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ‌ ಕಾರ್ಯದರ್ಶಿ ಭಗವತಿ ಮಾತನಾಡಿ ' ಪಕ್ಷದ‌ ಕಾರ್ಯಕರ್ತರ ಪರಿಶ್ರಮದಿಂದ 64 ಸಾವಿರ ಆಗಲಿ ಸಾಧ್ಯವಾಗಿದೆ. ಪಾರಂಭಿಕ ಹಂತದ ಪ್ರಯತ್ನದ ಕೆಲಸದಿಂದ ಚುನಾವಣಾ ಪ್ರಚಾರ ಕಾರ್ಯ ನಡೆಸಿದ್ದು, ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಆದರೆ ಕೊನೆಯ ಹಂತದಲ್ಲಿ ಆಮಿಷಕ್ಕೊಳಗದಂತೆ ಎಚ್ಚರಿಕೆ ವಹಿಸಬೇಕು. ಜಿಲ್ಲೆಯ ಕಾರ್ಯಕರ್ತರು ನಿಷ್ಠೆಯಿಂದ‌ ಕೆಲಸ ಮಾಡಿದ್ದಾರೆ. ‌ಎಲ್ಲಾ ಹಿರಿ‌ಕಿರಿಯ ಕಾರ್ಯಕರ್ತರು ಚುನಾವಣೆಯ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಗೆಲುವು ನಮ್ಮದೇ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಸಂತೋಷ ನಾಯ್ಕ, ಹಿರಿಯ ಮುಖಂಡರಾದ ಅಜೀಬ್ ಅಂಬಾರಿ, ಎಫ್.‌ಕೆ.‌ಮೋಗೇರ, ರಾಮ ಮೋಗೇರ, ಫರ್ಜಾನಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಬೈಟ್ 1:ಭಗವತಿ ಜಿಲ್ಲಾ ಕಾಂಗ್ರೆಸ್ ಪ್ರಧಾನ‌ ಕಾರ್ಯದರ್ಶಿ (ಕನ್ನಡಕ ಹಾಕಿಕೊಂಡಿರುವವರು)
ಬೈಟ್ 2: ಕುಬೇರಪ್ಪ ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ (ಕುಳಿತುಕೊಂಡು ಮಾತನಾಡುತ್ತಿರುವವರು)
ಬೈಟ್ 3: ಭೀಮಣ್ಣ ನಾಯ್ಕ ಕಾಂಗ್ರೆಸ್ ಜಿಲ್ಲಾಧ್ಯಕ್ಷ
Conclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.