ETV Bharat / state

ಉಳವಿ ಚನ್ನಬಸವಣ್ಣ ಮಹಾ ರಥೋತ್ಸವ ಸರಳವಾಗಿ ಸಂಪನ್ನ - ಕೊರೊನಾ ಮುಂಜಾಗೃತೆ

ಸಾವಿರಾರು ಭಕ್ತರು ಚಕ್ಕಡಿ ಗಾಡಿಗಳ ಮೂಲಕವೇ ಇಲ್ಲಿಗೆ ಬರೋದು ವಿಶೇಷವಾಗಿತ್ತು. ಆದರೆ ಈ ವರ್ಷ ಕೊರೊನಾ ಕಾರಣಕ್ಕೆ ಜಿಲ್ಲಾಡಳಿತದ‌ ಆದೇಶದ‌ ಮೇರೆಗೆ ಸರಳವಾಗಿ ಜಾತ್ರೆ ನಡೆಸಿದೆ.

uluvi-channabasavanna-celebrated
ಉಳುವಿ ಚನ್ನಬಸವಣ್ಣನವರ ಮಹಾ ರಥೋತ್ಸವ
author img

By

Published : Feb 27, 2021, 9:04 PM IST

ಕಾರವಾರ: ಶರಣರ ಪುಣ್ಯಕ್ಷೇತ್ರ ಜೊಯಿಡಾ ತಾಲೂಕಿನ ಶ್ರೀ ಕ್ಷೇತ್ರ ಉಳವಿ ಚನ್ನಬಸವಣ್ಣನವರ ಮಹಾರಥೋತ್ಸವ ಸರಳ ಹಾಗೂ ಸದ್ಭಕ್ತಿಯಿಂದ ಇಂದು ಸಂಪನ್ನಗೊಂಡಿತು.

ಉಳವಿ ಚನ್ನಬಸವಣ್ಣನವರ ಮಹಾ ರಥೋತ್ಸವ

ಓದಿ: ಫೆ. 28 ಮತ್ತು ಮಾರ್ಚ್ 1ರಂದು ಶಿವಮೊಗ್ಗ ಪ್ರವಾಸ ಕೈಗೊಂಡಿರುವ ಸಿಎಂ ಬಿಎಸ್​ವೈ

ಕೊರೊನಾ ಮುಂಜಾಗ್ರತೆಯೊಂದಿಗೆ ಹರಹರ ಮಹಾದೇವ ಎನ್ನುವ ಭಕ್ತರ ಜಯ ಘೋಷಗಳೊಂದಿಗೆ ಮಹಾರಥೋತ್ಸವಕ್ಕೆ ಮಘ ನಕ್ಷತ್ರದಲ್ಲಿ ಚಾಲನೆ ನೀಡಲಾಯಿತು. ಪ್ರತಿ ವರ್ಷ ಶ್ರೀ ಕ್ಷೇತ್ರ ಉಳವಿ ಜಾತ್ರೆ ಅಂದರೆ ಎಲ್ಲಿಲ್ಲದ ಸಂಭ್ರಮ ಇರುತ್ತಿತ್ತು. ರಾಜ್ಯದ ನಾನಾ ಭಾಗಗಳಿಂದ ಅದರಲ್ಲೂ ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಲಕ್ಷಾಂತರ ಭಕ್ತಗಣ ಉಳವಿ ಜಾತ್ರೆಯಲ್ಲಿ ವಾರಗಳ ಕಾಲ ಇದ್ದು, ಸಂಭ್ರಮಿಸುವ ಪದ್ಧತಿ ಇತ್ತು.

ಸಾವಿರಾರು ಭಕ್ತರು ಚಕ್ಕಡಿ ಗಾಡಿಗಳ ಮೂಲಕವೇ ಇಲ್ಲಿಗೆ ಬರೋದು ವಿಶೇಷವಾಗಿತ್ತು. ಆದರೆ ಈ ವರ್ಷ ಕೊರೊನಾ ಕಾರಣಕ್ಕೆ ಜಿಲ್ಲಾಡಳಿತದ‌ ಆದೇಶದ‌ ಮೇರೆಗೆ‌ ದೇವಸ್ಥಾನ ಆಡಳಿತ ಮಂಡಳಿ, ಜಾತ್ರೆಯನ್ನು ಸರಳವಾಗಿ ನಡೆಸಿದೆ. ಆದರೂ ಬಸವಣ್ಣನ ಜಾತ್ರೆ ನೋಡಲೇ ಬೇಕೆಂದು ಸಾವಿರಾರು ಭಕ್ತರು ಜಾತ್ರೆಯಲ್ಲಿ ಭಾಗವಹಿಸಿ ಕೃತಾರ್ಥರಾಗಿದ್ದಾರೆ.

ವರ್ಷದಂತೆ ಶ್ರೀ ದೇವರಿಗೆ, ಶ್ರೀ ದೇವರ ಹೊತ್ತು ಹೋಗುವ ರಥಕ್ಕೆ ಸೇವೆ ಸಲ್ಲಿಸುವವರು ಅನ್ನದಾನಿಗಳು ವಿವಿಧ ಸೇವೆ ಮಾಡುವವರು ತಮ್ಮ ಸೇವೆ ಸಲ್ಲಿಸಿ ಕೃತಾರ್ಥಭಾವ ಹೊಂದಿದ್ದಾರೆ.‌ ಬರುವ ಭಕ್ತರಿಗೆ ಕಡಿವಾಣ ಹಾಕಿದರೂ ಜಾತ್ರೆ ಭಕ್ತರಿಂದ ತುಂಬಿರುವುದು ಕಂಡು ಬಂತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.