ETV Bharat / state

ಅಂಕೋಲಾದಲ್ಲಿ 'ಲೋಕಲ್ ಎಂಎಲ್ಎ' ಕೈ ಬಿಟ್ಟ ಮತದಾರ - ಲೋಕಲ್ ಎಂಎಲ್ಎ ಕೈ ಬಿಟ್ಟ ಮತದಾರ

ಮಂಜುಗುಣಿ ಗ್ರಾಮದ ವೃದ್ಧೆ ಲೀಲಾವತಿ ನಾಯ್ಕ 6ನೇ ಬಾರಿಗೆ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಈ ಬಾರಿ ಸೋಲೊಪ್ಪಿಕೊಂಡು ನಿರಾಶೆ ಅನುಭವಿಸಿದರು. ಪಂಚಾಯತಿ ಸದಸ್ಯೆಯಾಗಿ ತಮ್ಮ ವ್ಯಾಪ್ತಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಇವರು, ಗ್ರಾಮದಲ್ಲಿ ‘ಲೋಕಲ್ ಎಂಎಲ್‌ಎ’ ಎನಿಸಿಕೊಂಡಿದ್ದರು.

Lilavati Naik
ಲೋಕಲ್ ಎಂಎಲ್ಎ ಖ್ಯಾತಿಯ ಲೀಲಾವತಿ ನಾಯ್ಕ
author img

By

Published : Dec 31, 2020, 12:52 PM IST

ಕಾರವಾರ: ಐದು ಬಾರಿ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಆರನೇ ಬಾರಿಗೆ ಲೋಕಲ್ ಅಖಾಡಕ್ಕೆ ಧುಮುಕಿದ್ದ ಅಂಕೋಲಾದ 'ಲೋಕಲ್ ಎಂಎಲ್ಎ' ಖ್ಯಾತಿಯ ವೃದ್ಧೆಯನ್ನು ಈ ಬಾರಿ ಮತದಾರರು ಕೈ ಬಿಟ್ಟಿದ್ದಾರೆ.

ತಾಲೂಕಿನ ಮಂಜುಗುಣಿ ಗ್ರಾಮದ ವೃದ್ಧೆ ಲೀಲಾವತಿ ನಾಯ್ಕ 94 ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದಾರೆ. ಇವರ ಬದಲಾಗಿ ಮತದಾರರು ಬೇಬಿ ತಾಂಡೇಲ ಎನ್ನುವವರನ್ನು ಆಯ್ಕೆ ಮಾಡಿದ್ದಾರೆ. ಲೀಲಾವತಿ 299 ಮತಗಳನ್ನು ಪಡೆದು ಪರಾಭವಗೊಂಡರೆ, ಬೇಬಿ ತಾಂಡೇಲ 395 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದಾರೆ.

ಓದಿ: ಗ್ರಾ.ಪಂ ಸ್ಪರ್ಧಿಸಿದ್ದ ತಾ.ಪಂ ಮೂವರು ಸದಸ್ಯರು: ಇಬ್ಬರಿಗೆ ಗೆಲುವು, ಓರ್ವನಿಗೆ ಸೋಲು

1993ರಲ್ಲಿ ಮೊದಲ ಬಾರಿಗೆ ಮಂಜುಗುಣಿ ಪಂಚಾಯಿತಿಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದಾದ ಬಳಿಕ ಇದುವರೆಗೆ ಸತತವಾಗಿ ಐದು ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾ ಬಂದಿದ್ದರು. ಪಂಚಾಯಿತಿ ಉಪಾಧ್ಯಕ್ಷೆಯಾಗಿ, ಅಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸಿದ್ದರು. ಪಂಚಾಯತಿ ಸದಸ್ಯೆಯಾಗಿ ತಮ್ಮ ವ್ಯಾಪ್ತಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಇವರು ಗ್ರಾಮದಲ್ಲಿ ‘ಲೋಕಲ್ ಎಂಎಲ್‌ಎ’ ಎನಿಸಿಕೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.