ಉತ್ತರಕನ್ನಡ: ಪಂಚಮಸಾಲಿ ಲಿಂಗಾಯತರನ್ನು 2ಎ ಮೀಸಲಾತಿಗೆ ಸೇರಿಸುವುದಕ್ಕೆ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ವಿರೋಧ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಭಟ್ಕಳದಲ್ಲಿ ಹಿಂದುಳಿದ ವರ್ಗಗಳ ಹಿತರಕ್ಷಣಾ ವೇದಿಕೆಯಿಂದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲಿಂಗಾಯತರನ್ನು 2ಎ ಗೆ ಸೇರಿಸುವುದನ್ನು ವಿರೋಧಿಸಿದ್ದಾರೆ. ನಮ್ಮ ಈ ನಿಲುವಿಗೆ 20ಕ್ಕೂ ಅಧಿಕ ಸಮುದಾಯಗಳ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.
ಉನ್ನತ ಸ್ಥಾನಮಾನ ಗಳಿಸಿದ ಸಮುದಾಯ ಪಂಚಮಸಾಲಿ ಬಹುಸಂಖ್ಯಾತ ಆನೆ ಕೆಳಗೆ ಬಿದ್ದರೆ ಸಣ್ಣ ಸಮುದಾಯಗಳು ಅಪ್ಪಚ್ಚಿಯಾಗುತ್ತವೆ. ಸರ್ಕಾರ ಇದನ್ನು ತೀವ್ರವಾಗಿ ಗಮನಿಸಬೇಕು. ಮೀಸಲಾತಿಯನ್ನು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಒತ್ತಾಯಿಸಿದ್ದಾರೆ.