ETV Bharat / state

ಬೊಲೆರೊ ಅಪಘಾತ : ಗದ್ದೆ ಕೆಲಸ ಮುಗಿಸಿ ಮನೆಗೆ ಹೊರಟವರು ಆಸ್ಪತ್ರೆಗೆ ದಾಖಲಾದರು

ಡಿಕ್ಕಿ ಹೊಡೆದ ಚಾಲಕ ತಕ್ಷಣವೇ ಪರಾರಿಯಾಗಿದ್ದಾನೆ. ಸ್ಥಳೀಯರು ಆ್ಯಂಬುಲೆನ್ಸ್​ ಸಹಾಯದಿಂದ ಗಾಯಗೊಂಡ ಮಹಿಳೆಯರನ್ನು ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಗಂಭೀರವಾಗಿ ಗಾಯಗೊಂಡ ಮೂವರನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ..

author img

By

Published : Jul 18, 2021, 8:01 PM IST

Bolero accident
ಬೊಲೆರೊ ಅಪಘಾತ

ಶಿರಸಿ : ತಾಲೂಕಿನ ಬನವಾಸಿಯಲ್ಲಿ ಗದ್ದೆ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ 7 ಮಹಿಳಾ ಕೂಲಿ ಕಾರ್ಮಿಕರಿಗೆ ಬೊಲೆರೊ ಡಿಕ್ಕಿ ಹೊಡೆದಿದೆ. ಪರಿಣಾಮ 3 ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬನವಾಸಿಯ ಶಾರದಾ, ಮಮತಾ, ಸರೋಜಾ ಎಂಬುವರು ಗಂಭೀರವಾಗಿ ಗಾಯಗೊಂಡ ಮಹಿಳೆಯರಾಗಿದ್ದಾರೆ. ಇವರು ಸ್ಥಳೀಯ ಗದ್ದೆಯೊಂದರಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದರು. ಆಗ ಬನವಾಸಿಯಿಂದ ಶಿರಸಿ ಕಡೆಗೆ ಬರುತ್ತಿದ್ದ ಬೊಲೆರೊ ಎದುರಿನಿಂದ ಡಿಕ್ಕಿ ಹೊಡೆದಿದೆ. ಗೀತಾ ಆರೇರ, ಲಕ್ಷ್ಮಿ ವಡ್ಡರ್, ಮಂಜಮ್ಮ ವಡ್ಡರ್ ಹಾಗೂ ಶಾರದಾ ಭಂಡಾರಿ ಎಂಬುವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಡಿಕ್ಕಿ ಹೊಡೆದ ಚಾಲಕ ತಕ್ಷಣವೇ ಪರಾರಿಯಾಗಿದ್ದಾನೆ. ಸ್ಥಳೀಯರು ಆ್ಯಂಬುಲೆನ್ಸ್​ ಸಹಾಯದಿಂದ ಗಾಯಗೊಂಡ ಮಹಿಳೆಯರನ್ನು ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಗಂಭೀರವಾಗಿ ಗಾಯಗೊಂಡ ಮೂವರನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಅದರಲ್ಲಿ ಓರ್ವ ಮಹಿಳೆಯ ಸ್ಥಿತಿ ತೀರಾ ಚಿಂತಾಜನಕ ಎಂಬುದು ತಿಳಿದು ಬಂದಿದೆ. ಬನವಾಸಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

ಓದಿ: ಉಪ್ಪಿನಂಗಡಿಯಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.