ETV Bharat / state

ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಡೆ: ಕರಾವಳಿ ಕಾವಲು ಪಡೆಯಿಂದ ರಕ್ಷಣೆ - Alvekodi beach

ಕರಾವಳಿ ಕಾವಲು ಪಡೆಯ ಪೊಲೀಸರು, ಭಟ್ಕಳ ತಾಲೂಕಿನ ಕಾಗೆಗುಡ್ಡ ಸಮೀಪ ಗಾಳಿಯ ಹೊಡೆತಕ್ಕೆ ಸಿಲುಕಿ ಮುಳುಗುತ್ತಿದ್ದ ದೋಣಿ ಸಮೇತ ಮೀನುಗಾರನನ್ನು ರಕ್ಷಣೆ ಮಾಡಿದ್ದಾರೆ.

bhatkal
ಕರಾವಳಿ ಕಾವಲು ಪಡೆಯಿಂದ ದೋಣಿ ರಕ್ಷಣೆ
author img

By

Published : May 14, 2021, 10:12 AM IST

ಭಟ್ಕಳ (ಉತ್ತರಕನ್ನಡ): ಭಟ್ಕಳ ತಾಲೂಕಿನ ಆಳ್ವೇಕೋಡಿಯಿಂದ ಮೀನುಗಾರಿಕೆಗೆ ತೆರಳಿದ್ದ ಪಾತಿ ದೋಣಿಯೊಂದು ಕಾಗೆಗುಡ್ಡ ಸಮೀಪದಲ್ಲಿ ಗಾಳಿಯ ಹೊಡೆತಕ್ಕೆ ಸಿಲುಕಿ ಮುಳುಗುತ್ತಿದ್ದಾಗ ಕರಾವಳಿ ಕಾವಲು ಪಡೆಯ ಪೊಲೀಸರು ರಕ್ಷಣೆ ಮಾಡಿದ್ದಾರೆ.

ಕರಾವಳಿ ಕಾವಲು ಪಡೆಯಿಂದ ದೋಣಿ ರಕ್ಷಣೆ

ಆಳ್ವೇಕೋಡಿ ಸಮುದ್ರ ತೀರದಿಂದ ಮೀನುಗಾರಿಕೆ ತೆರಳಿದ್ದ ಶಿರಾಲಿ ಮೊಗೇರಕೇರಿ ನಿವಾಸಿ ಮಂಜುನಾಥ ಬೈರಾ ಮೊಗೇರ ಎನ್ನುವವರ ಪಾತಿ ದೋಣಿ ಕಾಗೆಗುಡ್ಡ ಸಮೀಪ ಗಾಳಿಯ ಹೊಡೆತಕ್ಕೆ ಸಿಲುಕಿ ಮುಳುಗುತ್ತಿತ್ತು.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕರಾವಳಿ ಕಾವಲು ಪಡೆಯ ಪೊಲೀಸರು, ದೋಣಿ ಸಮೇತ ಮೀನುಗಾರನನ್ನು ರಕ್ಷಣೆ ಮಾಡಿದ್ದಾರೆ. ಕರಾವಳಿ ಕಾವಲು ಪಡೆಯ ಕ್ಯಾಪ್ಟನ್ ಮಲ್ಲಪ್ಪ ಗದ್ದಿಗೌಡ, ಸಿಬ್ಬಂದಿಯಾದ ಸಂಜೀವ ನಾಯಕ, ರವಿ ಮೆಸ್ತ, ಈರಪ್ಪ ನಾಯ್ಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಬಾಲಕಿ ಮೇಲಿನ ಅತ್ಯಾಚಾರ ಕೇಸ್‌: ಅಪರಾಧಿಗೆ 20 ವರ್ಷ ಕಠಿಣ ಸಜೆ, ದಂಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.