ETV Bharat / state

ಹೊನ್ನಾವರದ ಇಕೋ ಬೀಚ್​ಗೆ 'ಬ್ಲ್ಯೂ ಫ್ಲ್ಯಾಗ್' ಮಾನ್ಯತೆ - blue flag honor

ಹೊನ್ನಾವರದ ಇಕೋ ಬೀಚ್​ಗೆ ಅಂತಾರಾಷ್ಟ್ರೀಯ ಬ್ಲ್ಯೂ ಫ್ಲ್ಯಾಗ್ ಮಾನ್ಯತೆ ದೊರೆತಿದ್ದು, ಇಂದಿನಿಂದ ಪ್ರತಿನಿತ್ಯ ಬ್ಲ್ಯೂ ಫ್ಲ್ಯಾಗ್ ಕಡಲ ತೀರದಲ್ಲಿ ಹಾರಾಡಲಿದೆ.

blue-flag
ಹೊನ್ನಾವರದ ಇಕೋ ಬೀಚ್​
author img

By

Published : Dec 28, 2020, 5:10 PM IST

ಕಾರವಾರ: ಶುದ್ಧ ನೀರು, ಸ್ವಚ್ಛತೆ, ಮೂಲಭೂತ ಸೌಕರ್ಯ, ಸುರಕ್ಷತೆಯನ್ನೊಳಗೊಂಡ ಹೊನ್ನಾವರದ ಇಕೋ ಬೀಚ್​ಗೆ ಇದೀಗ ಅಂತಾರಾಷ್ಟ್ರೀಯ ಬ್ಲ್ಯೂ ಫ್ಲ್ಯಾಗ್ ಮಾನ್ಯತೆ ದೊರೆತಿದ್ದು, ಇಂದಿನಿಂದ ಪ್ರತಿನಿತ್ಯ ಬ್ಲ್ಯೂ ಫ್ಲ್ಯಾಗ್ ಕಡಲತೀರದಲ್ಲಿ ಹಾರಾಡಲಿದೆ.

ಕಡಲತೀರದಲ್ಲಿ ಬ್ಲ್ಯೂ ಫ್ಲ್ಯಾಗ್ ಧ್ವಜಾರೋಹಣ

ಜಿಲ್ಲಾಡಳಿತ, ಪ್ರವಾಸೋದ್ಯಮ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕೆ. ಹರೀಶಕುಮಾರ್, ಬ್ಲ್ಯೂ ಫ್ಲ್ಯಾಗ್ ಆಡಳಿತ ಮಂಡಳಿ ಸಂಚಾಲಕ ಸುಜಿತ್ ಕುಮಾರ್ ಡೊಂಗ್ರೆ ಅಧಿಕೃತವಾಗಿ ಇಂದು ಕಡಲತೀರದಲ್ಲಿ ಬ್ಲ್ಯೂ ಫ್ಲ್ಯಾಗ್ ಧ್ವಜಾರೋಹಣ ನಡೆಸಿದರು.

ಇದನ್ನೂ ಓದಿ: ಕಾಸ್ಕಾರ್ಡ್ ಬ್ಯಾಂಕ್ ನಿರ್ದೇಶಕರಾಗಿ ಶಾಸಕ ಸುನೀಲ ನಾಯ್ಕ ಆಯ್ಕೆ

ಡೆನ್ಮಾರ್ಕ್​ನ ಪರಿಸರ ಶಿಕ್ಷಣ ಪ್ರತಿಷ್ಠಾನ ಕಡಲತೀರವನ್ನು ಹಂತ ಹಂತವಾಗಿ ಪರಿಶೀಲನೆ ನಡೆಸಿ ಇತ್ತೀಚೆಗಷ್ಟೆ ಅಂತಾರಾಷ್ಟ್ರೀಯ ಬ್ಲ್ಯೂ ಫ್ಲ್ಯಾಗ್ ಮಾನ್ಯತೆ ನೀಡಿತ್ತು. ಅದರಂತೆ ಇಂದು ಧ್ವಜಾರೋಹಣ ನಡೆಸಲಾಗಿದೆ. ಕಡಲತೀರದಲ್ಲಿ ಶುದ್ಧ ನೀರು, ಆಸನ ವ್ಯವಸ್ಥೆ, ಪರಿಸರ, ಸ್ವಚ್ಛತೆ, ಸುರಕ್ಷತೆಗಳ ಕ್ರಮ ಕೈಗೊಳ್ಳಲಾಗಿದೆ. ಇದೀಗ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದು, ಅಂತಾರಾಷ್ಟ್ರೀಯ ಹಾಗೂ ದೇಶಿಯ ಪ್ರವಾಸಿಗರಿಗೆ ಸುರಕ್ಷಿತ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ. ಹರೀಶಕುಮಾರ್ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.