ETV Bharat / state

ಬಹುಮತ ಪಡೆದರು ಅಧಿಕಾರ ಹಿಡಿಯಲು ಬಿಜೆಪಿ ವಿಫಲ: ಧೂಳು ಹಿಡಿದಂತಾದ ಶಿರಸಿ ನಗರಸಭೆ

author img

By

Published : Jul 22, 2019, 10:38 PM IST

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶಿರಸಿ ನಗರಸಭೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಗದ್ದುಗೆ ಹಿಡಿದಿದ್ದರೂ ಕೂಡ ಮೀಸಲಾತಿ ಸಮಸ್ಯೆಯಿಂದ ಒಂದು ವರ್ಷ ಕಳೆದರು ಅಧಿಕಾರಕ್ಕೆ ಏರುವಲ್ಲಿ ವಿಫಲವಾಗಿದೆ. ಇದರಿಂದ ನಗರಸಭೆಯ ದಿನನಿತ್ಯದ ವ್ಯವಹಾರಗಳಿಗೆ ತೊಂದರೆ ಉಂಟಾಗುತ್ತಿದ್ದು, ನಗರದ ಅಭಿವೃದ್ಧಿಗೂ ಹಿನ್ನಡೆಯಾಗಿದೆ.

ಧೂಳು ಹಿಡಿದಂತಾಗಿದೆ ಶಿರಸಿ ನಗರಸಭೆ

ಶಿರಸಿ : ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶಿರಸಿ ನಗರಸಭೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಗದ್ದುಗೆ ಹಿಡಿದಿದ್ದರೂ ಕೂಡ ಮೀಸಲಾತಿ ಸಮಸ್ಯೆಯಿಂದ ಒಂದು ವರ್ಷ ಕಳೆದರು ಅಧಿಕಾರಕ್ಕೆ ಏರುವಲ್ಲಿ ವಿಫಲವಾಗಿದೆ. ಇದರಿಂದ ನಗರಸಭೆಯ ದಿನನಿತ್ಯದ ವ್ಯವಹಾರಗಳಿಗೆ ತೊಂದರೆ ಉಂಟಾಗುತ್ತಿದ್ದು, ನಗರದ ಅಭಿವೃದ್ಧಿಗೂ ಹಿನ್ನಡೆಯಾಗಿದೆ.

ಶಿರಸಿ ನಗರಸಭೆ

2018 ರ ಅಗಸ್ಟ್ ತಿಂಗಳಲ್ಲಿ ಶಿರಸಿ ನಗರಸಭೆಗೆ ಚುನಾವಣೆ ನಡೆದಿದ್ದು, 31 ವಾರ್ಡ್​ಗಳ ನಗರಸಭೆಯಲ್ಲಿ 17 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತವನ್ನು ಬಿಜೆಪಿ ಪಡೆದುಕೊಂಡಿತ್ತು. ಫಲಿತಾಂಶದ ಬೆನ್ನಲ್ಲೇ ಅಧ್ಯಕ್ಷ ಸ್ಥಾನಕ್ಕೆ ಎ ವರ್ಗ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿಯನ್ನು ನಿಗದಿಪಡಿಸಲಾಗಿತ್ತು. ಆದರೆ ರಾಜ್ಯದ ವಿವಿಧ ಕಡೆಗಳಲ್ಲಿ ಮೀಸಲಾತಿ ಕುರಿತಾಗಿ ನ್ಯಾಯಾಲಯದ ‌ಮೊರೆ ಹೋಗಿರುವ ಕಾರಣ ಒಂದು ವರ್ಷದಿಂದ ಆಡಳಿತ ಯಂತ್ರ ಧೂಳು ಹಿಡಿದಂತಾಗಿದೆ. ಅಲ್ಲದೇ ಈಗ ನಗರಸಭೆಯಲ್ಲಿ ಪೌರಾಯುಕ್ತರೂ ಇಲ್ಲದ ಕಾರಣ ಅಪ್ಪ ಅಮ್ಮನಿಲ್ಲದ ಸ್ಥಳೀಯ ಸಂಸ್ಥೆ ಎಂಬ ಟೀಕೆ ವ್ಯಕ್ತವಾಗಿದೆ.

ಆಡಳಿತ ಮಂಡಳಿ ಇಲ್ಲದ ಕಾರಣ ನಗರಸಭಾ ಪೌರಾಯುಕ್ತರು ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಾ ಬಂದಿದ್ದರು. ಆದರೆ ಕಳೆದ 15 ದಿನಗಳ ಹಿಂದೆ ನಗರಸಭೆ ಪೌರಾಯುಕ್ತರಿಗೂ ವರ್ಗಾವಣೆಯಾಗಿದ್ದು, ಸಹಾಯಕ ಆಯುಕ್ತರು ಹೆಚ್ಚುವರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಶಿರಸಿ ನಗರಸಭೆಗೆ ಅಧಿಕಾರ ವರ್ಗ ಹಾಗೂ ಆಡಳಿತ ಮಂಡಳಿ ಎರಡೂ ಇಲ್ಲದೇ ತಲೆ ಬುಡ ಇಲ್ಲದ ನಗರಸಭೆಯಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಭಿವೃದ್ಧಿ ಹಿನ್ನಡೆ :

ಚುನಾವಣಾ ಪೂರ್ವದಲ್ಲಿಯೇ ವಾರ್ಡ್​ವಾರು ಹಂಚಿಕೆಯಾಗಿದ್ದ ನಗರೋತ್ಥಾನ 3ರ ಕಾಮಗಾರಿಗಳು ಬಹುತೇಕ ಕಡೆಗಳಲ್ಲಿ ಕಳಪೆಯಾಗಿದೆ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬಂದಿದೆ. ಆಡಳಿತ ಕಮಿಟಿ ಇಲ್ಲದ ಕಾರಣ ಆಯಾ ವಾರ್ಡ್ ಸದಸ್ಯರ ಮಾತುಗಳನ್ನೂ ಸಹ ಗುತ್ತಿಗೆದಾರರು ಕೇಳದೆ ತಮಗನಿಸಿದ ಹಾಗೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೇ ಕಾಮಗಾರಿಗಳು ಹಂಚಿಕೆಯಾಗಿ ಒಂದೂವರೆ ವರ್ಷ ಕಳೆಯುತ್ತಾ ಬಂದರು ಕೆಲವೊಂದು ಕಾಮಗಾರಿಗಳು ಪೂರ್ಣ ಪ್ರಮಾಣದಲ್ಲಿ ಮುಗಿದಿಲ್ಲ. ಇದರಿಂದ ಅಭಿವೃದ್ಧಿಗೆ ಸಾಕಷ್ಟು ಹಿನ್ನಡೆಯಾಗಿದ್ದು, ಆಡಳಿತ ಮಂಡಳಿ ಶೀಘ್ರ ಅಧಿಕಾರಕ್ಕೆ ಬರಲಿ ಎನ್ನುವುದು ಸಾರ್ವಜನಿಕರ ಆಶಯವಾಗಿದೆ.

Intro:ಶಿರಸಿ :
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶಿರಸಿ ನಗರಸಭೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಗದ್ದುಗೆ ಹಿಡಿದಿದ್ದರೂ ಮೀಸಲಾತಿ ಸಮಸ್ಯೆಯಿಂದ ಒಂದು ವರ್ಷ ಕಳೆದರೂ ಅಧಿಕಾರಕ್ಕೆ ಏರುವಲ್ಲಿ ವಿಫಲವಾಗಿದೆ. ಇದರಿಂದ ನಗರಸಭೆಯ ದಿನನಿತ್ಯದ ವ್ಯವಹಾರಗಳಿಗೆ ತೊಂದರೆ ಉಂಟಾಗುತ್ತಿದ್ದು, ನಗರದ ಅಭಿವೃದ್ಧಿಗೂ ಹಿನ್ನಡೆಯಾಗಿದೆ.

೨೦೧೮ ಅಗಸ್ಟ್ ತಿಂಗಳಲ್ಲಿ ಶಿರಸಿ ನಗರಸಭೆಗೆ ಚುನಾವಣೆ ನಡೆದಿದ್ದು, ೩೧ ವಾರ್ಡುಗಳ ನಗರಸಭೆಯಲ್ಲಿ ೧೭ ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತವನ್ನು ಬಿಜೆಪಿ ಪಡೆದುಕೊಂಡಿತ್ತು. ಫಲಿತಾಂಶದ ಬೆನ್ನಲ್ಲೇ ಅಧ್ಯಕ್ಷ ಸ್ಥಾನಕ್ಕೆ ಎ ವರ್ಗ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿಯನ್ನು ನಿಗದಿ ಪಡಿಸಲಾಗಿತ್ತು. ಆದರೆ ರಾಜ್ಯದ ವಿವಿಧ ಕಡೆಗಳಲ್ಲಿ ಮೀಸಲಾತಿ ಕುರಿತಾಗಿ ನ್ಯಾಯಾಲಯದ ‌ಮೊರೆ ಹೋಗಿರುವ ಕಾರಣ ಒಂದು ವರ್ಷದಿಂದ ಆಡಳಿತ ಯಂತ್ರ ಧೂಳು ಹಿಡಿದು ಕುತಂತಾಗಿದೆ. ಅಲ್ಲದೇ ಈಗ ನಗರಸಭೆಯಲ್ಲಿ ಪೌರಾಯುಕ್ತೂ ಇಲ್ಲದ ಕಾರಣ ಅಪ್ಪ ಅಮ್ಮನಿಲ್ಲದ ಸ್ಥಳೀಯ ಸಂಸ್ಥೆ ಎಂಬ ಟೀಕೆ ವ್ಯಕ್ತವಾಗಿದೆ.

Body:ಆಡಳಿತ ಮಂಡಳಿಯು ಇಲ್ಲದ ಕಾರಣ ನಗರಸಭಾ ಪೌರಾಯುಕ್ತರು ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಾ ಬಂದಿದ್ದರು. ಆದರೆ ಕಳೆದ ೧೫ ದಿನಗಳ ಹಿಂದೆ ನಗರಸಭೆ ಪೌರಾಯುಕ್ತರಿಗೂ ವರ್ಗಾವಣೆಯಾಗಿದ್ದು, ಸಹಾಯಕ ಆಯುಕ್ತರು ಹೆಚ್ಚುವರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಶಿರಸಿ ನಗರಸಭೆಗೆ ಅಧಿಕಾರ ವರ್ಗ ಹಾಗೂ ಆಡಳಿತ ಮಂಡಳಿ ಎರಡೂ ಇಲ್ಲದೇ ತಲೆ ಬುಡ ಇಲ್ಲದ ನಗರಸಭೆಯಾಗಿದೆ ಎಂದು ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸಿದ್ದಾರೆ..

ಅಭಿವೃದ್ಧಿ ಹಿನ್ನಡೆ :
ಚುನಾವಣಾ ಪೂರ್ವದಲ್ಲಿಯೇ ವಾರ್ಡ ವಾರು ಹಂಚಿಕೆಯಾಗಿದ್ದ ನಗರೋತ್ಥಾನ ೩ ರ ಕಾಮಗಾರಿಗಳು ಬಹತೇಕ ಕಡೆಗಳಲ್ಲಿ ಕಳಪೆಯಾಗಿದೆ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬಂದಿದೆ. ಆಡಳಿತ ಕಮಿಟಿ ಇಲ್ಲದ ಕಾರಣ ಆಯಾ ವಾರ್ಡ ಸದಸ್ಯರ ಮಾತುಗಳನ್ನೂ ಸಹ ಗುತ್ತಿಗೆದಾರರು ಕೇಳದೇ ತಮಗನಿಸಿದ ಹಾಗೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೇ ಕಾಮಗಾರಿಗಳು ಹಂಚಿಕೆಯಾಗಿ ಒಂದೂವರೆ ವರ್ಷ ಕಳೆಯುತ್ತಾ ಬಂದರೂ ಕೆಲವೊಂದು ಕಾಮಗಾರಿ ಗಳು ಪೂರ್ಣ ಪ್ರಮಾಣದಲ್ಲಿ ಮುಗಿದಲ್ಲ. ಇದರಿಂದ ಅಭಿವೃದ್ಧಿ ಗೆ ಸಾಕಷ್ಟು ಹಿನ್ನಡೆಯಾಗಿದ್ದು, ಆಡಳಿತ ಮಂಡಳಿ ಶೀಘ್ರ ಅಧಿಕಾರಕ್ಕೆ ಬರಲಿ ಎನ್ನುವುದು ಸಾರ್ವಜನಿಕರ ಆಶಯವಾಗಿದೆ. ಅಲ್ಲದೇ ಸರ್ಕಾರ ಮಧ್ಯ ಪ್ರವೇಶಿಸಿ ನ್ಯಾಯಾಲಕ್ಕೆ ಅಗತ್ಯವಿರುವ ಮಾಹಿತಿಯೊಂದಿಗೆ ಸಮಸ್ಯೆ ಬಗೆಹರಿಸಿಬೇಕು ಎಂದು ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.

ಬೈಟ್ (೧) :
ದೀಪಕ ಹೆಗಡೆ ದೊಡ್ಡುರು , ಸಾಮಾಜಿಕ ಕಾರ್ಯಕರ್ತ.

........
ಸಂದೇಶ ಭಟ್ ಶಿರಸಿ. Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.