ಕಾರವಾರ: ರಾಜ್ಯದ ಪ್ರತಿಷ್ಠಿತ ಅರ್ಬನ್‍ಕೋ-ಅಪರೇಟಿವ್ ಬ್ಯಾಂಕುಗಳಲ್ಲಿ ಒಂದಾದ ಭಟ್ಕಳ ಅರ್ಬನ್‍ಕೋ-ಅಪರೇಟಿವ್ ಬ್ಯಾಂಕಿನ 55ನೇ ವಾರ್ಷಿಕ ಸರ್ವ ಸಾಧಾರಣಾ ಸಭೆಯು ರಾಮನಾಥ ಸಭಾ ಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಅಬ್ದುಲ್ ಮಜೀದ್ ಚೌಗುಲೆ ಬ್ಯಾಂಕಿನ ಪ್ರಗತಿಯ ವರದಿಯನ್ನು ಮಂಡಿಸಿ, ಮಾರ್ಚ್ 2019 ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ನಮ್ಮ ಬ್ಯಾಂಕು ರೂ. 5 ಕೋಟಿ 7 ಲಕ್ಷ ನಿರ್ವಹಣಾ ಲಾಭಗಳಿಸಿದೆ. ರೂ.1 ಕೋಟಿ 47 ಲಕ್ಷ ಆದಾಯಕರ ಪಾವತಿಯ ನಂತರ ವರ್ಷಾಂತ್ಯಕ್ಕೆ ಬ್ಯಾಂಕು ರೂ. 3 ಕೋಟಿ 61 ಲಕ್ಷ ನಿವ್ವಳ ಲಾಭವನ್ನು ಗಳಿಸಿದೆ ಎಂದು ಮಾಹಿತಿ ನೀಡಿದರು.
ಬ್ಯಾಂಕಿನ ಸಹಾಯಕ ಪ್ರಧಾನ ಕಾರ್ಯನಿರ್ವಾಹಕ ಶಂಭು ಎನ್. ಹೆಗಡೆ ಕಳೆದ ಸಾಲಿನ ವಾರ್ಷಿಕ ಮಹಾಸಭೆಯ ನಡಾವಳಿಗಳನ್ನು ಓದಿದರು. ಬ್ಯಾಂಕಿನ ಆಡಳಿತ ಮಂಡಳಿಯ ಉಪಾಧ್ಯಕ್ಷರು ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.