ಭಟ್ಕಳ: ಭಟ್ಕಳ-ತಿರುಪತಿಗೆ ಸಂಚರಿಸುವ ನೂತನ ಎರಡು ಕೆಎಸ್ಆರ್ಟಿಸಿ ಬಸ್ಗೆ ಶಾಸಕ ಸುನೀಲ್ ನಾಯ್ಕ ಚಾಲನೆ ನೀಡಿದರು.
ಭಟ್ಕಳ-ಕೊಲ್ಲೂರು-ಹೊಸನಗರ-ಶಿವಮೊಗ್ಗ-ಬೆಂಗಳೂರು-ಚಿತ್ತೂರು ಮಾರ್ಗವಾಗಿ ಬಸ್ ಸಂಚರಿಸಲಿದೆ. ಇದೇ ವೇಳೆ ಶಾಸಕ ಸುನೀಲ್ ನಾಯ್ಕ ಬಸ್ ಚಲಾಯಿಸಿ ಗಮನ ಸೆಳೆದರು.
![Bhatkal-Tirupati New bus inauguration](https://etvbharatimages.akamaized.net/etvbharat/prod-images/kn-bkl-01-bhatkal-tirupati-new-bus-opening-kac10002_30122019132208_3012f_1577692328_832.jpg)
ಶಾಸಕ ಸುನೀಲ್ ನಾಯ್ಕ ಮಾತನಾಡಿ, ಭಟ್ಕಳ-ತಿರುಪತಿ ಬಸ್ ನೀಡಿರುವ ಮುಖ್ಯಮಂತ್ರಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ಭಟ್ಕಳದಲ್ಲಿರುವ ಎಲ್ಲ ಬಸ್ಗಳ ಬದಲಾವಣೆಗೆ ಮನವಿ ಪತ್ರ ಸಲ್ಲಿಸಿದ್ದೇನೆ. ಹೊಸ ಬಸ್ ನಿಲ್ದಾಣದ ಕಾಮಗಾರಿ ಪೂರ್ಣಗೊಂಡ ಬಳಿಕ ಹೊಸ ಬಸ್ಗಳನ್ನು ಭಟ್ಕಳಕ್ಕೆ ತರುವ ಭರವಸೆಯನ್ನು ನೀಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಟ್ಕಳ ಡಿಪೋ ಮ್ಯಾನೇಜರ್, ಬಸ್ ಚಾಲಕರು, ತಾಲೂಕು ಪಂಚಾಯ್ತಿ ಸದಸ್ಯ ಹನುಮಂತ ನಾಯ್ಕ, ಭಟ್ಕಳ ಬಿಜೆಪಿ ಘಟಕದ ಅಧ್ಯಕ್ಷ ಸುಬ್ರಾಯ ದೇವಾಡಿಗ, ಬಿಜೆಪಿ ಮುಖಂಡರಾದ ಕೃಷ್ಣ ನಾಯ್ಕ, ಗೋವಿಂದ ನಾಯ್ಕ, ದಿನೇಶ ನಾಯ್ಕ, ಕೇದಾರ ಕೊಲ್ಲೇ, ಶಿವಾನಿ ಶಾಂತರಾಮ ಮುಂತಾದವರು ಉಪಸ್ಥಿತರಿದ್ದರು.