ಭಟ್ಕಳ : ಹಿಜಾಬ್ ತೀರ್ಪಿನ ಹಿನ್ನೆಲೆ ಭಟ್ಕಳದಲ್ಲಿ ನಿಷೇಧಾಜ್ಞೆ ಜಾರಿಯ ನಡುವೆ ತೀರ್ಪಿನ ವಿರುದ್ಧ ಬಲವಂತವಾಗಿ ಮುಸ್ಲಿಂ ಸಮುದಾಯದ ಅಂಗಡಿ-ಮುಂಗಟ್ಟನ್ನು ಬಂದ್ ಮಾಡಿಸುತ್ತಿದ್ದ ನಾಲ್ವರ ಮೇಲೆ ಪ್ರಕರಣ ದಾಖಲಾಗಿದೆ.
ಆರೋಪಿತರನ್ನು ಶಾರೀಕ್ ಅನೀಸ್ ಪನ್ ಸೋಪ್ತಕರ್, ತೈಮುರ್ ಹಸ್ಸನ್ ಗವಾಯಿ, ಶಾಹುಲ್ ಹಮೀದ್ ಗವಾಯಿ, ಅಜೀಮ್ ಅಹ್ಮದ್ ಮೊಹ್ಮದ ಅರಿಫ್, ಮೋಹಿದ್ದೀನ್ ಅಬೀರ್ ಅಬುಮೊಹ್ಮದ್ ಎಂದು ಗುರುತಿಸಲಾಗಿದೆ.
ಇವರೆಲ್ಲ ಹಿಜಾಬ್ ನಿಷೇಧದ ಅರ್ಜಿಗಳನ್ನು ವಜಾಗೊಳಿಸಿ ಹೈಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಭಟ್ಕಳದಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಆದರೆ, ಭಟ್ಕಳ ಹಳೆ ಬಸ್ ನಿಲ್ದಾಣದ ಸಮೀಪ ಒತ್ತಾಯವಾಗಿ ಮುಸ್ಲಿಂ ಅಂಗಡಿಗಳನ್ನು ಮುಚ್ಚಿಸುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಆಹಾರ ಸಾಮಗ್ರಿ ನಡುವೆಯೇ ಮಲಗಿರುವ ಪುಟಾಣಿಗಳು: ಅಂಗನವಾಡಿ ಕೇಂದ್ರದ ದುಸ್ಥಿತಿ ನೋಡಿ