ಭಟ್ಕಳ: ತಾಲೂಕಿನ ಮುರುಡೇಶ್ವರದ ಆಂಗನ ಹೋಟೆಲ್ ಹತ್ತಿರ ನಡೆಯುತ್ತಿದ್ದ ಗಲಾಟೆ ನಿಯಂತ್ರಿಸಲು ಸ್ಥಳಕ್ಕೆ ತೆರಳಿದ ಪೊಲೀಸರನ್ನೇ ನಿಂದಿಸಿ ಹಲ್ಲೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಗಳನ್ನು ತಾಲೂಕಿನ ಮಾವಳ್ಳಿ-1 ಕಿಸಗಾರಮಕ್ಕಿ ಖಂಡಕ ನಿವಾಸಿ ಗಣೇಶ ಈಶ್ವರ ನಾಯ್ಕ (27) ಹಾಗೂ ದಿನೇಶ ತಂದೆ ಹನುಮಂತ ನಾಯ್ಕ (26) ಎಂದು ಗುರುತಿಸಲಾಗಿದೆ.
ಓದಿ: ಕರ್ನಾಟಕದಲ್ಲಿ ಏಸುವಿನ ತಾಯಿ ದರ್ಶನ ನೀಡಿದ ಏಕೈಕ ತಾಣ ಇರುವುದಾದರೂ ಎಲ್ಲಿ...? ಇಲ್ಲಿದೆ ಸಂಪೂರ್ಣ ವರದಿ...
ಈ ಬಗ್ಗೆ ಮುರುಡೇಶ್ವರ ಠಾಣಾ ಪೊಲೀಸ್ ಕಾನ್‍ಸ್ಟೇಬಲ್ ಕಿರಣ ತಂದೆ ಗಣಪತಿ ತಿಳಗಂಜಿ (26) ದೂರು ದಾಖಲಿಸಿದ್ದಾರೆ. ಎಸ್ಐ ರವೀಂದ್ರ ಬಿರಾದಾರ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.