ETV Bharat / state

ಮೀಸಲಾತಿ ಮೂಲಭೂತ ಹಕ್ಕಲ್ಲ: ತೀರ್ಪು ಮರುಪರಿಶೀಲನೆಗೆ ಮನವಿ

author img

By

Published : Feb 15, 2020, 3:05 AM IST

ಫೆ.07ರಂದು ಸುಪ್ರೀಂ ಕೋರ್ಟ್, ಎಸ್‌ಸಿ-ಎಸ್‌ಟಿಗೆ ಸರ್ಕಾರಿ ಉದ್ಯೋಗ, ಬಡ್ತಿಯಲ್ಲಿ ಮೀಸಲು ಕಡ್ಡಾಯವಲ್ಲ, ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ನೀಡಿರುವ ತೀರ್ಪು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರನ್ನು ಸಂಕಷ್ಟಕ್ಕೆ ಸಿಲುಕಿದೆ ಎಂದು ವೇದಿಕೆಯ ಸದಸ್ಯರು ಅಸಮಧಾನ ವ್ಯಕ್ತಪಡಿಸಿದರು.

ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಸದಸ್ಯರು
ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಸದಸ್ಯರು

ಕಾರವಾರ: ಮೀಸಲಾತಿ ಮೂಲಭೂತ ಹಕ್ಕಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪುನ್ನು ಮರುಪರಿಶೀಲನೆ ಮಾಡಲು ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಿ, ನ್ಯಾಯ ಒದಗಿಸಿಕೊಡಬೇಕು ಎಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ಫೆ.07ರಂದು ಸುಪ್ರೀಂ ಕೋರ್ಟ್, ಎಸ್‌ಸಿ-ಎಸ್‌ಟಿಗೆ ಸರ್ಕಾರಿ ಉದ್ಯೋಗ, ಬಡ್ತಿಯಲ್ಲಿ ಮೀಸಲು ಕಡ್ಡಾಯವಲ್ಲ, ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ನೀಡಿರುವ ತೀರ್ಪು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರನ್ನು ಸಂಕಷ್ಟಕ್ಕೆ ಸಿಲುಕಿದೆ. ಸಂವಿಧಾನದ 16(4), 16(4ಎ) ಮತ್ತು 16(4ಬಿ) ಪರಿಚ್ಛೇದಗಳಲ್ಲಿ ಎಸ್​ಸಿ, ಎಸ್​ಟಿ ಸಮುದಾಯಗಳಿಗೆ ಉದ್ಯೋಗದಲ್ಲಿ ಮೀಸಲಾತಿ ಮತ್ತು ಬಡ್ತಿಯಲ್ಲಿ ಮೀಸಲಾತಿ ಪ್ರಾತಿನಿಧ್ಯ ಕಲ್ಪಿಸಲಾಗಿದೆ. ಆದಾಗ್ಯೂ ಸುಪ್ರೀಂ ಕೋರ್ಟ್ ಮೀಸಲಾತಿಯು ಮೂಲಭೂತ ಹಕ್ಕಲ್ಲ ಎಂದು ಹೇಳುವ ಮೂಲಕ ದುರ್ಬಲರನ್ನು, ಸಮಾಜದಲ್ಲಿ ಇನ್ನೂ ದುರ್ಬಲರನ್ನಾಗಿಸಲು ಹೊರಟಿದೆ ಎಂದು ರಕ್ಷಣಾ ವೇದಿಕೆಯ ಸದಸ್ಯರು ಅಸಮಧಾನ ವ್ಯಕ್ತಡಿಸಿದ್ದಾರೆ.

ಸುಪ್ರೀಂಕೋರ್ಟ್ ಆದೇಶ ಸಂವಿಧಾನದ ಮೂಲ ತತ್ವಗಳಿಗೆ ಹಾಗೂ ಸಾಮಾಜಿಕ ನ್ಯಾಯ ತತ್ವಕ್ಕೆ ವಿರುದ್ಧವಾಗಿರುವುದರಿಂದ ಕೂಡಲೇ ಕೇಂದ್ರ ಸರ್ಕಾರ ತೀರ್ಪು ಪ್ರಶ್ನಿಸಿ ಪುನರ್ ಪರಿಶೀಲನಾ ಅರ್ಜಿ ಅಥವಾ ಸಂವಿಧಾನದ ಪೂರ್ಣ ಪೀಠಕ್ಕೆ ಮೇಲ್ಮನವಿ ಸಲ್ಲಿಸಬೇಕು. ಈ ತೀರ್ಪಿನ ಸಂಬಂಧ ಅಗತ್ಯ ಬಿದ್ದರೆ, ಪ್ರಧಾನಮಂತ್ರಿ ಶಾಸನ ತಿದ್ದುಪಡಿ ಮಾಡಲಿ. ಜೊತೆಗೆ ಸರ್ವಪಕ್ಷಗಳ ಸಭೆ ಕರೆಯಲಿ. ಕೇಂದ್ರ ಸರ್ಕಾರ ಆಸಕ್ತಿ ತೋರಿಸದೇ ಇದ್ದರೆ, ದೇಶದಾದ್ಯಂತ ದಲಿತ ಸಂಘಟನೆಗಳು ಉಗ್ರ ಹೋರಾಟಗಳನ್ನು ನಡೆಸಲಿದೆ ಎಂದು ಎಚ್ಚರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.