ETV Bharat / state

ಮನೆಗೆ ಮರಳಿದ ನೆರೆ ಸಂತ್ರಸ್ತರಿಗೆ ಶಾಕ್​... ಮನೆಯೊಳಗಿದ್ದವು ಹೆಬ್ಬಾವು, ಕಾಳಿಂಗ ಸರ್ಪ - snakes inside flood hit house

ಪ್ರವಾಹದ ಬಳಿಕ ಕಾಳಿ, ಅಘನಾಶಿನಿ, ಗಂಗಾವಳಿ, ಶರಾವತಿ ನದಿ ಪಾತ್ರದ ಗ್ರಾಮಸ್ಥರು ತಮ್ಮ ಮನೆಗಳಿಗೆ ವಾಪಾಸ್ಸಾಗುತ್ತಿದ್ದಾರೆ. ಆದರೆ, ನೀರಿನ ಜತೆ ಬಂದಿರುವ ಉರಗ, ಮೊಸಳೆ, ವಿಷ ಜಂತುಗಳು ಮನೆಯೊಳಗೆ ವಾಸ್ತವ್ಯ ಹೂಡಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿವೆ.

ನೆರೆ ಹಾವಳಿ ಜೊತೆಗೆ ತೇಲಿ ಬಂದ ವಿಷ ಜಂತುಗಳು
author img

By

Published : Aug 22, 2019, 3:24 AM IST

ಕಾರವಾರ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಮಳೆಯು ತಗ್ಗಿದ್ದು, ಕಾಳಿ, ಅಘನಾಶಿನಿ, ಗಂಗಾವಳಿ, ಶರಾವತಿ ನದಿ ಪಾತ್ರದ ಗ್ರಾಮಸ್ಥರು ತಮ್ಮ ಮನೆಗಳಿಗೆ ವಾಪಾಸ್ಸಾಗುತ್ತಿದ್ದಾರೆ. ಆದರೆ ನೀರಿನೊಂದಿಗೆ ಬಂದಿರುವ ವಿಷಜಂತುಗಳು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿವೆ.

ನೆರೆ ಹಾವಳಿ ಜೊತೆಗೆ ತೇಲಿ ಬಂದ ವಿಷ ಜಂತುಗಳು

ಹೌದು ಪ್ರವಾಹದಿಂದ ಕಂಗೆಟ್ಟ ಜನರಿಗೆ ಈಗ ಮತ್ತೊಂದು ಶಾಕ್​ ಕಾದಿದೆ. ಕಾಳಜಿ ಕೇಂದ್ರದಿಂದ ಮನೆಗೆ ಬಂದ ಜನ ಮಳೆಯೊಳಗೆ ವಾಸ ಶುರು ಮಾಡಿದ ಬೃಹತ್ ಗಾತ್ರದ ಉರಗಗಳನ್ನು ಕಂಡು ಹೌಹಾರಿದ್ದಾರೆ. ಕಾಳಿ ನದಿ ಪ್ರವಾಹದಿಂದ ಜಲಾವೃತವಾದ ವೈಲುವಾಡ ಗ್ರಾಮದಲ್ಲಿ ಕಾಳಿಂಗ ಸರ್ಪ, ಹೆಬ್ಬಾವು ಕಂಡು ಜನ ಬೆಚ್ಚಿಬಿದ್ದಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಹಾವುಗಳನ್ನು ಹಿಡಿಯಲು ಮುಂದಾಗಿದ್ದಾರೆ.

ಒಟ್ಟಿನಲ್ಲಿ ಪ್ರವಾಹ ಪರಿಸ್ಥಿತಿ ಕಡಿಮೆಯಾದರೂ, ನೆರೆ ಸಂತ್ರಸ್ತರಿಗೆ ನೆಮ್ಮದಿ ಇಲ್ಲದಂತಾಗಿದೆ.

Intro:Body:ಬುಸ್ ಬುಸ್ ಕಾಟ.. ಪ್ರವಾಹ ಇಳಿದರು ಸಂತ್ರಸ್ತರಿಗೆ ತಪ್ಪದ ಆತಂಕ
ಕಾರವಾರ: ಉತ್ತರಕನ್ನಡ ಜಿಲ್ಲೆಯಾದ್ಯಂತ ವಾರಗಳ ಕಾಲ ಅಬ್ಬರಿಸಿದ್ದ ಮಳೆ ಕಡಿಮೆಯಾಗಿದ್ದು, ನದಿಪಾತ್ರದ ಗ್ರಾಮಗಳು ಸಹಜ ಸ್ಥಿತಿಯತ್ತ ಮರಳುತ್ತಿವೆ. ಆದರೆ ಉಕ್ಕೇರಿದ ನದಿ ನೀರಿನೊಂದಿಗೆ ಗ್ರಾಮದ ಎಲ್ಲೆಂದರಲ್ಲಿ ಸೇರಿಕೊಂಡಿರುವ ಹಾವುಗಳು ಒಂದೊಂದಾಗಿ ಹೊರಬಿಳ್ಳುತ್ತಿದ್ದು, ಇದೀಗ ಗ್ರಾಮಸ್ಥರು ಆತಂಕದಲ್ಲಿಯೇ ಕಾಲ ಕಳೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಹೌದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರಿಸಿದ ಭಾರಿ ಮಳೆಯಿಂದಾಗಿ ಇಲ್ಲಿನ ಕಾಳಿ, ಅಘನಾಶಿನಿ, ಗಂಗಾವಳಿ, ಶರವತಿ ನದಿಗಳು ಉಕ್ಕಿ ಹರಿದಿದ್ದವು. ಅಲ್ಲದೆ ಜಲಾಶಯಗಳ ನೀರನ್ನು ಹರಿಬಿಟ್ಟ ಕಾರಣ ಯಾರೂ ಊಹಿಸದ ರಿತಿ ಪ್ರವಾಹ ನಿರ್ಮಾಣವಾಗಿತ್ತು. ಇದರಿದ ಜಿಲ್ಲೆಯಾದ್ಯತ ನೂರಾರು ಗ್ರಾಮಗಳು ಮುಳುಗಡೆಯಾಗಿದ್ದವು. ಆದರೆ ಇದೀಗ ಪ್ರವಾಹ ಇಳಿದಿದ್ದು, ಗ್ರಾಮಸ್ಥರು ತಮ್ಮ ತಮ್ಮ ಮನೆಗಳಿಗೆ ತೆರಳಿ ಸ್ವಚ್ಛತೆಯಲ್ಲಿ ತೊಡಗಿಕೊಂಡಿದ್ದಾರೆ.
ಆದರೆ ಹೀಗೆ ತೆರಳಿದ ಜನರಿಗೆ ಮನೆ, ಮನೆಯ ಸುತ್ತಮುತ್ತಲಿನ ಆವರಣ, ಗದ್ದೆ, ತೋಟ ಎಲ್ಲೆಂದರಲ್ಲಿ ಬೃಹತ್ ಗಾತ್ರದ ನಾಗರಹಾವು, ಕಾಳಿಂಗ ಸರ್ಪ, ಹೆಬ್ಬಾವುಗಳು ಕಾಣಿಸಿಕೊಳ್ಳುತ್ತಿವೆ. ಪ್ರವಾಹದ ವೇಳೆ ನದಿ ನೀರಿನಲ್ಲಿ ತೇಲಿ ಬಂದಿದ್ದ ಈ ಉಬಯವಾಸಿಗಳು ಇದೀಗ ಮಳೆ ಕಡಿಮೆಯಾಗುತ್ತಿದ್ದಂತೆ ಒದೊಂದಾಗಿ ಕಾಣಿಸಿಕೊಳ್ಳುತ್ತಿದ್ದು, ಬೃಹತ್ ಗಾತ್ರದ ಹಾವುಗಳನ್ನು ಕಂಡ ಜನರು ಹೌಹಾರುತ್ತಿದ್ದಾರೆ.
ಕಾರವಾರ ತಾಲೂಕಿನ ಕಾಳಿ ನದಿ ಪ್ರವಾಹದಿಂದ ಜಲಾವೃತವಾಗಿದ್ದ ವೈಲುವಾಡ ಗ್ರಾಮದಲ್ಲಿ ಕಾಳಿಂಗ ಸರ್ಪವೊಂದು ಜನರಿಗೆ ಕಂಡಿತ್ತು. ಇದಲ್ಲದೇ ಬೈರಾ ಅನ್ನುವ ಗ್ರಾಮದಲ್ಲಿ ಜಲಾವೃತವಾಗಿದ್ದ ಗಾಂವಕರ್ ಎನ್ನುವವರ ಮನೆಯೊಳಗೆ ನಾಗರಹಾವು ಕಂಡಿದ್ದು ಅರಣ್ಯ ಇಲಾಖೆ ಸಿಬ್ಬಂದಿಗಳು ಹಾವು ಹಿಡಿದಿದ್ದಾರೆ. ಇಷ್ಟೇ ಅಲ್ಲದೇ ಗಂಗಾವಳಿ ನದಿ ಪಾತ್ರದ ಹಲವು ಗ್ರಾಮದಲ್ಲೂ ಹೆಬ್ಬಾವು, ನಾಗರಹಾವು ಅಧಿಕವಾಗಿ ಕಾಣಿಸಿಕೊಳ್ಳುತ್ತಿದ್ದು ಜನರು ರಸ್ತೆ ಮೇಲೆ ಓಡಾಡಬೇಕಾದರು ಹೆದರಿಕೊಂಡೇ ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಸ್ಥಳೀಯರಾದ ರವಿ ಕಸಬೇಕರ್.
ಕೇವಲ ಹಾವು ಮಾತ್ರವಲ್ಲದೇ ಗೋಕರ್ಣ ಸಮೀಪದ ನಾಡು ಮಾಸ್ಕೇರಿ ಗ್ರಾಮದಲ್ಲಿ ಗಂಗಾವಳಿ ನದಿಯಲ್ಲಿ ಮೊಸಳೆ ಮರಿಯೊಂದು ಕೊಚ್ಚಿಕೊಂಡು ಬಂದಿತ್ತು. ಅದೃಷ್ಟವಸಾತ್ ಯಾರಿಗೂ ಏನೂ ಮಾಡಿರಲಿಲ್ಲ. ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಗಳು ಮೊಸಳೆಯನ್ನು ಹಿಡಿದು ರಕ್ಷಣೆ ಮಾಡಿದ್ದಾರೆ. ಪ್ರವಾಹದಿಂದ ಹಾವುಗಳು ತೇಲಿಕೊಂಡು ಸುರಕ್ಷಿತ ಎನ್ನುವಂತೆ ಮನೆಗಳಲ್ಲಿ ಹೊಕ್ಕಿರುವ ಪ್ರಕರಣ ದಿನೇ ದಿನೇ ಬರುತ್ತಿದ್ದು ಜನರು ಯಾರು ಹೆದರದೇ ಅರಣ್ಯ ಇಲಾಖೆಯವರಿಗೆ ವಿಷಯ ತಿಳಿಸಿದರೆ ಹಾವನ್ನು ರಕ್ಷಣೆ ಮಾಡುತ್ತೇವೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.
ಒಟ್ಟಿನಲ್ಲಿ ಪ್ರವಾಹ ಪರಿಸ್ಥಿತಿ ಕಡಿಮೆಯಾಗಿ ನೆಮ್ಮದಿಯಿಂದ ತಮ್ಮ ತಮ್ಮ ಗ್ರಾಮಕ್ಕೆ ತೆರಳಿರುವ ಗ್ರಾಮಸ್ಥರು ಇದೀಗ ಗ್ರಾಮಗಳಲ್ಲಿ ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತಿರುವ ಹಾವುಗಳ ಕಾಟದಿಂದ ಕಂಗಾಲಾಗಿರುವುದಂತೂ ಸತ್ಯ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.