ETV Bharat / state

ವಿಧವೆ ಬದುಕಲ್ಲಿ ವಿಧಿಯ ಚೆಲ್ಲಾಟ : ಪ್ರವಾಹದ ಪ್ರಹಾರಕ್ಕೆ ಬೀದಿಗೆ ಬಂತು ಬಡ ಕುಟುಂಬ - ಶಿರೂರಿನ ನೀಲಮ್ಮಾ ತಿಮ್ಮಗೌಡ ಮನೆ ನಾಶ

ಪ್ರವಾಹದಲ್ಲಿ ನನ್ನ ಇಬ್ಬರು ಮಕ್ಕಳ ಪಠ್ಯ ಪುಸ್ತಕ, ರೇಷನ್ ಕಾರ್ಡ್ ಎಲ್ಲವೂ ಹೋಗಿದೆ. ಈಗ ನಮಗೆ ಬದುಕಲು ಬೇಕಾದ ಯಾವುದೇ ವಸ್ತುಗಳಿಲ್ಲ. ಸದ್ಯ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದೇವೆ. ಮಕ್ಕಳಿಗೆ ಓದಿಸಬೇಕಿದೆ. ನನಗೆ ಕೂಡಲೇ ಒಂದು ಮನೆ ಕಟ್ಟಿಸಿಕೊಟ್ಟು ಜೀವನ ನಡೆಸಲು ಸಹಾಯ ಮಾಡಿ ಎಂದು ಅಂಗಾಲಾಚಿದ್ದಾರೆ..

ankola-gangavli-river-flood-destroyed-homes
ಗಂಗಾವಳಿ ನದಿ ಪ್ರವಾಹ
author img

By

Published : Aug 13, 2021, 5:18 PM IST

ಕಾರವಾರ : ಆ ಮನೆಯ ಆಧಾರ ಸ್ತಂಭವಾಗಿದ್ದ ಯಜಮಾನ ವರ್ಷದ ಹಿಂದೆ ಅನಾರೋಗ್ಯದಿಂದ ಸಾವನ್ನಪ್ಪಿದ್ದ. ಗಂಡನನ್ನು ಕಳೆದುಕೊಂಡ ದುಃಖದ ನಡುವೆಯೂ ಎದೆಗುಂದದೆ ಏಕಾಂಗಿಯಾಗಿ ದುಡಿದು ಇಬ್ಬರು ಪುಟ್ಟ ಮಕ್ಕಳನ್ನು ಓದಿಸುತ್ತಾ ಜೀವನ ನಡೆಸುತ್ತಿದ್ದ ಮಹಿಳೆಯ ಬದುಕಿಗೆ ವರುಣ ವಿಧಿಯಂತೆ ಕಾಡಿದ್ದಾನೆ.

ಪ್ರವಾಹ ಪ್ರಹಾರಕ್ಕೆ ಬೀದಿಗೆ ಬಂತು ಬಡ ಕುಟುಂಬ..

ಉತ್ತರಕನ್ನಡ ಜಿಲ್ಲೆಯಲ್ಲಿ ಕೆಲ ದಿನಗಳ‌‌ ಹಿಂದೆ ಸುರಿದ ಮಳೆಯಿಂದಾಗಿ ಸೃಷ್ಟಿಯಾದ ಅನಾಹುತ ಒಂದೆರಡಲ್ಲ. ಅದರಲ್ಲಿಯೂ ಎಂದೂ‌ ಕಂಡರಿಯದ ರೀತಿ ಈ ಬಾರಿ ಅಂಕೋಲಾ ಭಾಗದಲ್ಲಿ ಗಂಗಾವಳಿ ನದಿ ಉಕ್ಕಿ ಹರಿದ ಪರಿಣಾಮ ಅದೆಷ್ಟೋ ಮನೆಗಳು ಧರೆಗುರುಳಿವೆ. ವರ್ಷವಿಡಿ ದುಡಿದು ಸುಂದರ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವವರ ಸಂತೋಷಕ್ಕೆ ಪ್ರವಾಹ ಕೊಳ್ಳಿ ಇಟ್ಟಿದೆ. ಇಂತಹದೇ ಸ್ಥಿತಿ ಇದೀಗ ಅಂಕೋಲಾ ತಾಲೂಕಿನ ಶಿರೂರಿನ ನೀಲಮ್ಮಾ ತಿಮ್ಮಗೌಡ ಅವರಿಗೆ ಎದುರಾಗಿದೆ.

ವರ್ಷದ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಈಕೆಯ ಪತಿ ಕೃಷ್ಣಾಗೌಡ ಅವರು ಸಾವನ್ನಪ್ಪಿದ್ದರು. ಸಣ್ಣ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡ ನೀಲಮ್ಮಾಗೆ ಸಂಸಾರ ನಡೆಸುವ ಜೊತೆಗೆ ಇಬ್ಬರು ಪುಟ್ಟ ಮಕ್ಕಳನ್ನ ಓದಿಸುವ ಜವಾಬ್ದಾರಿ ಹೇಗಲಿಗೇರಿತ್ತು. ಆದರೂ ಕೂಲಿ ಮಾಡಿ ಜೀವನಕಟ್ಟಿಕೊಳ್ಳುತ್ತಿದ್ದ ಮಹಿಳೆ ಮನೆಗೆ ಕಳೆದ ಬಾರಿಯೇ ನೆರೆ ನೀರು ನುಗ್ಗಿ ಸಾಕಷ್ಟು ಹಾನಿಯಾಗಿತ್ತು. ನೆರೆ ಇಳಿದ ಬಳಿಕ ಎಲ್ಲವನ್ನು ಸರಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು.

ಏಕಾಏಕಿ ಬಂದ ನೀರು : ಆದರೆ, ಈ ಬಾರಿ ಪ್ರವಾಹದ ನೀರು ಬೆಳಂಬೆಳಗ್ಗೆ ಏಕಾಏಕಿ ಏರಿದ ಕಾರಣ ಮನೆಯಲ್ಲಿದ್ದ ಯಾವ ವಸ್ತುವನ್ನು ಸ್ಥಳಾಂತರಿಸಲು ಸಾಧ್ಯವಾಗಿಲ್ಲ. ಮಕ್ಕಳೊಂದಿಗೆ ಹೇಗೋ ಜೀವ ಉಳಿಸಿಕೊಂಡು ಎತ್ತರದ ಪ್ರದೇಶ ಸೇರಿದ್ದರು. ಎರಡು ದಿನದ ಬಳಿಕ ನೀರು ಸ್ವಲ್ಪ ಇಳಿದಾಗ ಬಂದು ನೋಡಿದರೇ ಮನೆ ಸಂಪೂರ್ಣ ನಾಶವಾಗಿತ್ತು. ಮನೆಯಲ್ಲಿದ್ದ ಅಕ್ಕಿ, ಬೇಳೆ, ಬಟ್ಟೆ ಎಲ್ಲವೂ ಕೊಚ್ಚಿ ಹೋಗಿದ್ದು, ಬೃಹತ್ ಗಾತ್ರದ ಮರದ ತುಂಡುಗಳು ಮನೆಯೊಳಗೆ ಸೇರಿವೆ. ಅಲ್ಲದೆ ಮನೆಯ ಒಳಭಾಗದ ಗೋಡೆಗಳು ಸಂಪೂರ್ಣ ಕುಸಿದಿವೆ. ಸುತ್ತಲಿನ ಗೋಡೆಗಳು ಬಾಯ್ತೆರೆದಿವೆ. ಸದ್ಯ ಉಟ್ಟ ಬಟ್ಟೆ ಬಿಟ್ಟು ಬೇರೇನು ಇಲ್ಲದ ಸ್ಥಿತಿ ಇದೆ ಅಂತಾರೆ ಸಂತ್ರಸ್ತೆ ನೀಲಮ್ಮಾ.

ಮಕ್ಕಳ ಪಠ್ಯ ಪುಸ್ತಕ ಎಲ್ಲವೂ ನೀರು ಪಾಲು : ಪ್ರವಾಹದಲ್ಲಿ ನನ್ನ ಇಬ್ಬರು ಮಕ್ಕಳ ಪಠ್ಯ ಪುಸ್ತಕ, ರೇಷನ್ ಕಾರ್ಡ್ ಎಲ್ಲವೂ ಹೋಗಿದೆ. ಈಗ ನಮಗೆ ಬದುಕಲು ಬೇಕಾದ ಯಾವುದೇ ವಸ್ತುಗಳಿಲ್ಲ. ಸದ್ಯ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದೇವೆ. ಮಕ್ಕಳಿಗೆ ಓದಿಸಬೇಕಿದೆ. ನನಗೆ ಕೂಡಲೇ ಒಂದು ಮನೆ ಕಟ್ಟಿಸಿಕೊಟ್ಟು ಜೀವನ ನಡೆಸಲು ಸಹಾಯ ಮಾಡಿ ಎಂದು ಅಂಗಾಲಾಚಿದ್ದಾರೆ.

ಕೈಸೇರದ ಪರಿಹಾರ : ಈಗಾಗಲೇ ಗ್ರಾಮ ಪಂಚಾಯತ್ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಹಾನಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಆದರೆ, ಈವರೆಗೂ ಪರಿಹಾರ ಬಂದಿಲ್ಲ. ಎಲ್ಲವನ್ನು ಕಳೆದುಕೊಂಡ ನಮ್ಮ ಬಳಿ ಏನೂ ಇಲ್ಲ. ನಮಗೆ ಪ್ರತಿ ವರ್ಷವೂ ಇದೇ ರೀತಿ ಪ್ರವಾಹ ಬಂದು ಹಾನಿಯಾಗುತ್ತಿದೆ. ನಮಗೆ ಸಮೀಪದಲ್ಲಿ ಎತ್ತರದ ಪ್ರದೇಶದಲ್ಲಿ ಮನೆ ಕಟ್ಟಿಕೊಟ್ಟಲ್ಲಿ ಇಂತಹ ಅನಾಹುತಗಳನ್ನು ತಪ್ಪಿಸಲು ಸಾಧ್ಯ. ಕೂಡಲೇ ಜನಪ್ರತಿನಿಧಿಗಳು, ಅಧಿಕಾರಿಗಳು ಕಷ್ಟಕ್ಕೆ ಸ್ಪಂದಿಸುವಂತೆ ಕಣ್ಣೀರು ಹಾಕಿದ್ದಾರೆ.

ತಡೆಗೋಡೆ ನಿರ್ಮಿಸಿ ಅನಾಹುತ ತಡೆಯಿರಿ : ಶಿರೂರು ಗ್ರಾಮದ ಪಕ್ಕದಲ್ಲಿಯೇ ಹರಿಯುವ ಗಂಗಾವಳಿ ನದಿಯೂ ಪ್ರತಿ ಬಾರಿ 300ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿ ಹಾನಿ ಮಾಡುತ್ತಿದೆ. ಗ್ರಾಮದ ಮನೆಗಳನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸಬೇಕು ಇಲ್ಲವೇ ನದಿ ತೀರದಲ್ಲಿ ತಡೆಗೋಡೆ ನಿರ್ಮಿಸಿ ನೀರು ನುಗ್ಗದಂತೆ ತಪ್ಪಿಸಲು ಕ್ರಮಕೈಗೊಳ್ಳುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.