ETV Bharat / state

ಚಿನ್ನಾಭರಣಗಳಿಂದಲೇ ಅಲಂಕಾರಗೊಳ್ಳುವ ಗಣಪ: ಅಂಕೋಲಾದಲ್ಲಿದೆ ಶ್ರೀಮಂತ ವಿಘ್ನ ವಿನಾಯಕ! - ಅಂಕೋಲಾದ ಗಜಮುಖನಿಗೆ ಪೊಲೀಸ್​ ಭದ್ರತೆ

ಅಂಕೋಲಾ ಪಟ್ಟಣದ ಮಹಾಲೆ ಮನೆ ಕುಟುಂಬ ಪ್ರತಿಷ್ಠಾಪಿಸಿ ಪೂಜಿಸುತ್ತಿರುವ ಶ್ರೀಮಂತ ವಿಘ್ನ ನಿವಾರಕನಿಗೆ ಪ್ರತಿ ವರ್ಷವೂ ಒಂದಲ್ಲೊಂದು ಚಿನ್ನದ ವಸ್ತುಗಳು ಅರ್ಪಣೆಯಾಗುತ್ತಿವೆ.

Ganesha idol adorned with  gold ornaments
ಚಿನ್ನಾಭರಣಗಳಿಂದಲೇ ಅಲಂಕಾರಗೊಳ್ಳುವ ಗಣಪ
author img

By

Published : Sep 7, 2022, 12:54 PM IST

ಕಾರವಾರ: ಮುಂಬೈನ ಲಾಲ್‌ಭಾಗ್ ಚಾ ರಾಜ ಗಣಪತಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ದೇಶದ ಅತಿ ಶ್ರೀಮಂತ ಗಣಪತಿ ಎಂದೇ ಬಿಂಬಿತವಾಗಿರುವ ಈ ಗಣೇಶ, ಎಲ್ಲೆಡೆ ಭಾರಿ ಪ್ರಸಿದ್ಧಿ. ಈ ಲಾಲ್‌ಭಾಗ್ ಚಾ ರಾಜ ಗಣಪತಿಯಷ್ಟು ಶ್ರೀಮಂತನಲ್ಲದಿದ್ದರೂ, ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ, ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಪ್ರತಿಷ್ಠಾಪಿಸುವ ಗಣೇಶನಿಗಿಂತ ಇಲ್ಲಿನ ಮನೆಯೊಂದರಲ್ಲಿ ಪ್ರತಿಷ್ಠಾಪಿಸಿರುವ ಈ ಗಣಪ ಅತಿ ಶ್ರೀಮಂತನಾಗಿದ್ದಾನೆ.

ಇಂತಹದೊಂದು ಶ್ರೀಮಂತ ಗಣಪತಿ ಪ್ರತಿಷ್ಠಾಪಿಸಿರುವುದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದ ಮಹಾಲೆ ಮನೆ ಕುಟುಂಬದವರು. ಮಹಾಲೆ ಮನೆ ವಿನಾಯಕ ಎಂದೇ ಪ್ರಸಿದ್ಧಿ ಪಡೆದಿರುವ ಈ ಗಣಪ ಇದೀಗ ಚಿನ್ನದ ಕಿರೀಟ, ಚಿನ್ನದ ಗದೆ, ಚಿನ್ನದ ತ್ರಿಶೂಲ ಸೇರಿದಂತೆ ಹತ್ತಾರು ಚಿನ್ನದ ಉಂಗುರಗಳನ್ನು ತೊಟ್ಟು ಸರ್ವಾಲಂಕಾರ ಭೂಷಿತನಾಗಿ ವೀರಾಜಮಾನನಾಗಿ ಭಕ್ತರನ್ನು ಹರಸುತ್ತಿದ್ದಾನೆ.

ಶ್ರೀಮಂತ ಗಣಪ: ಬೇಡಿದ ವರವ ಕರುಣಿಸುತ್ತಾನೆಂಬ ಅಗಾಧ ನಂಬಿಕೆ ಹೊಂದಿರುವ ಭಕ್ತರು ನಿತ್ಯವೂ ಇಲ್ಲಿಗೆ ಬಂದು ತಮ್ಮ ಇಷ್ಟಾರ್ಥಗಳ ಈಡೇರಿಸುವಂತೆ ಹರಕೆ ಹೊತ್ತು ತೆರಳುತ್ತಿದ್ದಾರೆ. ಹೀಗೆ ಹೊತ್ತ ಹರಕೆ ಈಡೇರಿದ ಬಳಿಕ ವಿಶೇಷ ಪೂಜೆಯ ಜೊತೆಗೆ ಚಿನ್ನಾಭರಣಗಳನ್ನು ಸಹ ಚೌತಿಯ ಸಮಯದಲ್ಲಿ ಹರಕೆಯ ರೂಪದಲ್ಲಿ ನೀಡುವುದು ರೂಢಿಯಲ್ಲಿದೆ. ಇದರಿಂದಾಗಿ ಜಿಲ್ಲೆಯಲ್ಲಿಯೇ ಅತಿ ಶ್ರೀಮಂತ ಗಣಪನಾಗಿ ಈ ಮಹಾಲೆ ಮನೆ ವಿನಾಯಕ ಗುರುತಿಸಿಕೊಂಡಿದ್ದಾನೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.

ಚಿನ್ನಾಭರಣಗಳಿಂದಲೇ ಅಲಂಕಾರಗೊಳ್ಳುವ ಗಣಪ..

ನೂರಾರು ವರ್ಷಗಳ ಇತಿಹಾಸ: ಈ ಮಹಾಲೆ ಮನೆ ಗಣಪತಿಗೆ ನೂರಾರು ವರ್ಷಗಳ ಇತಿಹಾಸವಿದೆ. ಬ್ರಿಟಿಷರ ಕಾಲದಲ್ಲೇ ಸಾರ್ವಜನಿಕ ಗಣಪತಿಗಿಂತಲೂ ಪಟ್ಟಣದಲ್ಲಿ ದೊಡ್ಡ ಗಣಪತಿಯೆಂದು ಈ ಮಹಾಲೆ ಮನೆ ಗಣಪತಿ ಗುರುತಿಸಿಕೊಂಡಿತ್ತು. ಸ್ವಾತಂತ್ರ್ಯ ಸಂಗ್ರಾಮದ ವೇಳೆಯೂ ಒಗ್ಗಟ್ಟು ಪ್ರದರ್ಶಿಸಲು ಗಣಪತಿ ಪ್ರತಿಷ್ಠಾಪನೆ ಸಹಕಾರಿಯಾಗಿತ್ತು. ಇನ್ನು, ಮನುಷ್ಯನ ಮೈಬಣ್ಣವನ್ನೇ ಈ ಗಣಪನ ಮೂರ್ತಿಗೆ ಹೋಲುವಂತೆ‌ ರಚಿಸಲಾಗುತ್ತದೆ. ನೂರಾರು ವರ್ಷಗಳು ಕಳೆದರೂ ಈ ಬಣ್ಣದಲ್ಲಿ, ಗಣಪನ ಮೂರ್ತಿಯ ತೇಜಸ್ಸಿನಲ್ಲಿ ಬದಲಾವಣೆ ಕಾಣದಿರುವುದು ಅಚ್ಚರಿಯ ಸಂಗತಿ ಎನ್ನುತ್ತಾರೆ ಕುಟುಂಬಸ್ಥರು.

ಸ್ವಾತಂತ್ರ್ಯ ಪೂರ್ವದಿಂದಲೂ ಈ ಮಹಾಲೆ ಕುಟುಂಬ ಗಣೇಶನನ್ನು ತಾವೇ ಮಣ್ಣಿನಿಂದ ತಯಾರಿಸಿ, ಚತುರ್ಥಿಯ ಸಮಯದಲ್ಲಿ 11 ದಿನವಿಟ್ಟು ಪೂಜಿಸುತ್ತಿದೆ. ಆದರೆ ಈ ಬಾರಿ ಹುಣ್ಣಿಮೆ ಎದುರಾಗಿರುವ ಕಾರಣ 10ನೇ ದಿನಕ್ಕೆ ನಿಮಜ್ಜನ ಮಾಡಲಾಗುತ್ತಿದೆ. ನಿಮಜ್ಜನ ಸಮಯದಲ್ಲಿ ಪೊಲೀಸ್ ಭದ್ರತೆ ಸಹ ನೀಡುವುದು ವಿಶೇಷ.

ಇದನ್ನೂ ಓದಿ: ದುಷ್ಟರ ವಕೃದಷ್ಠಿಗೆ ಅದೃಶ್ಯಳಾದ ಸಾತೇರಿ ದೇವಿ: ವರ್ಷದಲ್ಲಿ 7 ದಿನ ಮಾತ್ರ ದರ್ಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.