ETV Bharat / state

ಸಮ್ಮಿಶ್ರ ಸರ್ಕಾರ ಇಚ್ಛಾಮರಣ ಪಡೆದುಕೊಂಡೇ ಹುಟ್ಟಿದೆ.. ಅನಂತಕುಮಾರ್ ಹೆಗಡೆ ವ್ಯಂಗ್ಯೋಕ್ತಿ

author img

By

Published : May 12, 2019, 7:41 PM IST

ಸಮ್ಮಿಶ್ರ ಸರ್ಕಾರಕ್ಕೆ ಇಚ್ಛಾಮರಣವಿದೆ. ಅವರ ನಡುವಿನ ಭಿನ್ನತೆಯಿಂದಲೇ ಸರ್ಕಾರ ಪತನವಾಗಲಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್​ ಹೆಗಡೆ ಹೇಳಿದ್ದಾರೆ.

ರಾಜ್ಯ ಸರ್ಕಾರದಲ್ಲಿನ ಬಿಕ್ಕಟ್ಟೆ ಅದರ ಪತನಕ್ಕೆ ಕಾರಣವಾಗಲಿದೆ ಎಂದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ

ಕಾರವಾರ : ಸರ್ಕಾರಕ್ಕೆ ಜನರು ಇಚ್ಛಾಮರಣದ ವರ ಕೊಟ್ಟಿದ್ದಾರೆ. ಯಾವಾಗ ಕಲಹ, ಭಿನ್ನಾಭಿಪ್ರಾಯ ಜಾಸ್ತಿ ಆಗುತ್ತದೆಯೋ ಆಗ ಮೈತ್ರಿ ಸರ್ಕಾರ ಬೀಳಲಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ವ್ಯಂಗ್ಯವಾಡಿದ್ದಾರೆ.
ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಬೀಳಿಸಲು ಯಾವ ಪ್ರಯತ್ನವೂ ಬೇಡ. ಅವರೊಳಗಿನ ಕಲಹ, ಭಿನ್ನಾಭಿಪ್ರಾಯ ಹಾಗೂ ಅಸಮಾಧಾನಕ್ಕೆ ಯಾವ ದಿನಾಂಕವೂ ನಿಗದಿ ಮಾಡುವುದು ಬೇಡ. ಅವರ ನಿರ್ಧಾರ ತೆಗೆದುಕೊಂಡ ದಿನ ಸರ್ಕಾರ ಬೀಳಲಿದೆ ಎಂದರು.

ಸಮ್ಮಿಶ್ರ ಸರ್ಕಾರ ಕೆಡವಬೇಕಿಲ್ಲ, ಅದಾಗಿಯೇ ಬೀಳುತ್ತೆ- ಅನಂತಕುಮಾರ್ ಹೆಗಡೆ ಭವಿಷ್ಯ

ರಾಜ್ಯದಲ್ಲಿ ಬಿಜೆಪಿ 22 ಸ್ಥಾನಗಳನ್ನು ಗೆಲ್ಲಲಿದೆ. ದೇಶದಲ್ಲಿ 230ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಮತ್ತೊಮ್ಮೆ ಮೋದಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.
ಶಿರಸಿಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಅನಿಶ್ ಮೇಲೆ ಎಸ್​ಡಿಪಿಐ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ನಡೆಸಿ ವಿಕೃತಿ ಮೆರೆದಿದ್ದಾರೆ. ಎಲ್ಲೆಲ್ಲಿ ಎಸ್​ಡಿಪಿಐ ಬೆಳೆದಿದೆ ಅಲ್ಲಿ ಗೊಂದಲ, ಕೋಮು ದ್ವೇಷ ಬೆಳೆಯುತ್ತದೆ. ಕೇರಳ, ಮಂಗಳೂರು ಸೇರಿದಂತೆ ಇನ್ನಿತರ ಭಾಗಗಳಲ್ಲಿ ತಲೆ ಎತ್ತಿದ್ದ ಎಸ್​ಡಿಪಿಐ ಈಗ ಉತ್ತರಕನ್ನಡ ಜಿಲ್ಲೆಗೂ ಕಾಲಿಟ್ಟಿದೆ. ಈ ಬಗ್ಗೆ ಸಾರ್ವಜನಿಕರು ಜಾಗೃತರಾಗಿರಬೇಕು. ಪ್ರಕರಣದ ಬಗ್ಗೆ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸುತ್ತಿದ್ದು. ಮುಂದಿನ ದಿನಗಳಲ್ಲಿ ಸಂಘಟನೆ ಮೇಲೆ ತೀವ್ರ ನಿಗಾ ಇಡಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

Intro:ಕಾರವಾರ: ಸರ್ಕಾರಕ್ಕೆ ಜನರು ಇಚ್ಚಾಮರಣದ ವರವನ್ನು ಕೊಟ್ಟಿದ್ದು, ಯಾವಾಗ ಕಲಹ, ಭಿನ್ನಾಭಿಪ್ರಾಯ ಜಾಸ್ತಿ ಆಗುತ್ತದೆಯೋ ಆಗ ಸರ್ಕಾರ ಬಿಳ್ಳಲಿದೆ ಎಂದು ಸಂಸದ ಹಾಗೂ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಭವಿಷ್ಯ ನುಡಿದಿದ್ದಾರೆ.
ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಬಿಳ್ಳಿಸಲು ಯಾವ ಪ್ರಯತ್ನವೂ ಬೇಡ. ಈಗಾಗಲೇ ಪಡೆದುಕೊಂಡಿರುವ ವರವೇ ಇಚ್ಚಾಮರಣವಾಗಲಿದೆ. ಅದಕ್ಕೆ ಯಾವ ದಿನಾಂಕವೂ ನಿಗದಿ ಮಾಡುವುದು ಬೇಡ. ಅವರೇ ಯಾವಾಗ ನಿರ್ಧಾರ ತೆಗೆದುಕೊಳ್ಳುತ್ತಾರೋ ಆಗ ಸರ್ಕಾರ ಬಿಳ್ಳಲಿದೆ ಎಂದು ಹೇಳಿದರು.
ಇನ್ನು ಮುಖ್ಯಮಂತ್ರಿ ರೆಸಾರ್ಟ್ ವಾಸ್ತವ್ಯ ವಿಚಾರ ಬಗ್ಗೆ ಕೇಳಿದಾಗ ಅವರ ಆರೋಗ್ಯ ಸರಿ ಇಲ್ಲ. ರೆಸಾರ್ಟ್ ಗೆ ತೆರಳಿದ್ದಾರೆ. ಈ ಬಗ್ಗೆ ರಾಜಕೀಯ ಮಾಡುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ೨೨ ಸ್ಥಾನಗಳನ್ನು ಗೆಲ್ಲಲಿದೆ. ದೇಶದಲ್ಲಿ ೨೩೦ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಮತ್ತೊಮ್ಮೆ ಮೋದಿ ಸರ್ಕಾರ ಆಡಳಿತಕ್ಕೆ ಬರಲಿದೆ ಎಂದು ಹೇಳಿದರು.
ಶಿರಸಿಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಅನಿಶ್ ಮೇಲೆ ಎಸ್ ಡಿಪಿಐ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ನಡೆಸಿ ವಿಕೃತಿ ಮೆರೆದಿದ್ದಾರೆ. ಎಲ್ಲೆಲ್ಲಿ ಎಸ್ ಡಿಪಿಐ ಬೆಳೆದಿದೆ ಅಲ್ಲಿ ಗೊಂದಲ ಕೋಮು ದ್ವೇಷ ಬೆಳೆಯುತ್ತಿದೆ. ಕೆರಳ, ಮಂಗಳೂರು ಸೇರಿದಂತೆ ಇನ್ನಿತರ ಭಾಗಗಳಲ್ಲಿ ತಲೆ ಎತ್ತಿದ್ದ ಎಸ್ ಡಿಪಿಐ ಇದೀಗ ಉತ್ತರಕನ್ನಡ ಜಿಲ್ಲೆಗೂ ಕಾಲಿಟ್ಟಿದ್ದು, ಈ ಬಗ್ಗೆ ಸಾರ್ವಜನಿಕರು ಜಾಗೃತರಾಗಿರಬೇಕು.
ಪ್ರಕರಣದ ಬಗ್ಗೆ ಪೊಲೀಸರು ನಿಸ್ಪಕ್ಷಪಾತ ತನಿಖೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಸಂಘಟನೆ ಮೇಲೆ ತೀವ್ರ ನಿಗಾ ಇಡಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

Body:ಕ

Conclusion:ಕ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.