ಶಿರಸಿ :ರಾಜ್ಯದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಎಲ್ಲಾ ಕೊಲೆಗಳಿಗೂ ಎಸ್ ಡಿಪಿಐ ಕಾರಣವಾಗಿದೆ. ಈಗ ಉತ್ತರ ಕನ್ನಡದಲ್ಲಿ ಎಸ್ಡಿಪಿಐ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದ್ದು, ಗಂಭಿರವಾದ ಹೆಜ್ಜೆಯನ್ನು ಇಡಬೇಕು ಎಂದು ಉತ್ತರ ಕನ್ನಡದ ಬಿಜೆಪಿ ಲೋಕಸಭಾ ಅಭ್ಯರ್ಥಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದ್ದಾರೆ.
ಶಿರಸಿಯ ರೋಟರಿ ಕ್ಲಬ್ ನಲ್ಲಿ ನಡೆದ ಚುನಾವಣಾ ಅವಲೋಕನಾ ಸಭೆಯಲ್ಲಿ ಮಾತನಾಡಿದ ಅವರು, ಎಸ್.ಡಿ.ಪಿ.ಐ. ಉತ್ತರ ಕನ್ನಡ ಜಿಲ್ಲೆಗೆ ಬರುವುದನ್ನು
ನಿಯಂತ್ರಿಸಲು ನಾವು ಸಂಘಟನೆ ಮಾಡಬೇಕು. ಓಟಿಗಾಗಿ ಮಾತ್ರ ಸಂಘಟನೆ ಅಲ್ಲ. ನಮ್ಮತನವನ್ನು ಉಳಿಸಿಕೊಳ್ಳಲು ಸಂಘಟನೆ ಮಾಡಬೇಕು ಎಂದರು.
ದೇಶದಾದ್ಯಂತ ಮೋದಿ ಅಲೆ ಇದೆ. ಅದರಿಂದ ಬಿಜೆಪಿ ಗೆಲ್ಲೋದು ಅಂತಾದ್ರೆ ದೇಶದ ಎಲ್ಲಾ ಕ್ಷೇತ್ರದಲ್ಲೂ ನಿಂತಿರುವ ಎಲ್ಲಾ ಅಭ್ಯರ್ಥಿಗಳೂ ಗೆಲ್ಲ ಬೇಕಿತ್ತಲ್ಲ. ಆದರೆ ಕಾರ್ಯಕರ್ತರು ಇದ್ದಲ್ಲಿ ಮಾತ್ರ ಅಲೆ. ಸಂಘಟನೆ ಇದ್ದಲ್ಲಿ ಮಾತ್ರ ಅಲೆ ಇರುತ್ತದೆ. ಇಲ್ಲದೇ ಹೋದಲ್ಲಿ ಅಲೆ ಬರುತ್ತದೆ ಹೋಗುತ್ತದೆ ಎಂದರು.