ETV Bharat / state

ಹೆಗಡೆ ಮೇಲೆ ಅತೃಪ್ತಿ: ಬಿಜೆಪಿ ವೋಟು ಜೆಡಿಎಸ್​ಗೆ ಎಂದ ಆನಂದ ಅಸ್ನೋಟಿಕರ್

ಉತ್ತರಕನ್ನಡ ಜಿಲ್ಲೆಯಲ್ಲಿ ಹಾಲಿ ಸಂಸದರ ವಿರುದ್ಧ ಆಕ್ರೋಶವಿದೆ ಹೀಗಾಗಿ ಈ ಭಾರಿ ಅನಂತಕುಮಾರ್​​ ಹೆಗಡೆ ಸೋಲು ಖಚಿತವೆಂದು ಜೆಡಿಎಸ್​ ಅಭ್ಯರ್ಥಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ್
author img

By

Published : Mar 28, 2019, 4:03 AM IST

ಶಿರಸಿ :ಉತ್ತರ ಕನ್ನಡ ಜಿಲ್ಲೆಯಲ್ಲಿ ಅನಂತಕುಮಾರ್​ ಹೆಗಡೆ ಮೇಲೆ ಅತೃಪ್ತಗೊಂಡ ಬಿಜೆಪಿ ಪ್ರಮುಖರ ಬೆಂಬಲ ಈ ಬಾರಿ ಜೆಡಿಎಸ್​ಗೆ ಸಿಗಲಿದೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ್ ಹೇಳಿದ್ದಾರೆ.

ಶಿರಸಿಯಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಅನಂತಕುಮಾರ್​ ಹೆಗಡೆ ಬೆಂಬಲಿಸಿದ ಶೇಕಡಾ 75ರಷ್ಟು ಮತದಾರರು ಹಾಗೂ ಬಿಜೆಪಿ ಪ್ರಮುಖರು ಹೆಗಡೆ ಅವರ ನಡೆಯಿಂದ ಈ ಬಾರಿ ಅತೃಪ್ತರಾಗಿದ್ದಾರೆ. ಹೀಗಾಗಿ ಈ ಬಾರಿ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆ. ಈಗಾಗಲೇ ಬೆಂಬಲದ ಕುರಿತು ಮಾತುಕತೆ ಕೂಡ ನಡೆದಿದೆ ಎಂದಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ್

22 ವರ್ಷ ಅಧಿಕಾರದಲ್ಲಿದ್ದ ಅನಂತಕುಮಾರ್​​ ಹೆಗಡೆ ಈ ಜಿಲ್ಲೆಗೆ ಯಾವೊಂದು ಅಭಿವೃದ್ಧಿ ಕಾರ್ಯ ಮಾಡಿಲ್ಲ. ಇದೇ ಕಾರಣಕ್ಕೆ ಅವರ ಅಭಿವೃದ್ಧಿ ಕಾರ್ಯ ಮುಂದಿಟ್ಟು ಮತ ಕೇಳುವ ಬದಲು ಮೋದಿಗೆ ಮತ ನೀಡಿ ಎನ್ನುತ್ತಿದ್ದಾರೆ. ಜನರು ಬದಲಾವಣೆ ಬಯಸುತ್ತಿದ್ದು, ಈ ಸಾರಿ ಹೆಗಡೆಗೆ ಸೋಲು ನಿಶ್ಚಿತ ಎಂದಿದ್ದಾರೆ.

ಎಲ್ಲ ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಂಡು, ಗೆಲುವಿಗೆ ಸಂಘಟನಾತ್ಮಕವಾಗಿ ಹೋರಾಡಲಾಗುವುದು. ಪ್ರತೀ ಕ್ಷೇತ್ರದಲ್ಲಿ ಎರಡು ದಿನ ಮಾತ್ರ ಪ್ರಚಾರ ಮಾಡಲು ಸಮಯ ಸಿಗಲಿದೆ. ಸ್ಟಾರ್ ಪ್ರಚಾರಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್​ನಿಂದ ಡಿ.ಕೆ.ಶಿವಕುಮಾರ್​ ಜಿಲ್ಲೆಗೆ ಆಗಮಿಸಲಿದ್ದಾರೆ. ಕುಮಾರಸ್ವಾಮಿಯವರು ಜಿಲ್ಲೆಯಲ್ಲಿ ಕನಿಷ್ಠ 3 ದಿನಗಳ ಕಾಲ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

ಶಿರಸಿ : 
ಉತ್ತರ ಕನ್ನಡ ಜಿಲ್ಲೆಯಲ್ಲಿ ಅನಂತಕುಮಾರ ಹೆಗಡೆ ಮೇಲೆ ಅತೃಪ್ತಗೊಂಡ ಬಿಜೆಪಿ ಪ್ರಮುಖರ ಬೆಂಬಲ ಈ ಬಾರಿ ಜೆಡಿಎಸ್ ಗೆ ಸಿಗಲಿದೆ ಎಂದು ಲೋಕಸಭಾ ಚುನಾವಣೆ ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ್ ಹೇಳಿದರು. 
ಶಿರಸಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಅನಂತಕುಮಾರ ಹೆಗಡೆ ಬೆಂಬಲಿಸಿದ ಶೇಕಡಾ ೭೫ರಷ್ಟು ಮತದಾರರು ಹಾಗೂ ಬಿಜೆಪಿ ಪ್ರಮುಖರು ಹೆಗಡೆ ಅವರ ನಡೆಯಿಂದ ಈ ಬಾರಿ ಅತೃಪ್ತರಾಗಿದ್ದಾರೆ. ಹಾಗಾಗಿ ಈ ಬಾರಿ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆ. ಈಗಾಗಲೇ ಬೆಂಬಲದ  ಕುರಿತು ಮಾತುಕತೆ ಕೂಡ ನಡೆದಿದೆ ಎಂದರು.

 ೨೨ ವರ್ಷ ಅಧಿಕಾರದಲ್ಲಿದ್ದ ಅನಂತಕುಮಾರ ಹೆಗಡೆ ಈ ಜಿಲ್ಲೆಗೆ ಯಾವೊಂದು ಅಭಿವೃದ್ಧಿ ಕಾರ್ಯ ಮಾಡಿಲ್ಲ. ಇದೇ ಕಾರಣಕ್ಕೆ ಅವರ ಅಭಿವೃದ್ಧಿ ಕಾರ್ಯ ಮುಂದಿಟ್ಟು ಮತ ಕೇಳುವ ಬದಲು ಮೋದಿಗೆ ಮತ ನೀಡಿ ಎನ್ನುತ್ತಿದ್ದಾರೆ. ಜನರು ಬದಲಾವಣೆ ಬಯಸುತ್ತಿದ್ದು, ಈ ಸಾರಿ ಹೆಗಡೆಗೆ ಸೋಲು ನಿಶ್ಚಿತ ಎಂದರು. 

 ಮಾ.೨೮ರಿಂದ ಅಧಿಕೃತವಾಗಿ ಪ್ರಚಾರದಲ್ಲಿ ತೊಡಗಲಾಗುವುದು. ಎಲ್ಲ ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಂಡು ಗೆಲುವಿಗೆ ಸಂಘಟನಾತ್ಮಕವಾಗಿ ಹೋರಾಡಲಾಗುವುದು. ಪ್ರತೀ ಕ್ಷೇತ್ರದಲ್ಲಿ ಎರಡು ದಿನ ಮಾತ್ರ ಪ್ರಚಾರ ಮಾಡಲು ಸಮಯ ಸಿಗಲಿದೆ. ಸ್ಟಾರ್ ಪ್ರಚಾರಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್ನ ಡಿ.ಕೆ.ಶಿವಕುಮಾರ ಜಿಲ್ಲೆಗೆ ಆಗಮಿಸಲಿದ್ದಾರೆ. ಕುಮಾರಸ್ವಾಮಿಯವರು ಜಿಲ್ಲೆಯಲ್ಲಿ ಕನಿಷ್ಠ ೩ ದಿನಗಳ ಕಾಲ ಪ್ರಚಾರ ನಡೆಸಲಿದ್ದಾರೆ ಎಂದರು.
.......
ಸಂದೇಶ ಭಟ್ ಶಿರಸಿ. 

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.