ETV Bharat / state

ಎರಡು ವರ್ಷಗಳ ನಂತರ ತಲೆ ಎತ್ತುತ್ತಿರುವ ಗಣೇಶನ ದೊಡ್ಡ ಮೂರ್ತಿಗಳು.. ಶಿರಸಿಯಲ್ಲಿ ಚೌತಿ ತಯಾರಿ - History and Culture about Ganeshotsav

ಗಣೇಶೋತ್ಸವ ಮಂಟಪಕ್ಕೆ ಭರದಿಂದ ತಯಾರಿ ನಡೆಯುತ್ತಿದ್ದು, ಎರಡು ವರ್ಷದ ಬಳಿಕ ಉತ್ಸವ ಅದ್ಧೂರಿಯಾಗಿಸಲು ಸಮಿತಿಗಳು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ.

Chauthi preparation in Shirsi
ಶಿರಸಿಯಲ್ಲಿ ಚೌತಿ ತಯಾರಿ
author img

By

Published : Aug 27, 2022, 5:20 PM IST

Updated : Aug 27, 2022, 5:32 PM IST

ಶಿರಸಿ: ಕೋವಿಡ್ ಸಾಂಕ್ರಾಮಿಕದ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ಸಂಭ್ರಮ ಕಳೆದುಕೊಂಡಿದ್ದ ಸಾರ್ವಜನಿಕ ಗಣೇಶೋತ್ಸವ ಆಚರಣೆ ಈ ಬಾರಿ ಕಳೆಗಟ್ಟಿದೆ. ಇದಕ್ಕಾಗಿ ಶಿರಸಿ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಭರ್ಜರಿ ತಯಾರಿ ನಡೆದಿದ್ದು, ಉತ್ಸವ ಆಯೋಜಿಸುವ ಸಮಿತಿಗಳು ಭರದ ಸಿದ್ಧತೆಯಲ್ಲಿವೆ. ಕಳೆದ ಎರಡು ವರ್ಷಗಳಿಂದ ಉತ್ಸವಕ್ಕೆ ವಿಧಿಸಿದ್ದ ನಿರ್ಬಂಧಗಳು ಈ ಬಾರಿ ಇಲ್ಲದ ಕಾರಣ ಹಬ್ಬದ ಸಂಭ್ರಮ ಇಮ್ಮಡಿಗೊಳ್ಳುವ ಸಾಧ್ಯತೆ ಇದೆ.

ಹಿಂದಿನ ಎರಡು ಗಣೇಶ ಚತುರ್ಥಿ ಹಬ್ಬಗಳಲ್ಲೂ ಸಾರ್ವಜನಿಕವಾಗಿ ಪೂಜಿಸಲ್ಪಡುವ ಗಣೇಶಮೂರ್ತಿ ಎರಡು ಅಡಿ ಮೀರಿರಬಾರದು ಎಂಬ ನಿಯಮ ಹೇರಲಾಗಿತ್ತು. ಹೀಗಾಗಿ ದೊಡ್ಡ ಮೂರ್ತಿಗಳು ಕಾಣದಂತಾಗಿತ್ತು. ಈಗ ಪುನಃ ಎಲ್ಲೆಡೆ ಸಾರ್ವಜನಿಕ ಉತ್ಸವಕ್ಕಾಗಿ ದೊಡ್ಡ ಗಾತ್ರದ ಮೂರ್ತಿಗಳು ಸಿದ್ಧಗೊಳ್ಳತೊಡಗಿವೆ. ಶಿರಸಿ ತಾಲೂಕಿನಲ್ಲಿ ಸುಮಾರು 48ಕ್ಕೂ ಹೆಚ್ಚು ಕಡೆಗಳಲ್ಲಿ ಸಾರ್ವಜನಿಕ ಉತ್ಸವ ಆಯೋಜನೆಗೊಳ್ಳುತ್ತಿದ್ದು, ಅಲ್ಲಿ ಪ್ರತಿಷ್ಠಾಪನೆಗೊಳ್ಳುವ ಮೂರ್ತಿಗಳನ್ನು ಕಲಾವಿದರು ನಿರ್ಮಿಸುತ್ತಿದ್ದಾರೆ.

ಶಿರಸಿಯಲ್ಲಿ ಚೌತಿ ತಯಾರಿ

ಜತೆಗೆ ಗಣೇಶೋತ್ಸವ ಮಂಟಪಕ್ಕೆ ಭರದಿಂದ ತಯಾರಿ ನಡೆಯುತ್ತಿದ್ದು, ಎರಡು ವರ್ಷದ ಬಳಿಕ ಉತ್ಸವ ಅದ್ಧೂರಿಯಾಗಿಸಲು ಸಮಿತಿಗಳು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ಆಕರ್ಷಕ ರೂಪಕ, ಕಲಾಕೃತಿಗಳ ಸ್ಥಾಪನೆ, ಸ್ಪರ್ಧಾ ಕಾರ್ಯಕ್ರಮಗಳ ಆಯೋಜನೆಗೂ ತಯಾರಿ ಮಾಡಿಕೊಂಡಿವೆ. ದೇವಿಕೆರೆ, ಮರಾಠಿಕೊಪ್ಪ, ಶಿವಾಜಿಚೌಕ, ಹನುಮಗಿರಿ ಸೇರಿದಂತೆ ಹಲವು ಕಡೆಗಳಲ್ಲಿ ಈಗಾಗಲೇ ಹಬ್ಬದ ವಾತಾವರಣ ಕಳೆಗಟ್ಟುವ ತಯಾರಿ ನಡೆದಿದೆ.

ಒಟ್ಟಾರೆಯಾಗಿ ನಿರ್ಬಂಧಗಳಿಂದಾಗಿ ಕಳೆದ ಎರಡು ವರ್ಷ ಹಬ್ಬಗಳಲ್ಲಿ ಸಣ್ಣ ಮೂರ್ತಿಗಳಿಗೆ ಮಾತ್ರ ಬೇಡಿಕೆ ಇಡಲಾಗುತ್ತಿತ್ತು. ಈಗ ದೊಡ್ಡ ಗಾತ್ರದ ಮೂರ್ತಿಗಳಿಗೆ ಈ ಬಾರಿ ಪುನಃ ಬೇಡಿಕೆ ಬಂದಿದ್ದು, ಇದು ಕಲಾಕಾರರಿಗೂ ಅನುಕೂಲ ಆಗಿದೆ. ಅದೇ ರೀತಿ ಸಾರ್ವಜನಿಕ ಗಣೇಶೋತ್ಸವ ದೊಡ್ಡ ಗಾತ್ರದ ಮೂರ್ತಿಗಳಿಂದ ಶೋಭೆ ಪಡೆದುಕೊಳ್ಳಲಿದ್ದು, ಮತ್ತದೇ ಮೆರಗು ಬರುವ ಸಾಧ್ಯತೆಯಿದೆ.

ಇದನ್ನೂ ಓದಿ : ಬೆಂಗಳೂರಲ್ಲಿ ಅದ್ಧೂರಿ ಗಣೇಶೋತ್ಸವಕ್ಕೆ ಬಿಬಿಎಂಪಿ ಒಪ್ಪಿಗೆ.. ಆದ್ರೆ

Last Updated : Aug 27, 2022, 5:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.