ETV Bharat / state

ಕಾರವಾರ: 89 ವರ್ಷಗಳ ಬಳಿಕ ಗೊದಮೊಟ್ಟೆ ಮರು ಸಂಶೋಧಿಸಿದ ತಂಡ

ಜೀವವೈವಿಧ್ಯ ಸಂಶೋಧಕ, ಶಿರಸಿ ತಾಲೂಕಿನ ವರ್ಗಾಸರದ ಅಮಿತ ಹೆಗಡೆ ಹಾಗೂ ಅವರ ತಂಡ 89 ವರ್ಷಗಳ ನಂತರ ಗೊದಮೊಟ್ಟೆ ಕುರಿತು ಮರುಅನ್ವೇಷಣೆ ಮಾಡಿದೆ.

tadpole
ಗೊದಮೊಟ್ಟೆ
author img

By

Published : Mar 4, 2023, 2:23 PM IST

Updated : Mar 4, 2023, 2:30 PM IST

ಕಾರವಾರ: 89 ವರ್ಷಗಳ ಬಳಿಕ ಬೆಟ್ಟದ ಗಾಳಿಚೀಲಗಪ್ಪೆ (Jerdon’s Narrow mouthed frog) ಗೊದಮೊಟ್ಟೆಯ (Tadpole) ಮರು ಅನ್ವೇಷಣೆಯನ್ನು ಜೀವ ವೈವಿಧ್ಯ ಸಂಶೋಧಕ, ಶಿರಸಿ ತಾಲೂಕಿನ ವರ್ಗಾಸರದ ಅಮಿತ ಹೆಗಡೆ ಹಾಗೂ ತಂಡ ನಡೆಸಿದೆ.

ಕಪ್ಪೆಯು ಪಶ್ಚಿಮ ಘಟ್ಟದ ಕರ್ನಾಟಕ ಭಾಗದಲ್ಲಿರುವ ಪುಷ್ಪಗಿರಿ ಪರ್ವತ ಶ್ರೇಣಿಯಿಂದ ಹಿಡಿದು ತಮಿಳುನಾಡು ಭಾಗದ ತಿರುನಲ್ವೇಲಿಯ ಮುರುಂಗಾ ಮೊಟ್ಟೈ ಅರಣ್ಯಭರಿತ ಪರ್ವತ ಶ್ರೇಣಿಗಳವರೆಗೆ ಅಂದರೆ ಸಮುದ್ರಮಟ್ಟದಿಂದ 800-1916 ಮೀಟರ್ ಇರುವುವಿಕೆಯನ್ನ ಗುರುತಿಸಲಾಗಿದೆ. ಇದರಲ್ಲಿ ಗಾಳಿಚೀಲಗಪ್ಪೆಯು, ಪಶ್ಚಿಮ ಘಟ್ಟದಿಂದ ಉತ್ತರದ ವ್ಯಾಪ್ತಿಯ ಹಾಗೂ ಸಮುದ್ರಮಟ್ಟದಿಂದ ಎತ್ತರದ ಹೊಸ ಪರಿಧಿಗಳಲ್ಲಿ ವಾಸವಿರುವ ದಾಖಲೆಗಳನ್ನ ಒಳಗೊಂಡಿದೆ. ಹೊಸ ಶ್ರೇಣಿಯ ಆಧಾರದ ಮೇಲೆ ಪ್ರಭೇದದ ಐಯುಸಿಎನ್ (IUCN) ಸಂರಕ್ಷಣಾ ಸ್ಥಿತಿಯ ಕುರಿತು ಚರ್ಚಿಸಲಾಗಿದೆ.

ಇದನ್ನೂ ಓದಿ: ಕೊರೊನಾ ಸೋಂಕು ತಡೆಗೆ ಕ್ರಮ: ರಾಯ್‌ಪುರ NIT​ ವಿದ್ಯಾರ್ಥಿಗಳ ಹೊಸ ಅನ್ವೇಷಣೆ

ಸಂಶೋಧಕ ಅಮಿತ ಹೆಗಡೆ, ಪ್ರೊ. ಗಿರೀಶ ಕಾಡದೇವರು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಸಂತಾನೋತ್ಪತ್ತಿ ನಡವಳಿಕೆ ಮತ್ತು ಜೀವ ಸಂವಹನ ಪ್ರಯೋಗಾಲಯ, ಪ್ರಾಣಿ ಶಾಸ್ತ್ರ ವಿಭಾಗದ ಹಾಗೂ ಪುಣೆಯ ಝೂವಾಲಾಜಿಕಲ್ ಸರ್ವೆ ಆಫ್ ಇಂಡಿಯಾದ (ZSI) ವಿಜ್ಞಾನಿ ಕೆ.ಪಿ.ದಿನೇಶ ರವರ ಸಹಯೋಗದಲ್ಲಿ ಈ ಬೆಟ್ಟದ ಗಾಳಿಚೀಲಗಪ್ಪೆಯ ಗೊದಮೊಟ್ಟೆಯನ್ನು ಮರು ಶೋಧಿಸಿದ್ದಾರೆ.

Team of Biodiversity Researchers
ಜೀವವೈವಿಧ್ಯ ಸಂಶೋಧಕರ ತಂಡ

ಇದನ್ನೂ ಓದಿ: ಆಲೂಗಡ್ಡೆಯಾಕಾರದ ಗ್ರಹವನ್ನು ಪತ್ತೆಹಚ್ಚಿದ ವಿಜ್ಞಾನಿಗಳು!

1934 ರಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಪ್ರಾಣಿಶಾಸ್ತ್ರಜ್ಞ ಪಾರ್ಕರ್ ಅವರ ಸಣ್ಣ ವಿವರಣೆಯ ನಂತರ ಇದು ಸರಿ ಸುಮಾರು 89 ವರ್ಷಗಳ ಬಳಿಕ ಈ ಪ್ರಭೇದದ ಗೊದಮೊಟ್ಟೆಗಳ ಮೇಲಿನ ಸಂಶೋಧನಾತ್ಮಕ ವರದಿಯಾಗಿದೆ. ಈ ಸಂಶೋಧನೆಯು ಪ್ರತಿಷ್ಠಿತ ‘ಜರ್ನಲ್ ಆಫ್ ಥ್ರೆಟೆನ್ಡ್ ಟ್ಯಾಕ್ಸಾ‌ನಲ್ಲಿ’ (Journal of Threatened Taxa) ಕನ್ನಡ ಸಾರಾಂಶದೊಂದಿಗೆ ಪ್ರಕಟಗೊಂಡಿದೆ.

ಇದನ್ನೂ ಓದಿ: ರಾಜಧಾನಿಯಲ್ಲಿ ಬೆಕ್ಕುಗಳ ಸಾವು: ಮೂಢನಂಬಿಕೆಗೆ ಬಲಿಯಾದವೇ ಮಾರ್ಜಾಲಗಳು?

ಪ್ರಸ್ತುತ ಸಂಶೋಧನೆಯು ಬೆಟ್ಟದ ಗಾಳಿಚೀಲಗಪ್ಪೆಯ (ವೈಜ್ಞಾನಿಕ ಹೆಸರು: Uperodon montanus (ಜೆರ್ಡನ್, 1853)) ಗೊದಮೊಟ್ಟೆಯ ಕೆಲವು ಬೆಳವಣಿಗೆ ಹಂತ ಹಾಗೂ ಬಾಹ್ಯ ರೂಪವಿಜ್ಞಾನ ವಿವರಣೆ, ಆವಾಸಸ್ಥಾನ, ಅದರ ಪರಿಸರ ಹಾಗೂ ಇನ್ನಿತರೆ ವೈಶಿಷ್ಟ್ಯಗಳ ಬಗ್ಗೆ ಸಂಶೋಧಿಸಲಾಗಿದೆ. ಈ ಕಪ್ಪೆಯು ಪಶ್ಚಿಮ ಘಟ್ಟದ ಕರ್ನಾಟಕ ಭಾಗದ ಪುಷ್ಪಗಿರಿ ಪರ್ವತ ಶ್ರೇಣಿಯಿಂದ ತಮಿಳುನಾಡು ಭಾಗದ ತಿರುನಲ್ವೇಲಿಯ ಮುರುಂಗಾ ಮೊಟ್ಟೈ ಅರಣ್ಯಭರಿತ ಪರ್ವತ ಶ್ರೇಣಿಗಳವರೆಗೆ (ಸಮುದ್ರಮಟ್ಟದಿಂದ 800-1916ಮೀಟರ್) ಇರುವುವಿಕೆಯನ್ನು ಗುರುತಿಸಲಾಗಿದೆ.

ಕಪ್ಪೆಯು, ಪಶ್ಚಿಮ ಘಟ್ಟದಿಂದ ಉತ್ತರದ ವ್ಯಾಪ್ತಿಯ ಹಾಗೂ ಸಮುದ್ರಮಟ್ಟದಿಂದ ಎತ್ತರದ ಹೊಸ ಪರಿಧಿಗಳ ದಾಖಲೆಗಳನ್ನು ಒಳಗೊಂಡಿದೆ. ಹೊಸ ಶ್ರೇಣಿಯ ಆಧಾರದ ಮೇಲೆ ಪ್ರಭೇದದ ಐ ಯು ಸಿ ಎನ್ (IUCN) ಸಂರಕ್ಷಣಾ ಸ್ಥಿತಿಯ ಬಗ್ಗೆಯೂ ಚರ್ಚಿಸಲಾಗಿದೆ. ಈ ಮೊದಲು ಬೆಟ್ಟದ ಗಾಳಿಚೀಲಗಪ್ಪೆಯು ಪಶ್ಚಿಮ ಘಟ್ಟಗಳಲ್ಲಿ ವ್ಯಾಪಕವಾಗಿ ಹರಡಿದೆ ಎಂದು ದಾಖಲಾಗಿತ್ತು. ಆದರೆ ದಾಖಲಿತ ಶ್ರೇಣಿಗಳಲ್ಲಿ ಈ ಪ್ರಭೇದವನ್ನು ನೋಡಲು ಸಾಧ್ಯವಾಗುತ್ತಿಲ್ಲ. ಬಹುಶಃ ಇದೇ ಕುಲದ ಕಪ್ಪೆಗಳು ನೋಡಲು ಒಂದೇ ರೀತಿ ಕಾಣಿಸುವದರಿಂದ ತಪ್ಪಾಗಿ ಗುರುತಿಸಿರಬಹುದು. ಪ್ರಸ್ತುತ ಸಂಶೋಧನಾ ಅಧ್ಯಯನದ ಪ್ರಕಾರ ಈ ಕಪ್ಪೆಯು ಪಶ್ಚಿಮ ಘಟ್ಟದ ಅರಣ್ಯಭರಿತ ಪರ್ವತ ಶ್ರೇಣಿಗಳಿಗೆ (ಸಮುದ್ರಮಟ್ಟದಿಂದ 800-1916ಮೀಟರ್) ಮಾತ್ರ ಸ್ಥಳೀಯವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಇದನ್ನೂ ಓದಿ: ಕಾಲಿನಲ್ಲೇ ಹ್ಯಾಂಡಲ್​ ಮಾಡೋ ಹ್ಯಾಂಡ್​ವಾಶ್​ ಯಂತ್ರ: ಈ ವಿಜ್ಞಾನಿಯ ವಿಶಿಷ್ಟ ಅನ್ವೇಷಣೆ

ಉಭಯಜೀವಿಗಳಲ್ಲಿ 3 ಉಪಜಾತಿಗಳಿವೆ, ಅದರಲ್ಲಿ ಈ ಕಪ್ಪೆಗಳು ಒಂದು. ಉಭಯಜೀವಿಗಳ ಜೀವನಶೈಲಿಯನ್ನು ನೋಡಿದಾಗ ಹೆಸರೇ ಸೂಚಿಸುವಂತೆ ಸರ್ವೇ ಸಾಮಾನ್ಯವಾಗಿ ಎರಡು ಜೀವನ ಕ್ರಮವನ್ನು ಹೊಂದಿದೆ. ಮೊದಲನೆಯದಾಗಿ, ಮೀನಿನಂತೆ ಕಾಣುವ ಬಾಲಗಪ್ಪೆ(ಬಾಲ್ಯಾವಸ್ಥೆ)(ಶೈಶಾವಸ್ಥೆ) ಅಥವಾ ಗೊದಮೊಟ್ಟೆ ಹಂತ ರೂಪಾಂತರಗೊಂಡ ನಂತರ ಪ್ರೌಡಾವಸ್ಥೆಯ ಕಪ್ಪೆ.

ಈ ಎರಡು ಹಂತದಲ್ಲಿ ಆಹಾರ, ಉಸಿರಾಟ, ಶರೀರ ಅಥವಾ ಬಾಹ್ಯ ರೂಪ ಲಕ್ಷಣಗಳು, ಸೂಕ್ಷ್ಮ ಆವಾಸ ಸ್ಥಾನ, ಜೈವಿಕ ಪರಿಸರದೊಂಧಿಗೆ ಸಂಬಂಧ ಇವುಯೆಲ್ಲವೂ ಸಂಪೂರ್ಣ ವಿಭಿನ್ನ. ಹಾಗಾಗಿ, ಈ ಉಭಯಜೀವಿಗಳ ಸಂಪೂರ್ಣ ಅಧ್ಯಯನ ಅಥವಾ ತಿಳುವಳಿಕೆಯು ಸಮಗ್ರ ಸಂರಕ್ಷಣೆಗೆ ತಳಪಾಯವಾಗಿರುತ್ತದೆ. ಈವರೆಗೆ ಕಂಡುಹಿಡಿದ ಪ್ರಭೇದಗಳಲ್ಲಿ ನೋಡಿದಾಗ ಗೊದಮೊಟ್ಟೆಗಳ ಅಧ್ಯಯನ ಗಳಂತೂ ವಿರಳಾತಿ ವಿರಳ ಅಥವಾ ಕೆಲವೇ ಕೆಲವು ಅಧ್ಯಯನಗಳಿವೆ. ಇದು ಅನೇಕ ಉಭಯಜೀವಿಗಳ ಸಂಪೂರ್ಣ ಜೀವನ ಚಕ್ರದ ತಿಳುವಳಿಕೆಯ ಕೊರತೆಯನ್ನು ಬಿಂಬಿಸುತ್ತದೆ ಎಂದು ಸಂಶೋಧಕ ಅಮಿತ ಹೆಗಡೆ ತಿಳಿಸಿದರು.

'ಬಾಲ್ಯದಲ್ಲಿ ಓದಿದ ಪುಸ್ತಕಗಳಲ್ಲಿ ಕೆಲವು ಕಪ್ಪೆಗಳು ಪಶ್ಚಿಮ ಘಟ್ಟಗಳಿಗೆ ಮಾತ್ರ ಕಾಣಸಿಗುತ್ತವೆ ಎಂದು ಓದುತ್ತಿದೆವು. ಆದರೆ ಈಗ ವಿವಿಧ ಅಧ್ಯಯನಗಳಿಂದ ಪಶ್ಚಿಮ ಘಟ್ಟಗಳಲ್ಲಿಯೂ ಇನ್ನು ಕೆಲವು ಸಣ್ಣ ಜೈವಿಕ ಭೌಗೋಳಿಕ ಪ್ರದೇಶಕ್ಕೆ ಹಾಗೂ ಅಲ್ಲಿನ ಸೂಕ್ಷ್ಮ ಆವಾಸಸ್ಥಾನಕ್ಕೆ ಮಾತ್ರವೇ ಸೀಮಿತವಾಗಿವೆ ಎಂದು ತಿಳಿದಿದೆ. ಒಬ್ಬ ಪಶ್ಚಿಮ ಘಟ್ಟಮೂಲದ ಸಂಶೋಧಕನಾಗಿ ಇಲ್ಲಿನ ಅದ್ಭುತ ಜೀವಜಗತ್ತನ್ನು ಹಾಗೂ ಅವುಗಳ ಸೂಕ್ಷ್ಮ ಆವಾಸ ಸ್ಥಾನಗಳನ್ನು ಅಧ್ಯಯನ ಮಾಡುವ ರೋಚಕತೆಯ ಜೊತೆ, ಉಭಯಜೀವಿಗಳ ಸಂಖ್ಯೆಯಲ್ಲಿ ಗಣನೀಯವಾದ ಇಳಿತ ಹಾಗೂ ಹವಾಮಾನ ವೈಪರೀತ್ಯವಾಗುತ್ತಿರುವ ಈ ಶತಮಾನದಲ್ಲಿ ಸಂಶೋಧನೆಯ ಸಮಗ್ರತೆ, ಸಂಪೂರ್ಣತೆ ಹಾಗೂ ಸಂರಕ್ಷಣೆಯ ಜವಾಬ್ದಾರಿಯು ಇದೆ' ಎಂದು ಅವರು ಹೇಳಿದರು.

ಇನ್ನು ಡಾ. ಗಿರೀಶ ಕಾಡದೇವರು ಮಾತನಾಡಿ, 'ಪ್ರಭೇದ ಹಾಗೂ ಅವುಗಳ ಆವಾಸಸ್ಥಾನಗಳ ಅಧ್ಯಯನಗಳಲ್ಲಿ ಪ್ರತಿಯೊಂದು ಸಣ್ಣ ಸಣ್ಣ ಮಾಹಿತಿಗಳನ್ನು ದಾಖಲಿಸುವುದು ಅತ್ಯಮೂಲ್ಯವಾಗಿದೆ. ನಾವು ಹೆಚ್ಚು ತಿಳಿದಷ್ಟು ಹೆಚ್ಚು ಅರ್ಥಮಾಡಿಕೊಳ್ಳುವಲ್ಲಿ ಹತ್ತಿರವಾಗುತ್ತೇವೆ. ಆದರೆ, ಇಂದು ಸಣ್ಣ ಮಾಹಿತಿಗಳನ್ನು ನಿರ್ಲಕ್ಷಿಸುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಈ ಎಲ್ಲಾ ಅಧ್ಯಯನಗಳನ್ನು ಸಹಯೋಗದಲ್ಲಿ ಒಟ್ಟುಗೂಡಿಸಿ ಕೆಲಸ ಮಾಡುವುದರಿಂದ ದೊಡ್ಡ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿದೆ' ಎಂದು ಹೇಳಿದರು.

ವಿಜ್ಞಾನಿ, ಡಾ. ಕೆ.ಪಿ. ದಿನೇಶ ಮಾತನಾಡಿ, 'ಉಭಯಜೀವಿಗಳ ಸಂಖ್ಯೆಗಳ ಗಣನೀಯ ಕ್ಷೀಣಿಸುವಿಕೆ ಮತ್ತು ಪ್ರಭೇದಗಳ ಅವನತಿಯ ಯುಗದಲ್ಲಿ, ಗೊದಮೊಟ್ಟೆಗಳ ದಾಖಲೀಕರಣ ಮತ್ತು ಅವುಗಳ ಆವಾಸಸ್ಥಾನ ಮತ್ತು ಪರಿಸರ ವ್ಯವಸ್ಥೆಯ ಆದ್ಯತೆಯ ಸೂಕ್ಷ್ಮ ವಿವರಗಳು ಪ್ರಭೇದದ ಸಂರಕ್ಷಣೆಗೆ ಮೌಲ್ಯವನ್ನು ಸೇರಿಸುತ್ತವೆ' ಎಂದು ಹೇಳಿದರು.

ಅನೇಕ ಪ್ರಭೇದಗಳ ಜೀವನ ಚಕ್ರ ಮತ್ತು ಸ್ಪಷ್ಟವಾದ ಭೌಗೋಳಿಕ ವ್ಯಾಪ್ತಿಯ ಬಗ್ಗೆ ಯಾವುದೇ ಮಾಹಿತಿಯಿಲ್ಲದೆ ಕೇವಲ ಒಂದೇ ಪ್ರದೇಶದಿಂದ ತಿಳಿದುಬಂದಿದೆ ಎಂಬ ಮಾಹಿತಿಗಳು ಇವೆ. ಇಲ್ಲವಾದಲ್ಲಿ ಒಂದೇ ರೀತಿ ಕಾಣಿಸುವ ಹಲವಾರು ಪ್ರಭೇದಗಳು ಇರುವುದರಿಂದ ಒಂದೇ ಪ್ರಭೇದ ವ್ಯಾಪಕವಾಗಿ ಹರಡಿದೆ ಎಂಬ ತಪ್ಪು ಮಾಹಿತಿಗಳು ಇವೆ ಪ್ರಸ್ತುತ ಅಧ್ಯಯನಗಳು ಇವುಗಳ ಸೂಕ್ಷ್ಮ ಆವಾಸಸ್ಥಾನ ಮತ್ತು ಸಂರಕ್ಷಣೆಗೆ ಮೌಲ್ಯಗಳನ್ನು ಸೇರಿಸುತ್ತವೆ.

ಇದನ್ನೂ ಓದಿ: ಕಾರವಾರದ ಕಡಲ ತೀರದಲ್ಲಿ ಕಡಲಾಮೆಯ 211 ಮೊಟ್ಟೆ ಪತ್ತೆ

Last Updated : Mar 4, 2023, 2:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.