ETV Bharat / state

ಯುಪಿಎಸ್​ಸಿಯಲ್ಲಿ ಉತ್ತರಕನ್ನಡ ಜಿಲ್ಲೆಯ ಮೂವರ ಸಾಧನೆ - UPSC resukt

ಯಲ್ಲಾಪುರ ವೆಂಕಟರಮಣ ಕವಡಿಕೇರಿ ಯಾವುದೇ ಕೋಚಿಂಗ್ ಪಡೆಯದೇ ನಾಗರಿಕ ಸೇವಾ ಪರೀಕ್ಷೆ ಪಾಸ್ ಮಾಡಿದ್ದಾರೆ. ಯಲ್ಲಾಪುರದಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದಿದ್ದ ಅವರು, ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಶನ್​ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದರು..

ಯುಪಿಎಸ್​ಸಿಯಲ್ಲಿ ಉತ್ತರಕನ್ನಡ ಜಿಲ್ಲೆಯ ಮೂವರ ಸಾಧನೆ

author img

By

Published : Aug 4, 2020, 7:43 PM IST

ಕಾರವಾರ : ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್​ಸಿ) ನಡೆಸಿದ್ದ 2019ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಜಿಲ್ಲೆಯ ಮೂವರು ಅಭ್ಯರ್ಥಿಗಳು ರ‍್ಯಾಂಕ್‌ ಪಡೆದು ಸಾಧನೆ ಮಾಡಿದ್ದಾರೆ. ದಾಂಡೇಲಿಯ ಸಚಿನ್ ಹಿರೇಮಠ್‌ಗೆ 213ನೇ ರ‍್ಯಾಂಕ್, ಅಂಕೋಲಾದ ಹೇಮಾ ನಾಯ್ಕ್ 225ನೇ ರ‍್ಯಾಂಕ್‌ ಹಾಗೂ ಯಲ್ಲಾಪುರ ವೆಂಕಟರಮಣ ಕವಡಿಕೇರಿ 363ನೇ ರ‍್ಯಾಂಕ್​ನೊಂದಿಗೆ ಯುಪಿಎಸ್​ಸಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ದಾಂಡೇಲಿಯ ಸಚಿನ್ ಹಿರೇಮಠ್ ಬಿರಿಯಂಪಾಲಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶಿವಾನಂದ ಹೆಚ್ ಹಾಗೂ ಹಸನ್ಮಾಳ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶರ್ಮಿಳಾ ನಾಯ್ಕ್ ದಂಪತಿ ಪುತ್ರನಾಗಿದ್ದಾರೆ. ದಾಂಡೇಲಿಯ ರೋಟರಿ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದಿದ್ದರು. ಬಳಿಕ ಬಂಗೂರ ನಗರ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪಿಯುಸಿಯಲ್ಲಿ ಉತ್ತಮ ಅಂಕದೊಂದಿಗೆ ಸಾಧನೆಗೈದಿದ್ದರು. ಬೆಂಗಳೂರಿನ ಆರ್‌ವಿ ಕಾಲೇಜಿನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದ ಸಚಿನ್​, ಆಂಧ್ರ ಪ್ರದೇಶದಲ್ಲಿದ್ದ ಐಪಿಸಿ ಕಂಪನಿಯಲ್ಲಿ ಸೇವೆ ಸಲ್ಲಿಸಿದ್ದರು.

ಬಳಿಕ ರಾಜೀನಾಮೆ ನೀಡಿ ದೆಹಲಿಯ ವಾಜಿರಾಮ್ & ರವಿ ಐಎಎಸ್ ಕೋಚಿಂಗ್ ಸೆಂಟರ್​ನಲ್ಲಿ ಸತತ ಎರಡು ವರ್ಷಗಳವರೆಗೆ ಕೋಚಿಂಗ್ ಪಡೆದಿದ್ದರು. ಕೋಲ್ಕತ್ತಾದಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಸಹಾಯಕ ನಿರ್ದೇಶಕರಾಗಿ ನೌಕರಿ ದೊರೆತು ಕಳೆದ ಮೂರು ತಿಂಗಳಿನಿಂದ ಸೇವೆ ಸಲ್ಲಿಸುತ್ತಿದ್ದರು. ಇದೀಗ ಯುಪಿಎಸ್​ಸಿ ಪರೀಕ್ಷೆಯಲ್ಲಿ 213ನೇ ರ‍್ಯಾಂಕ್‌ ಪಡೆದಿದ್ದಾರೆ.

ಅಂಕೋಲಾ ತಾಲೂಕಿನ ವಾಸರಕುದ್ರಿಗಿಯ ಹೇಮಾ ನಾಯ್ಕ್, ಶಾಂತರಾಮ ಬೀರಣ್ಣ ನಾಯ್ಕ್ ಹಾಗೂ ರಾಜಮ್ಮ ಅವರ ಪುತ್ರಿ. ಅಂಕೋಲಾದ ಶ್ರೀರಾಮ್ ಸ್ಟಡಿ ಸರ್ಕಲ್‌ ಹಾಗೂ ಬೆಂಗಳೂರಿನ ಇನ್​ಸೈಟ್ಸ್ ಐಎಎಸ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು. ಹೇಮಾ 2017ರಲ್ಲಿ ಸಂದರ್ಶನ ಎದುರಿಸಿದ್ದರಾದರು. ಆದರೆ, ಎರಡನೇ ಬಾರಿಗೆ ಎದುರಿಸಿದ ಸಂದರ್ಶನದಲ್ಲಿ ತೇರ್ಗಡೆ ಹೊಂದಿದ್ದಾರೆ.

ಯಲ್ಲಾಪುರ ವೆಂಕಟರಮಣ ಕವಡಿಕೇರಿ ಯಾವುದೇ ಕೋಚಿಂಗ್ ಪಡೆಯದೇ ನಾಗರಿಕ ಸೇವಾ ಪರೀಕ್ಷೆ ಪಾಸ್ ಮಾಡಿದ್ದಾರೆ. ಯಲ್ಲಾಪುರದಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದಿದ್ದ ಅವರು, ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಶನ್​ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದರು. ಒಟ್ಟು ಐದು ಬಾರಿ ಪರೀಕ್ಷೆ ಎದುರಿಸಿ ಈ ಸಾಧನೆ ಮಾಡಿದ್ದಾರೆ. ಸದ್ಯ ಎಸ್​ಬಿಐ ಬ್ಯಾಂಕ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.