ETV Bharat / state

ನಕಲಿ ಆದಾಯ ತೆರಿಗೆ ಪತ್ರ, ಪಾಸ್​ಪೋರ್ಟ್​ ತಯಾರಿ: ಆರೋಪಿಗಳ ಬಂಧನ - ನಕಲಿ ಪಾಸ್​ಪೋರ್ಟ್​ ತಯಾ

ನಕಲಿ ಆದಾಯ ತೆರಿಗೆ ಪ್ರಮಾಣ ಪತ್ರ ನೀಡಿ ಪಾಸ್​ಪೋರ್ಟ್ ಪಡೆದಿದ್ದ ಹಾಗೂ ನಕಲಿ ಆದಾಯ ತೆರಿಗೆ, ಪಾಸ್​ಪೋರ್ಟ್​ ಮಾಡಿಕೊಟ್ಟ ಆರೋಪಿಗಳನ್ನು ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

Accused
ಆರೋಪಿ
author img

By

Published : Aug 20, 2020, 8:15 PM IST

ಶಿರಸಿ (ಉತ್ತರ ಕನ್ನಡ): ವಿದೇಶಕ್ಕೆ ಹೋಗಬೇಕು ಎನ್ನುವ ಉದ್ದೇಶದಿಂದ ನಕಲಿ ಆದಾಯ ತೆರಿಗೆ ಪ್ರಮಾಣ ಪತ್ರ ನೀಡಿ ಪಾಸ್​ಪೋರ್ಟ್ ಪಡೆದಿದ್ದ ಹಾಗೂ ನಕಲಿ ಆದಾಯ ತೆರಿಗೆ ಪಾಸ್​ಪೋರ್ಟ್​ ಮಾಡಿಕೊಟ್ಟ ಆರೋಪಿಗಳನ್ನು ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪಾಸ್​ಪೋರ್ಟ್​ ಪಡೆಯಲು ಪಾಸ್​ಪೋರ್ಟ್ ಅಧಿಕಾರಿಗಳಿಗೆ ನಕಲಿ ಆದಾಯ ತೆರಿಗೆ ಪ್ರಮಾಣ ಪತ್ರ ನೀಡಿದ ಶಿರಸಿ ತಾಲೂಕಿನ ಹುಲೇಕಲ್ ಗ್ರಾಮದ ಹಂಚರಕಟ್ಟಾ ಮುಸ್ಲಿಂ ಗಲ್ಲಿಯ ನಿವಾಸಿ ಅಬ್ದುಲ್‌ ರೆಹಮಾನ್ ಅಬ್ದುಲ್ ಗಫಾರ್ ಸಾಬ್ (22) ಹಾಗೂ ನಕಲಿ ಪಾಸ್ ಪೋರ್ಟ್​ ಸೃಷ್ಟಿಸಿ ಕೊಟ್ಟ ಹುಬ್ಬಳ್ಳಿಯ ಶ್ವೇತಾ ಯಾನೆ ಲಕ್ಷ್ಮೀ ಹಾಗೂ ಕಲಬುರ್ಗಿಯ ನಿಯಾಜ್ ಅಹ್ಮದ್ ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತ ಆರೋಪಿಗಳಿಂದ ಪಾಸ್​ಪೋರ್ಟ್ ಮಾಡಲು ಬಳಸುತ್ತಿದ್ದ ಲ್ಯಾಪ್​ಟಾಪ್, ಎರಡು ಮೊಬೈಲ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೊದಲ ಆರೋಪಿ ಅಬ್ದುಲ್ ರೆಹಮಾನ್ ಅಬ್ದುಲ್ ಗಫಾರ್ ಸಾಬ್ ಈ ಮೊದಲು ಪಾಸ್​ಪೋರ್ಟ್ ಪಡೆದಿದ್ದರೂ ಕೂಡಾ ಆತ ಎಸ್ಎಸ್ಎಲ್​ಸಿ ಪಾಸಾಗದಿದ್ದ ಕಾರಣದಿಂದಾಗಿ ಆತನಿಗೆ ಇಸಿಎನ್ಆರ್ (ಇಮಿಗ್ರೇಶನ್ ಚೆಕ್ ನಾಟ್ ರಿಕ್ವಾಯರ್ಡ್)ದೊರೆತಿರಲಿಲ್ಲ. ಈ ಕಾರಣದಿಂದಾಗಿ ಆತ ಪಾಸ್​ಪೋರ್ಟ್ ಪಡೆಯಲು ಆರೋಪಿಗಳಾದ ಶ್ವೇತಾ ಮತ್ತು ನಿಯಾಜ ಅಹ್ಮದ್​ರವರಿಂದ ನಕಲಿ ಆದಾಯ ತೆರಿಗೆ ಪ್ರಮಾಣ ಪತ್ರ ಪಡೆದು ಅರ್ಜಿ ಹಾಕಿದ್ದ. ವಿಚಾರಣೆ ನಡೆಸಿದ ತೆರಿಗೆ ಅಧಿಕಾರಿಗಳು ನಖಲಿ ಆದಾಯ ತೆರಿಗೆ ಪ್ರಮಾಣ ಪಡೆದಿರುವ ಬಗ್ಗೆ ಶಿರಸಿ ಗ್ರಾಮೀಣ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.