ಕಾರವಾರ(ಉತ್ತರ ಕನ್ನಡ): ಮದುವೆ ದಿಬ್ಬಣದ ಜನರನ್ನು ಕರೆದೊಯ್ಯುತ್ತಿದ್ದ ವಾಹನ ಮತ್ತು ಎದುರುಗಡೆಯಿಂದ ಬಂದ ಕಾರಿನ ಮಧ್ಯೆ ಡಿಕ್ಕಿಯಾಗಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟು, 8ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಸಿದ್ದಾಪುರ ತಾಲೂಕಿನ ಶಿರೂರು ಬಳಿ ನಡೆದಿದೆ.
ಸಿದ್ದಾಪುರ ತಾಲೂಕಿನ ನಿಲ್ಕುಂದ ಪಂಚಾಯತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಘಟಕ ಅಧ್ಯಕ್ಷರಾಗಿದ್ದ ಮಂಜುನಾಥ ಬಿ ಗೌಡ ಕಬ್ಬಿನ್ಮನೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮದುವೆ ಮುಗಿಸಿ ದಿಬ್ಬಣದ ಜನರು ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ.
![ದಿಬ್ಬಣದ ಜನ ತುಂಬಿದ್ದ ವಾಹನ-ಕಾರು ಮಧ್ಯೆ ಡಿಕ್ಕಿ](https://etvbharatimages.akamaized.net/etvbharat/prod-images/kn-kwr-03-accident-ka10044_22052022213453_2205f_1653235493_952.jpg)
ಇನ್ನು ಎರಡು ವಾಹನಗಳಲ್ಲಿದ್ದ 8 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಎಲ್ಲರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಇದನ್ನೂ ಓದಿ: ರಸ್ತೆ ಬದಿ ನಿಂತಿದ್ದ ಟ್ರಕ್ಗೆ ಬುಲೆರೋ ಡಿಕ್ಕಿ: ಮದುವೆ ಸಮಾರಂಭದಿಂದ ಬರುತ್ತಿದ್ದ 9 ಜನರ ದಾರುಣ ಸಾವು)