ETV Bharat / state

ಅಮೆರಿಕದಲ್ಲಿನ ಉದ್ಯೋಗ‌ ನಂಬಿ ಮೋಸ ಹೋದ ಉತ್ತರಕನ್ನಡ ಯುವತಿ: ಕಳೆದುಕೊಂಡಿದ್ದು ಅರ್ಧ ಕೋಟಿ! - karawara latest news

ವಂಚಕರ ಮಾತು ನಂಬಿದ ಯುವತಿ ಅವರು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ 2020ರ ಆಗಸ್ಟ್ 13 ರಿಂದ 2021ರ ಜನವರಿ 17ರ ವರೆ 5 ತಿಂಗಳುಗಳ ಅವಧಿಯಲ್ಲಿ ಒಟ್ಟ 57,14,749 ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದಾರೆ.

A young woman cheated by frauds in the name of job in USA
ಅಮೇರಿಕಾದಲ್ಲಿನ ಉದ್ಯೋಗ‌ ನಂಬಿ ಮೋಸ ಹೋದ ಕಾರವಾರ ಯುವತಿ; ಕಳೆದುಕೊಂಡಿದ್ದು ಅರ್ಧ ಕೋಟಿ!
author img

By

Published : Feb 12, 2021, 2:14 PM IST

Updated : Feb 12, 2021, 5:02 PM IST

ಕಾರವಾರ: ಅಮೆರಿಕದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಇ-ಮೇಲ್ ಮೂಲಕ ಸಂಪರ್ಕಿಸಿದ ವಂಚಕರು ಯುವತಿಯೊಬ್ಬಳಿಗೆ ಬರೋಬ್ಬರಿ ಅರ್ಧ ಕೋಟಿಗೂ ಹೆಚ್ಚಿನ ಹಣ ವಂಚಿಸಿರುವ ಘಟನೆ ಹೊನ್ನಾವರದಲ್ಲಿ ಬೆಳಕಿಗೆ ಬಂದಿದೆ.

ಹೊನ್ನಾವರ ತಾಲೂಕಿನ ಗುಣವಂತೆಯ ನೇತ್ರಾವತಿ ನಾಗಪ್ಪ ಗೌಡ ಎಂಬ ಯುವತಿಯೇ ಹಣ ಕಳೆದುಕೊಂಡವಳಾಗಿದ್ದು, ಈ ಬಗ್ಗೆ ಕಾರವಾರ ಸಿಇಎನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನೇತ್ರಾವತಿ ಅವರ ಇ - ಮೇಲ್ ಖಾತ ಮೂಲಕ ಸಂಪರ್ಕಿಸಿದ ವಂಚಕರು ಅವರಿಗೆ ಅಮೆರಿಕದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ್ದು, ಅದನ್ನು ನಂಬಿದ ಯುವತಿಯು ಅವರನ್ನು ಮೊಬೈಲ್ ಸಂಖ್ಯೆ ಮೂಲಕ ಸಂಪರ್ಕಿಸಿದ್ದಾಳೆ. ಬಳಿಕ ವಂಚಕರು ಯುವತಿಯ ವಾಟ್ಸ್​ಆ್ಯಪ್​ಗೆ ಪ್ರಶ್ನೆ ಪತ್ರಿಕೆಯೊಂದನ್ನು ಕಳುಹಿಸಿ ಅದಕ್ಕೆ ಉತ್ತರಿಸುವಂತೆ ತಿಳಿಸಿದ್ದಾರೆ.

ಯುವತಿ ತನ್ನ ಉತ್ತರ ಕಳುಹಿಸಿಕೊಟ್ಟಿದ್ದು, ಸೈಬರ್ ವಂಚಕರು ಯುವತಿಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿ ಪಾಸ್‌ಪೋರ್ಟ್ ಚಾರ್ಜ್, ವೀಸಾ ಚಾರ್ಜ್, ಮೆಡಿಕಲ್ ರಿಪೋರ್ಟ್, ಅಪ್ಲಿಕೇಶನ್ ಫೀಸ್, ಎನ್.ಓ.ಸಿ ಫೀಸ್, ಹೆಲ್ತ್ ಇನ್ಸುರೆನ್ಸ್ ಫೀಸ್ ಇತ್ಯಾದಿ ಹೀಗೆ ವಿವಿಧ ತೆರಿಗೆ, ಸುಂಕ ಕಟ್ಟುವಂತೆ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: ಎತ್ತರ 4 ಅಡಿ, ತೂಕ ಬರೋಬ್ಬರಿ 77.ಕೆ.ಜಿ : ಮರುಜೀವ ನೀಡಿದ ವಿಕ್ರಂ ಆಸ್ಪತ್ರೆ ವೈದ್ಯರು

ವಂಚಕರ ಮಾತನ್ನು ನಂಬಿದ ಯುವತಿ ಅವರು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ 2020ರ ಆಗಸ್ಟ್ 13 ರಿಂದ 2021ರ ಜನವರಿ 17ರ ವರೆ 5 ತಿಂಗಳುಗಳ ಅವಧಿಯಲ್ಲಿ ಒಟ್ಟು 57,14,749 ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದಾರೆ. ಆದರೆ, ಈವರೆಗೂ ಯಾವುದೇ ಉದ್ಯೋಗ ಕೊಡಿಸದೇ ಮೋಸ ಮಾಡಿದ್ದಾರೆ ಎಂದು ಯುವತಿಯು ಕಾರವಾರದ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸಿಇಎನ್ ಅಪರಾಧ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Last Updated : Feb 12, 2021, 5:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.