ಶಿರಸಿ: ಜಾನುವಾರು ಮೇಯಿಸಲು ಹೋದ ಯುವಕನೊಬ್ಬ ಎತ್ತಿಗೆ ಕಟ್ಟಿದ್ದ ಹಗ್ಗ ಕಾಲಿಗೆ ಸಿಲುಕಿ ಅದನ್ನು ಬಿಡುಸಿಕೊಳ್ಳಲು ಹೋಗಿ, ಹಳ್ಳದ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಯರೆಬೈಲಿನ ಬೇಡ್ತಿ ಹಳ್ಳದಲ್ಲಿ ನಡೆದಿದೆ.
ಯರೆಬೈಲಿನ ದ್ಯಾಮಣ್ಣ ನೀರುಪಾಲಾದ ಯುವಕ. ಜಾನುವಾರು ಮೇಯಿಸಲು ಹಳ್ಳದ ಬಳಿ ಹೋಗಿದ್ದನು. ಈ ವೇಳೆ ತನ್ನ ಎತ್ತುಗಳನ್ನು ನೀರಿನಲ್ಲಿ ನಿಲ್ಲಿಸಿಕೊಂಡು ಎತ್ತಿನ ಮೈ ತೊಳೆಯುತ್ತಿರುವಾಗ ಎತ್ತಿಗೆ ಕಟ್ಟಿದ ಹಗ್ಗ ಕಾಲಿಗೆ ಸಿಲುಕಿಕೊಂಡಿದೆ. ಅದನ್ನು ಬಿಡಿಸಿಕೊಳ್ಳುವಾಗ ಆಯತಪ್ಪಿ ನೀರಿನೊಳಗೆ ಬಿದ್ದಿದ್ದಾನೆ. ಹಳ್ಳದ ನೀರಿನ ಹರಿವು ಹೆಚ್ಚಾಗಿದ್ದರಿಂದ ನೀರನಲ್ಲಿ ಕೊಚ್ಚಿ ಹೊಗಿದ್ದಾನೆ.
ಘಟನೆ ತಿಳಿದ ತಕ್ಷಣ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಆತನ ಶವ ಹುಡುಕಿ ಹೊರತೆಗೆದಿದ್ದಾರೆ. ಈ ಕುರಿತಂತೆ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.