ಕಾರವಾರ: ಸಾಮಾನ್ಯವಾಗಿ ಬಾಳೆಗಿಡದ ತುತ್ತ ತುದಿಯಲ್ಲಿ ಗೊನೆ ಬೆಳೆಯುವುದು ಸಹಜ. ಆದರೆ ಭಟ್ಕಳ ತಾಲೂಕಿನ ಮಾವಿನಕಟ್ಟೆಯಲ್ಲಿ ಗಿಡದ ಬುಡದಲ್ಲಿಯೇ ಗೊನೆ ಬೆಳೆದಿದ್ದು ಇದೀಗ ಎಲ್ಲರ ಆಕರ್ಷಣೆಗೆ ಕಾರಣವಾಗಿದೆ.
ಭಟ್ಕಳ ತಾಲೂಕಿನ ಮಾವಿನಕಟ್ಟೆಯ ಬೆಂಗ್ರೇ-1ರ ನಿವಾಸಿ ಅನಂತ್ ಹನುಮಂತ ಕಾಮತ್ ಅವರ ಬಾಳೆ ತೋಟದಲ್ಲಿ ಇಂತಹದೊಂದು ಅಪರೂಪದ ಗೊನೆ ಬಿಟ್ಟಿದೆ. ಸುಮಾರು ಎಂಟು ಅಡಿ ಎತ್ತರದ ಬಾಳೆಗಿಡದಲ್ಲಿ, ಬಾಳೆಗೊನೆ ತುದಿಯವರಿಗೆ ಹೋಗುವ ಬದಲು ಬುಡದಲ್ಲಿಯೇ ಗೊನೆ ಬಿಟ್ಟಿದ್ದು ಸ್ಥಳೀಯರ ಅಚ್ಚರಿಗೆ ಕಾರಣವಾಗಿದೆ.
ಇನ್ನು ಬಾಳೆಗಿಡದ ಕೊನೆಯ ಸುಳಿ ಬರುವಾಗ ಗಿಡವು ಬಾಗಿ, ಸುಳಿ ಬಾಳೆ ಗಿಡದದಲ್ಲಿ ಹೊರಗೆ ಬರಲು ಅವಕಾಶವಿದ್ದಲ್ಲಿ ಅಲ್ಲಿಯೇ ಗೊನೆ ಬಿಡುತ್ತದೆ ಎನ್ನುವುದು ಕೆಲವರ ಅಭಿಪ್ರಾಯವಾಗಿದೆ.