ETV Bharat / state

ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಸಮಾಜ ಸೇವಕ ಅಶೋಕ ಕಾಮತ್ - ಭಟ್ಕಳ ಸರ್ಕಾರಿ ಆಸ್ಪತ್ರೆ

ಜೀವಂತ ಇರುವಾಗ ದಾನ ಧರ್ಮ ಮಾಡುತ್ತಾ ಊರಿಗೆ ಆಸರೆಯಾಗಿದ್ದ ಭಟ್ಕಳ ತಾಲೂಕಿನ ವೆಂಕಟಾಪುರ ನೀಲಕಂಠದ ನಿವಾಸಿ ಅಶೋಕ ಕಾಮತ್ ಅವರು ತಮ್ಮ ಸಾವಿನ ನಂತರ ಕಣ್ಣು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.

Ashoka Kamat
ಅಶೋಕ ಕಾಮತ್
author img

By

Published : Jun 15, 2023, 8:49 AM IST

Updated : Jun 15, 2023, 12:57 PM IST

ಸಾವಿನ ಬಳಿಕ ನೇತ್ರದಾನ ಮಾಡಿದ ಸಮಾಜ ಸೇವಕ ಅಶೋಕ ಕಾಮತ್

ಭಟ್ಕಳ : ಅನಾರೋಗ್ಯದಿಂದ ಸಾವನ್ನಪ್ಪಿದ ತಾಲೂಕಿನ ವೆಂಕಟಾಪುರ ನೀಲಕಂಠದ ಜಿ.ಎಸ್.ಪಿ ಮುಖಂಡರು ಹಾಗೂ ಉದ್ಯಮಿಯೊಬ್ಬರು ನೇತ್ರದಾನ ಮಾಡುವ ಮೂಲಕ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ. ಅಶೋಕ ಕಾಮತ್ (67) ನೇತ್ರದಾನ ಮಾಡಿದವರು.

ಅಶೋಕ ಕಾಮತ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಕಳೆದ 15 ದಿನಗಳಿಂದ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇವರು ನೀಲಕಂಠ ಸಾರ್ವಜನಿಕ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ತಮ್ಮದೇ ಆದ ದೇಣಿಗೆಯ ಜೊತೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದರು ಹಾಗೂ ನೀಲಕಂಠ ಹಾಗೂ ಶಿರಾಲಿ ಕಂಡಂತಹ ಅತ್ಯಂತ ಸರಳ ಸಜ್ಜನ ಸಮಾಜ ಸೇವಕರಾಗಿದ್ದರು. ಇವರ ಸಾವಿನ ಬಳಿಕ ಉಡುಪಿಯ ಪ್ರಸಾದ ನೇತ್ರಾಲಯದ ವೈದ್ಯರಾದ ಹಂಸ, ಅಹನ್ ಹಾಗೂ ಸಿಬ್ಬಂದಿ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ಪ್ರಕ್ರಿಯೆ ಪೂರ್ಣಗೊಳಿಸಿದರು.

ಈ ಬಗ್ಗೆ ಮೃತರ ಸಹೋದರರಾದ ಶಿವಾನಂದ ಕಾಮತ್ ಮಾತನಾಡಿ, "ನನ್ನ ಸಹೋದರ ದಾನ - ಧರ್ಮ ಮಾಡುವುದರಲ್ಲಿ ಮುಂಚೂಣಿಯಲ್ಲಿದ್ದರು. ನಮ್ಮ ಊರಿನಲ್ಲಿ ನಡೆದ ಒಂದು ಸಮಾರಂಭದಲ್ಲಿ ನಮ್ಮ ಕುಟುಂಬದ ಎಲ್ಲರೂ ನೇತ್ರದಾನ ಮಾಡಲು ಅರ್ಜಿ ತುಂಬಿದ್ದೇವೆ. ಕಳೆದ 15 ದಿನಗಳ ಹಿಂದಷ್ಟೇ ನನ್ನ ಸಹೋದರ ತಾವು ಸಾವನ್ನಪ್ಪಿದ ಮೇಲೆ ಅವರ ಕಣ್ಣನ್ನು ದಾನ ಮಾಡುವಂತೆ ಹೇಳಿದ್ದರು. ಅವರ ಆಸೆಯಂತೆ ಇಂದು ಕಣ್ಣನು ದಾನ ಮಾಡಿದ್ದೇವೆ" ಎಂದರು.

ಇದನ್ನೂ ಓದಿ : ಮಗನ ಸಾವಿನ ದುಃಖದಲ್ಲೂ ಸಾರ್ಥಕತೆ : 14 ತಿಂಗಳ ಮಗುವಿನ ನೇತ್ರದಾನ ಮಾಡಿದ ಪೋಷಕರು

ಕಳೆದ ಜನವರಿ 9 ರಂದು ರಾಯಚೂರಿನಲ್ಲಿ ಇಂತಹುದ್ದೇ ಘಟನೆ ನಡೆದಿತ್ತು. ಮಗುವನ್ನು ಕಳೆದುಕೊಂಡ ದುಃಖದಲ್ಲಿದ್ದ ದಂಪತಿ ಮಗುವಿನ ನೇತ್ರದಾನ ಮಾಡುವ ಮೂಲಕ ಸಾರ್ಥಕತೆ ಮೆರದಿದ್ದರು. ಲಿಂಗಸುಗೂರು ತಾಲೂಕಿನ ಗೆಜ್ಜಲಗಟ್ಟಾದ ನಿವಾಸಿ ಅಮರೇಗೌಡ ಕಾಮರೆಡ್ಡಿ ಅವರು ತಮ್ಮ 14 ತಿಂಗಳ ಮಗನಾದ ಬಸವಪ್ರಭುವಿನ ಕಣ್ಣುಗಳನ್ನು ರಾಯಚೂರಿನ ನವೋದಯ ಮೆಡಿಕಲ್ ಕಾಲೇಜಿಗೆ ದಾನ ಮಾಡಿದ್ದರು. ಅಮರೇಗೌಡ ಕಾಮರೆಡ್ಡಿ ಅವರು ಹಟ್ಟಿ ಚಿನ್ನದ ಕಂಪನಿಯ ನೌಕರರಾಗಿದ್ದಾರೆ.

ತಾಯಿಯ ನೇತ್ರದಾನ ಮಾಡಿದ ಮಗ : 2022ರ ಸೆಪ್ಟೆಂಬರ್​ 1 ರಂದು ಭಟ್ಕಳದಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದ ತಾಯಿಯ ಕಣ್ಣುಗಳನ್ನು ದಾನ ಮಾಡುವ ಮೂಲಕ ಮಗ ಸಾರ್ಥಕತೆ ಮೆರೆದಿರುವ ಘಟನೆ ನಡೆದಿತ್ತು. ಭಟ್ಕಳದ ಶಿರಾಲಿ ಮತ್ತಿಗುಂಡಿ ನಿವಾಸಿ ಮಾಸ್ತಮ್ಮ ವೆಂಕಟಪ್ಪ ನಾಯ್ಕ(68) ಅವರು ತಮ್ಮ ನೇತ್ರಗಳನ್ನು ದಾನ ಮಾಡಿದ್ದರು. ತಾಯಿಯ ಕಣ್ಣು ಇತರರಿಗೆ ಬೆಳಕಾಗಲಿ ಎಂಬ ಉದ್ದೇಶದಿಂದ ಕುಟುಂಬದವರ ಒಪ್ಪಿಗೆ ಪಡೆದು, ಮಗ ಮಂಜುನಾಥ ನಾಯ್ಕ ಅವರು ಭಟ್ಕಳ ಸರ್ಕಾರಿ ಆಸ್ಪತ್ರೆಯ ಮೂಲಕ ಉಡುಪಿಯ ಪ್ರಸಾದ ನೇತ್ರಾಲಯಕ್ಕೆ ತಾಯಿಯ ಕಣ್ಣುಗಳನ್ನು ದಾನ ಮಾಡಿದ್ದರು.

ಇದನ್ನೂ ಓದಿ : ತಾಯಿಯ ಮರಣಾ ನಂತರ ನೇತ್ರದಾನ ಮಾಡಿ ಸಾರ್ಥಕತೆ ಮೆರೆದ ಮಗ

Last Updated : Jun 15, 2023, 12:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.