ETV Bharat / state

ಕುಮಟಾದಲ್ಲಿ ಕೊನೆಗೂ ಸಿಕ್ಕ 'ಕರ್ವಾಲೊ' ಕಾದಂಬರಿಯ ನಿಗೂಢ ನಾಯಕ!

ಹೊಲವಳ್ಳಿ ಗ್ರಾಮದಲ್ಲಿ ನೆಲೆಸಿರುವ ಲೋಕೇಶ ಪೂಜಾರಿ ಎಂಬುವರ ತೋಟದಲ್ಲಿ ಈ ಅಪರೂಪದ ಓತಿಕ್ಯಾತ ಪತ್ತೆಯಾಗಿದೆ. ಇದು ಸರಿಸೃಪಗಳ ಪಂಗಡಕ್ಕೆ ಸೇರಿದ್ದು ಎನ್ನಲಾಗಿದ್ದು, ಭಾರತದ ಪಶ್ಚಿಮಘಟ್ಟ ಹಾಗೂ ದಕ್ಷಿಣ ಏಷ್ಯಾದಲ್ಲಿ ಮಾತ್ರ ಕಂಡುಬರುವ ಅಪರೂಪದ ಓತಿಕ್ಯಾತ ಇದಾಗಿದೆ.

a-rare-flying-chameleon-detection-in-kumata
ಕುಮಟಾದಲ್ಲಿ ಅಪರೂಪದ ಹಾರುವ ಓತಿ ಪತ್ತೆ..
author img

By

Published : Jan 21, 2021, 7:51 PM IST

Updated : Jan 21, 2021, 8:42 PM IST

ಕಾರವಾರ: ದಕ್ಷಿಣ ಏಷ್ಯಾದಲ್ಲಿ ಮಾತ್ರ ಕಂಡುಬರುವ ಅಪರೂಪದ ಹಾರುವ ಓತಿಕ್ಯಾತ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲವಳ್ಳಿ ಗ್ರಾಮದಲ್ಲಿ ಪತ್ತೆಯಾಗಿದೆ.

ಕುಮಟಾದಲ್ಲಿ ಅಪರೂಪದ ಹಾರುವ ಓತಿ ಪತ್ತೆ..

ಓದಿ: ವಾಧ್ವಾನ್ ಸಮುದ್ರ ತೀರದಲ್ಲಿ ಅಪರೂಪದ ಹಾರುವ ಮೀನು ಪತ್ತೆ : ವಿಡಿಯೋ

ಹೊಲವಳ್ಳಿ ಗ್ರಾಮದಲ್ಲಿ ನೆಲೆಸಿರುವ ಲೋಕೇಶ ಪೂಜಾರಿ ಎಂಬುವರ ತೋಟದಲ್ಲಿ ಈ ಅಪರೂಪದ ಓತಿಕ್ಯಾತ ಪತ್ತೆಯಾಗಿದೆ. ಇದು ಸರಿಸೃಪಗಳ ಪಂಗಡಕ್ಕೆ ಸೇರಿದ್ದು ಎನ್ನಲಾಗಿದ್ದು, ಭಾರತದ ಪಶ್ಚಿಮಘಟ್ಟ ಹಾಗೂ ದಕ್ಷಿಣ ಏಷ್ಯಾದಲ್ಲಿ ಮಾತ್ರ ಕಂಡುಬರುವ ಅಪರೂಪದ ಓತಿಕ್ಯಾತ ಇದಾಗಿದೆ.

ಇದು ಮುಂಗಾಲಿನಿಂದ ಹಿಂಗಾಲಿನವರೆಗೆ ಪೊರೆಯಂತಹ ರೆಕ್ಕೆ ಚಾಚಿಕೊಂಡಿದ್ದು, ಪುಟ್ಟ ಪುಟ್ಟ ಕಾಲು ಹಾಗೂ ಉದ್ದನೆಯ ಬಾಲ ಹೊಂದಿದೆ. ಮರದಿಂದ ಮರಕ್ಕೆ ಹಾರುವಾಗ ಇದು ಹಕ್ಕಿಯಂತೆ ರೆಕ್ಕೆ ಬಿಚ್ಚಿಕೊಳ್ಳುತ್ತದೆ. ಪ್ರತಿ ನಿಮಿಷಕ್ಕೂ ತನ್ನ ಬಣ್ಣವನ್ನು ಬದಲಿಸಿಕೊಳ್ಳುತ್ತದೆ. ಅಷ್ಟೆ ಅಲ್ಲದೆ ಯಾವ ಬಣ್ಣದ ಗಿಡಗಳ ಮೇಲೆ ಕುಳಿತುಕೊಳ್ಳುತ್ತದೆಯೋ ಆ ಎಲೆಯ ಬಣ್ಣಕ್ಕೆ ತನ್ನ ಬಣ್ಣವನ್ನು ಬದಲಿಸಿಕೊಳ್ಳುತ್ತದೆ.

ಇದು ಸುಮಾರು ನೂರು ಮೀಟರ್​​ನಷ್ಟು ದೂರದವರೆಗೂ ಮರದಿಂದ ಮರಕ್ಕೆ ವೇಗವಾಗಿ ಹಾರಿ ಹೋಗುತ್ತದೆ. ಈ ಓತಿಕ್ಯಾತ ಪೂರ್ಣಚಂದ್ರ ತೇಜಸ್ವಿಯವರ ಕರ್ವಾಲೊ ಕಾದಂಬರಿಯಲ್ಲಿ ನಿಗೂಢ ನಾಯಕನಾಗಿದೆ. ಇಂತಹ ಅಪರೂಪದ ಓತಿಕ್ಯಾತ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಇದನ್ನು ಹಿಡಿದ ಲೋಕೇಶ ಪೂಜಾರಿಯವರು ಸಾಂತಗಲ್ ಅರಣ್ಯ ಸಿಬ್ಬಂದಿಗೆ ಒಪ್ಪಿಸಿದ್ದಾರೆ.

Last Updated : Jan 21, 2021, 8:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.