ETV Bharat / state

ದಾರಿತಪ್ಪಿ ನೌಕಾನೆಲೆಗೆ ಬಂದ ಮೀನುಗಾರಿಕಾ ಬೋಟ್: ವಿಚಾರಣೆ ನಡೆಸಿದ ನೌಕಾನೆಲೆ, ಕರಾವಳಿ ಕಾವಲು ಪಡೆ! - Coast Guard

ದಾರಿತಪ್ಪಿ ಕಾರವಾರ ನೌಕಾನೆಲೆಗೆ ಬಂದ ಮೀನುಗಾರಿಕಾ ಬೋಟ್​ ಅನ್ನು ನೌಕಾನೆಲೆ ಸಿಬ್ಬಂದಿ ಮತ್ತು ಕರಾವಳಿ ಕಾವಲು ಪಡೆ ವಿಚಾರಣೆ ನಡೆಸಿದೆ.

fishing boat
ದಾರಿತಪ್ಪಿ ನೌಕಾನೆಲೆಗೆ ನುಗ್ಗಿದ ಮೀನುಗಾರಿಕಾ ಬೋಟ್
author img

By ETV Bharat Karnataka Team

Published : Oct 21, 2023, 7:47 AM IST

ದಾರಿತಪ್ಪಿ ನೌಕಾನೆಲೆಗೆ ನುಗ್ಗಿದ ಮೀನುಗಾರಿಕಾ ಬೋಟ್

ಕಾರವಾರ: ತಮಿಳುನಾಡಿನ ಮೀನುಗಾರಿಕಾ ಬೋಟ್​ವೊಂದು ದಾರಿ ತಪ್ಪಿ ಇಲ್ಲಿನ ನೌಕಾನೆಲೆಯ ವ್ಯಾಪ್ತಿಗೆ ಬಂದ ಕಾರಣ ನೌಕಾನೆಲೆ ಸಿಬ್ಬಂದಿ ಬೋಟ್​ ಅನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತು. ಬಳಿಕ, ಕರಾವಳಿ ಕಾವಲುಪಡೆಗೆ ಹಸ್ತಾಂತರಿಸಲಾಗಿದೆ. ತಮಿಳುನಾಡು ಮೂಲದ ಓಂ ಮುರುಗಾ ಹೆಸರಿನ ಬೋಟು ನೌಕಾನೆಲೆ ವ್ಯಾಪ್ತಿಗೆ ನುಗ್ಗಿತ್ತು. ಮೀನುಗಾರಿಕೆಗೆ ಬಂದ ವೇಳೆ ಐಸ್ ಖಾಲಿಯಾಗಿದೆ. ಹೀಗಾಗಿ, ಐಸ್ ತುಂಬಿಕೊಳ್ಳಲು ಇಲ್ಲಿನ ಬೈತಖೋಲದ ಮೀನುಗಾರಿಕಾ ಬಂದರಿಗೆ ಬರಲು ಮುಂದಾಗಿದ್ದಾರೆ. ಈ ವೇಳೆ ಬೋಟಿನಲ್ಲಿದ್ದ ಜಿಪಿಎಸ್ ಯಂತ್ರವು ಸರಿಯಾಗಿ ಕೆಲಸ ಮಾಡದ ಕಾರಣ ದಾರಿ ತಪ್ಪಿ ನೌಕಾನೆಲೆಯ ವ್ಯಾಪ್ತಿಗೆ ತೆರಳಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಕಾರವಾರದ ಆಳಸಮುದ್ರದಲ್ಲಿ ಮುಳುಗುತ್ತಿದ್ದ ಬೋಟ್ : ಇನ್ನೊಂದು ಬೋಟ್‌ ಸಹಾಯದಿಂದ 12 ಮೀನುಗಾರರ ರಕ್ಷಣೆ

ಬೋಟನ್ನು ವಶಕ್ಕೆ ಪಡೆದ ನೌಕಾನೆಲೆಯ ಅಧಿಕಾರಿಗಳು ಕರಾವಳಿ ಕಾವಲು ಪಡೆಗೆ ಒಪ್ಪಿಸಿದ್ದಾರೆ. ಓರ್ವ ಒಡಿಶಾ, ಇಬ್ಬರು ಪಶ್ಚಿಮ ಬಂಗಾಳ ಹಾಗೂ ಎಂಟು ಜನ ತಮಿಳುನಾಡು ಮೂಲದ ಕಾರ್ಮಿಕರ ಆಧಾರ್ ಕಾರ್ಡ್​ ಮತ್ತು ಬೋಟಿನ ದಾಖಲೆಗಳನ್ನು ಕರಾವಳಿ ಕಾವಲು ಪಡೆಯ ಅಧಿಕಾರಿಗಳು ಪರಿಶೀಲಿಸಿದ್ದಾರೆ.

ಇನ್ನು ಬೋಟಿನಲ್ಲಿದ್ದ ಕೆಲವು ಕಾರ್ಮಿಕರ ಬಳಿ ಆಧಾರ್ ಕಾರ್ಡ್ ಇರಲಿಲ್ಲ. ಹೀಗಾಗಿ, ವಾಟ್ಸ್ ಆ್ಯಪ್ ಮೂಲಕ ತರಿಸಲು ತಿಳಿಸಲಾಗಿದೆ. ದಾಖಲೆಗಳು ಸಿಕ್ಕ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕರಾವಳಿ ಕಾವಲು ಪಡೆದ ವೃತ್ತ ನಿರೀಕ್ಷಕ ನಿಶ್ಚಲ ಕುಮಾರ್​ ತಿಳಿಸಿದ್ದಾರೆ.

ಇದನ್ನೂ ಓದಿ : ಮಂಗಳೂರು : ಮೀನುಗಾರಿಕಾ ಬೋಟ್​​ನಲ್ಲಿ ಬೆಂಕಿ.. ಲಕ್ಷಾಂತರ ರೂಪಾಯಿ ನಷ್ಟ

ಮಂಗಳೂರಲ್ಲಿ ಇತ್ತೀಚೆಗೆ ಮೀನುಗಾರಿಕಾ ಬೋಟ್​ನಲ್ಲಿ ಬೆಂಕಿ : ಇದೇ ತಿಂಗಳ 10ನೇ ತಾರೀಖಿನಂದು ಮೀನುಗಾರಿಕಾ ಬೋಟ್​ವೊಂದು ಬೆಂಕಿಗೆ ಆಹುತಿಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಂಗ್ರೆ ಮೀನುಗಾರಿಕಾ ಬಂದರಿನಲ್ಲಿ ನಡೆದಿತ್ತು. ಇದು ಅರುಣ್ ಎಂಬುವರಿಗೆ ಸೇರಿದ ಮೀನುಗಾರಿಕಾ ಬೋಟ್​ ಆಗಿದ್ದು, ಮುಂಜಾನೆ 4.30ರ ಸುಮಾರಿಗೆ ಬೆಂಕಿ ಅವಘಡ ನಡೆದಿತ್ತು. ಸ್ಥಳಕ್ಕೆ ಕದ್ರಿ, ಪಾಂಡೇಶ್ವರ್​​ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದರು. ಬೋಟ್ ಬೆಂಕಿಗೆ ಆಹುತಿಯಾಗಿದ್ದರಿಂದ ಲಕ್ಷಾಂತರ ರೂ. ಮೌಲ್ಯದ ನಷ್ಟ ಉಂಟಾಗಿದೆ.

ಇದನ್ನೂ ಓದಿ : ಕೊನೆಗೂ ನೆಲವ ಬಿಟ್ಟು ನೀರಿಗಿಳಿದ ಬೋಟ್ : 12 ದಿನಗಳ ಕಸರತ್ತಿನ ಬಳಿಕ ಕಡಲಿಗೆ

ಅದೃಷ್ಟವಶಾತ್​ ಬೋಟ್​ನಲ್ಲಿ ಯಾರು ಇರಲಿಲ್ಲ. ಪರಿಣಾಮ ದೊಡ್ಡ ಅನಾಹುತ ತಪ್ಪಿದಂತಾಗಿತ್ತು. ಬೆಂಕಿಯ ಕೆನ್ನಾಲಿಗೆಗೆ ಬಂದರಿನಲ್ಲಿ ಲಂಗರು ಹಾಕಿದ್ದ ಇತರೆ ಬೋಟ್​ಗಳಿಗೆ ಕೂಡ ಬೆಂಕಿ ಹರಡುವ ಭೀತಿ ಎದುರಾಗಿತ್ತು. ಅದೃಷ್ಟವಶಾತ್,​ ಬೆಂಕಿಯ ರಭಸಕ್ಕೆ ದಡದಲ್ಲಿದ್ದ ಬೋಟು ನದಿ ನೀರಿನ ಮಧ್ಯೆ ಸಾಗಿದೆ. ಇದರಿಂದಾಗಿ ಇತರೆ ಬೋಟ್​ಗಳಿಗೆ ಬೆಂಕಿ ತಗಲುವುದು ತಪ್ಪಿದೆ.

ಇದನ್ನೂ ಓದಿ : Fishing : ಕಾರ್ಮಿಕರಿಲ್ಲದೆ ಲಂಗರು ಹಾಕಿದ ಬೋಟ್​ಗಳು ; ಉತ್ತಮ ವಾತಾವರಣವಿದ್ದರೂ ಶುರುವಾಗದ ಮೀನುಗಾರಿಕೆ !

ETV Bharat Logo

Copyright © 2025 Ushodaya Enterprises Pvt. Ltd., All Rights Reserved.