ETV Bharat / state

ನಾಲ್ಕೇ ಗುಂಟೆ ಜಮೀನಿನಲ್ಲಿ 265 ಭತ್ತದ ತಳಿ ಬೆಳೆದು ಅಚ್ಚರಿ ಮೂಡಿಸಿದ ರಾಮಕೃಷ್ಣ ಭಟ್‌ - ಭತ್ತದ ತಳಿ

ನೂರಾರು ವಿಭಿನ್ನ ತಳಿಯ ಭತ್ತಗಳನ್ನು ಹಿಂದಿನ ಕಾಲದಲ್ಲಿ ಬೆಳೆಯುತ್ತಿದ್ದರು. ಆದರೆ ಇತ್ತೀಚಿನ‌ ದಿನಗಳಲ್ಲಿ ಕೆಲವೇ ತಳಿಯನ್ನು ಅವಲಂಬಿಸಿದ ಪರಿಣಾಮ ಹಲವು ತಳಿಯ ಭತ್ತಗಳು ಕಣ್ಮರೆಯಾದವು. ಪಾರಂಪರಿಕ ತಳಿಗಳನ್ನು ಉಳಿಸಬೇಕು ಎಂಬ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ರೈತರೊಬ್ಬರು ಕೇವಲ ನಾಲ್ಕು ಗುಂಟೆ ಜಮೀನಿನಲ್ಲಿ ಬರೋಬ್ಬರಿ 265 ಬಗೆಯ ಭತ್ತದ ತಳಿಗಳನ್ನು ಬೆಳೆದು ಅಚ್ಚರಿ ಮೂಡಿಸಿದ್ದಾರೆ.

a famer cultivativate variety of paddy craps in sirsi, uttara kannada district
ನಾಲ್ಕೇ ಗುಂಟೆ ಜಮೀನಿನಲ್ಲಿ 265 ಭತ್ತದ ತಳಿ ಬೆಳೆದು ಅಚ್ಚರಿ ಮೂಡಿಸಿದ ರೈತ
author img

By

Published : Sep 15, 2021, 4:18 PM IST

Updated : Sep 15, 2021, 9:12 PM IST

ಉತ್ತರ ಕನ್ನಡ: ಶಿರಸಿ ತಾಲ್ಲೂಕಿನ ದೇವತೆಮನೆ ಗ್ರಾಮದ ರಾಮಕೃಷ್ಣ ಭಟ್ ತಮ್ಮ 4 ಗುಂಟೆ ಜಮೀನಿನಲ್ಲಿ ಭತ್ತದ ತಳಿಗಳ ಪ್ರಯೋಗ ಶಾಲೆಯನ್ನೇ ತೆರೆದಿದ್ದು, ಸುಮಾರು 265 ಬಗೆಯ ಪಾರಂಪರಿಕ ತಳಿಯನ್ನು ಬೆಳೆಸಿದ್ದಾರೆ.

ಪ್ರತಿ ತಳಿಯ ಸಸಿಗಳಿಗೆ ಪ್ರತ್ಯೇಕ ಸಂಖ್ಯೆ ನೀಡಿದ್ದಾರೆ. ಈ ಸಂಖ್ಯೆ ಆಧರಿಸಿ ನೋಂದಣಿ ಪುಸ್ತಕದಲ್ಲಿ ಮಾಹಿತಿ ದಾಖಲಿಸಿಕೊಳ್ಳುತ್ತಿದ್ದು, ಅದರಲ್ಲಿ 200ಕ್ಕಿಂತ ಹೆಚ್ಚು ಭತ್ತ ತಳಿಗಳ ಮಾಹಿತಿ ಇವರ ಬಳಿ ಲಭ್ಯವಿದೆ. ಮಾತ್ರವಲ್ಲದೆ, 65 ತಳಿಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ.

ಕಳವೆ, ಮಟ್ಟಳಗ, ಹೊನ್ನಕಟ್ಟು, ಜೇನುಗೂಡು, ಗೌಡರ ಭತ್ತ, ದೊಡ್ಡ ಭತ್ತ, ಜಿಗ್ಗ ವರಟಿಗ, ನೀರ ಮುಳುಗ, ಕರಿ ಕಂಟಕ, ಲಿಂಬೆ ಮೊಹರಿ ಸೇರಿದಂತೆ ಹಲವು ಸ್ಥಳೀಯ ತಳಿಯ ಹಾಗೂ ನೇಪಾಳ, ಥಾಯ್ಲೆಂಡ್ ಭಾಗದಲ್ಲಿ ಬೆಳೆಯುವ ವಿದೇಶಿ ತಳಿಗಳಿವೆ.

ನಾಲ್ಕೇ ಗುಂಟೆ ಜಮೀನಿನಲ್ಲಿ 265 ಭತ್ತದ ತಳಿ ಬೆಳೆದು ಅಚ್ಚರಿ ಮೂಡಿಸಿದ ರಾಮಕೃಷ್ಣ ಭಟ್‌

ಭತ್ತವನ್ನು ಬೆಳೆಯುವ ರೈತರು ಹಾಗೂ ಇರುವ ಭತ್ತದ ಗದ್ದೆಗಳನ್ನು ತೆಗೆದು ಅಡಿಕೆ ತೋಟಗಳನ್ನು ಮಾಡುವವರ ಮಧ್ಯದಲ್ಲಿ ಲಾಭದಾಯಕ ಅಲ್ಲದೇ ಹೋದರೂ ಪಾರಂಪರಿಕ ತಳಿಗಳನ್ನು ಉಳಿಸಬೇಕು ಎನ್ನುವ ಉದ್ದೇಶದಿಂದ ಇವರು ಭತ್ತ ತಳಿಯ ಸಂಗ್ರಹದ ಆಸಕ್ತಿ ಶ್ಲಾಘನೀಯ ಎನ್ನುವುದು ಕೃಷಿ ವಿಜ್ಞಾನ ಕೇಂದ್ರದವರ ಮಾತಾಗಿದೆ. ಇದೇ ಕಾರಣಕ್ಕಾಗಿ ಈ ಹಿಂದೆ ಕೃಷಿ ಮೇಳದಲ್ಲಿ ಇನ್ನೊವೇಟಿವ್ ಫಾರ್ಮರ್ ಪ್ರಶಸ್ತಿ ಕೂಡ ಇವರಿಗೆ ಲಭಿಸಿದೆ.

ಕೃಷಿಯನ್ನೂ ಉದ್ಯಮವನ್ನಾಗಿ ಮಾರ್ಪಾಟು ಮಾಡಿ ಕೇವಲ ಲಾಭ ನೋಡುವವರ ಮಧ್ಯದಲ್ಲಿ ರಾಮಕೃಷ್ಣ ಭಟ್ ಅವರ ಕಾರ್ಯ ಮಾದರಿ. ಅವರ ಕೆಲಸಕ್ಕೆ ಇನ್ನೂ ಹೆಚ್ಚಿನ ವೈಜ್ಞಾನಿಕ ನೆರವಿನ ಅಗತ್ಯವಿದ್ದು, ಪಾರಂಪರಿಕ ತಳಿಗಳನ್ನು ಗುರುತಿಸುವಲ್ಲಿ ಸರ್ಕಾರದ ನೆರವು ಸಿಗಬೇಕಿದೆ.

Last Updated : Sep 15, 2021, 9:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.