ETV Bharat / state

ಶಿರಸಿಗೂ ಕಾಲಿಟ್ಟ ಕೊರೊನಾ: ಒಂದೇ ದಿನ 9 ಪಾಸಿಟಿವ್ ಕೇಸ್ ಪತ್ತೆ! - 9 Positive Case Detection in Sirsi

ಶಿರಸಿಗೂ ಕೋವಿಡ್​​-19 ಕಾಲಿಟ್ಟಿದ್ದು, ಗ್ರೀನ್ ಝೋನ್ ಹಣೆಪಟ್ಟಿ ಕಳಚಿದಂತಾಗಿದೆ.

9 Positive Case Detection in Sirsi
ಶಿರಸಿಗೂ ಕಾಲಿಟ್ಟ ಕೊರೊನಾ
author img

By

Published : May 21, 2020, 1:47 PM IST

ಶಿರಸಿ: ಕಳೆದೆರಡು ತಿಂಗಳಿನಿಂದ ಗ್ರೀನ್​​ ಝೋನ್​​​ನಲ್ಲಿದ್ದ ಉತ್ತರ ಕನ್ನಡದ ಶಿರಸಿಯಲ್ಲಿ ಕೊರೊನಾ ಸ್ಫೋಟಗೊಂಡಿದ್ದು, ಒಂದೇ ದಿನ 9 ಮಂದಿಯಲ್ಲಿ ಕೊರೊನಾ ಪತ್ತೆಯಾಗಿದೆ. ಶಿರಸಿ ತಾಲೂಕಿನ ಕಲ್ಲಿ ಗ್ರಾಮದಲ್ಲಿ ಸಾಂಸ್ಥಿಕ ಕ್ವಾರಂಟೈನ್​​​ನಲ್ಲಿದ್ದ ಮಹಾರಾಷ್ಟ್ರದಿಂದ ಬಂದಿದ್ದ 8 ಜನರು ಹಾಗೂ ಇಲ್ಲಿನ ಪಂಚವಟಿ ಹೋಟೆಲ್​​​​ನಲ್ಲಿ ಕ್ವಾರಂಟೈನ್ ಆಗಿದ್ದ ವ್ಯಕ್ತಿಗೆ ಇಂದು ಕೊರೊನಾ ದೃಢಪಟ್ಟಿದೆ.

ಇದರಿಂದ ಶಿರಸಿಗೂ ಕೋವಿಡ್​​-19 ಕಾಲಿಟ್ಟಿದ್ದು, ಗ್ರೀನ್ ಝೋನ್ ಹಣೆಪಟ್ಟಿ ಕಳಚಿದಂತಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 65 ಕೊರೊನಾ ಸೋಂಕಿತ ಪ್ರಕರಣಗಳಿದ್ದು, ಅದರಲ್ಲಿ 53 ಸಕ್ರಿಯ ಪ್ರಕರಣಗಳಿವೆ. 12 ಜನರು ಗುಣಮುಖರಾಗಿದ್ದಾರೆ. 150ಕ್ಕೂ ಹೆಚ್ಚಿನ ಶಂಕಿತರ ವರದಿ ಬರಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.