ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದು 77 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 3,220ಕ್ಕೆ ಏರಿಕೆಯಾಗಿದೆ.
ಹಳಿಯಾಳದಲ್ಲಿ 18, ಕಾರವಾರ, ಸಿದ್ದಾಪುರದಲ್ಲಿ ತಲಾ 13, ಭಟ್ಕಳ 12, ಮುಂಡಗೋಡ 9, ಶಿರಸಿ 6, ಯಲ್ಲಾಪುರ 3, ಹೊನ್ನಾವರ 2, ಜೊಯಿಡಾದಲ್ಲಿ ಓರ್ವರಿಗೆ ಇಂದು ಸೋಂಕು ತಗುಲಿದೆ.
ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಕಾರವಾರದ 10, ಹೊನ್ನಾವರ ಸಿದ್ದಾಪುರದಲ್ಲಿ ತಲಾ 8, ಯಲ್ಲಾಪುರದ 7, ಕುಮಟಾದ 5, ಅಂಕೋಲಾದ 3 ಹಾಗೂ ಶಿರಸಿಯ ಓರ್ವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಗುಣಮುಖ:
3,220 ಸೋಂಕಿತರ ಪೈಕಿ 2,271 ಮಂದಿ ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಈವರೆಗೆ ಒಟ್ಟು 30 ಮಂದಿ ಮೃತಪಟ್ಟಿದ್ದು ಸದ್ಯ 919 ಮಂದಿಗೆ ಚಿಕಿತ್ಸೆ ಮುಂದುವರಿದಿದೆ.