ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 62 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 12,374ಕ್ಕೆ ಏರಿಕೆಯಾಗಿದೆ.
ಕಾರವಾರದಲ್ಲಿ 5, ಅಂಕೋಲಾದಲ್ಲಿ 1, ಕುಮಟಾದಲ್ಲಿ 14, ಹೊನ್ನಾವರ 13, ಭಟ್ಕಳದಲ್ಲಿ 8, ಶಿರಸಿ 5, ಸಿದ್ದಾಪುರದಲ್ಲಿ 10, ಯಲ್ಲಾಪುರದಲ್ಲಿ 2, ಮುಂಡಗೋಡದಲ್ಲಿ 3, ಹಳಿಯಾಳದಲ್ಲಿ ಓರ್ವನಿಗೆ ಸೋಂಕು ದೃಢಪಟ್ಟಿದೆ.
ಇನ್ನು ಕಾರವಾರದಲ್ಲಿ 3, ಅಂಕೋಲಾ, ಕುಮಟಾದಲ್ಲಿ ತಲಾ 19, ಹೊನ್ನಾವರದಲ್ಲಿ 22, ಭಟ್ಕಳದಲ್ಲಿ 13, ಶಿರಸಿಯಲ್ಲಿ 5, ಸಿದ್ದಾಪುರದಲ್ಲಿ 32, ಯಲ್ಲಾಪುರದಲ್ಲಿ 49, ಮುಂಡಗೋಡದಲ್ಲಿ 8, ಹಳಿಯಾಳದಲ್ಲಿ 18, ಜೊಯಿಡಾದಲ್ಲಿ 14 ಸೇರಿದಂತೆ ಒಟ್ಟು 202 ಸೋಂಕಿತರು ಗುಣಮುಖರಾಗಿ ಮನೆ ಸೇರಿದ್ದಾರೆ.
412 ಮಂದಿ ಹೋಮ್ ಐಸೋಲೇಶನ್‌ನಲ್ಲಿ ಮತ್ತು 658 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 1,070 ಸಕ್ರಿಯ ಪ್ರಕರಣಗಳು ಸದ್ಯ ಜಿಲ್ಲೆಯಲ್ಲಿದ್ದು, ಇಲ್ಲಿಯವರೆಗೆ 160 ಮಂದಿ ಮೃತಪಟ್ಟಿದ್ದಾರೆ.