ಭಟ್ಕಳ: ಸುಮಾರು 60 ಲಕ್ಷ ರೂ.ಮೌಲ್ಯದ ಚಿನ್ನದ ಬಿಸ್ಕೆಟ್, 8 ಚಿನ್ನದ ಗಟ್ಟಿಗಳು ಹಾಗೂ 61 ಲಕ್ಷ ನಗದು ಸೇರಿದಂತೆ ಒಟ್ಟು ಒಂದು ಕೋಟಿ 21 ಲಕ್ಷ ನಗದು ಮತ್ತು ಚಿನ್ನಾಭರಣ ವಶಕ್ಕೆ ಪಡೆದಿರುವ ಇಲ್ಲಿನ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಹೂವಿನ ಚೌಕ ಕ್ರಾಸ್ ಸಮೀಪ ದಾಳಿ ನಡೆಸಿರುವ ಪೊಲೀಸರು, ಶೈಲೇಶ ಮಹಾದೇವ ಪಾಟೀಲ (33) ಹಾಗೂ ಸಂಜಯ ದೇಶಮುಖ ಎಂಬವರನ್ನು ಬಂಧಿಸಿದ್ದಾರೆ. ಆರೋಪಿಗಳು ಹುಬ್ಬಳ್ಳಿ ಮೂಲದವರಂದು ತಿಳಿದುಬಂದಿದೆ.
ತಡರಾತ್ರಿ ಆರೋಪಿಗಳು ಕಾರಿನ ಮೂಲಕ ಹುಬ್ಬಳ್ಳಿಯಿಂದ ಭಟ್ಕಳಕ್ಕೆ ತೆರಳುವಾಗ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ. ಈ ವೇಳೆ ಸುಮಾರು 60 ಲಕ್ಷ ನಗದು, ಭಟ್ಕಳದಿಂದ ಖರೀದಿಸಿದ 60 ಲಕ್ಷ ಮೌಲ್ಯದ ಒಂದು ಕೆ.ಜಿ 500 ಗ್ರಾಂ ಬಂಗಾರದ ಬಿಸ್ಕೆಟ್, 8 ಚಿನ್ನದ ಗಟ್ಟಿಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿದ 10 ಲಕ್ಷ ಮೌಲ್ಯದ ಕಾರು, 8,000 ಸಾವಿರ ಮೌಲ್ಯದ 2 ಮೊಬೈಲ್ಗಳನ್ನು ಜಪ್ತಿ ಮಾಡಲಾಗಿದೆ.