ETV Bharat / state

ಶಿರಸಿಯಲ್ಲಿ ಮತ್ತೆ ಆರು ಜನರಿಗೆ ಕೊರೊನಾ.. ಜೈಲಿನಲ್ಲಿದ್ದ 3 ಆರೋಪಿಗಳಿಗೂ ಸೋಂಕು?

ತಾಲೂಕಿನ ಸುಗಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಹೋಮ್ ಕ್ವಾರಂಟೈನ್​​ನಲ್ಲಿದ್ದ ವ್ಯಕ್ತಿಯೋರ್ವರಿಗೆ ಸೋಂಕು ತಗುಲಿದೆ. ಇವರೆಲ್ಲರ ಟ್ರಾವೆಲ್ ಹಿಸ್ಟರಿ ಆಡಳಿತಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ..

6 people infected from coronavirus in Shirasi: Including 3 Accused in Jail
ಶಿರಸಿಯಲ್ಲಿ ಮತ್ತೆ ಆರು ಜನರಿಗೆ ಕೊರೊನಾ: ಜೈಲಿನಲ್ಲಿದ್ದ 3 ಆರೋಪಿಗಳಿಗೂ ಸೋಂಕು?
author img

By

Published : Jul 4, 2020, 7:08 PM IST

ಶಿರಸಿ (ಉತ್ತರ ಕನ್ನಡ) : ಜಿಲ್ಲೆಯ ಶಿರಸಿಯಲ್ಲಿಂದು 6 ಪ್ರಕರಣ ದೃಢಪಟ್ಟಿವೆ. ಇದರಲ್ಲಿ ಸಬ್​​​ ಜೈಲಿನಲ್ಲಿರುವ ಆರೋಪಿಗೂ ಸೇರಿ ಆಸ್ಪತ್ರೆಯ ಸಿಬ್ಬಂದಿಗೂ ಕೊರೊನಾ ಹಬ್ಬಿದೆ.

ದ್ವಿಚಕ್ರ ಕಳ್ಳತನದ ಆರೋಪಿಯ ಪ್ರಾಥಮಿಕ ಸಂಪರ್ಕದಿಂದ ಶಿರಸಿ ಸಬ್​ ಜೈಲಿನಲ್ಲಿರುವ ಮೂವರು ಖೈದಿಗಳಿಗೆ ಸೋಂಕು ತಗುಲಿದೆ. ಅಲ್ಲದೆ ಆರೋಪಿ ಭೇಟಿ ನೀಡಿದ್ದ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯಲ್ಲೂ ಸೋಂಕು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಶಿರಸಿಯಲ್ಲಿ ಮತ್ತೆ ಆರು ಜನರಿಗೆ ಕೊರೊನಾ.. ಜೈಲಿನಲ್ಲಿದ್ದ 3 ಆರೋಪಿಗಳಿಗೂ ಸೋಂಕು?

ತಾಲೂಕಿನ ಸುಗಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಹೋಮ್ ಕ್ವಾರಂಟೈನ್​​ನಲ್ಲಿದ್ದ ವ್ಯಕ್ತಿಯೋರ್ವರಿಗೆ ಸೋಂಕು ತಗುಲಿದೆ. ಇವರೆಲ್ಲರ ಟ್ರಾವೆಲ್ ಹಿಸ್ಟರಿ ಆಡಳಿತಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.

ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ಇರುವವರ ಗಂಟಲು ದ್ರವ ಸಂಗ್ರಹಣೆ ಕಾರ್ಯ ನಡೆದಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಪಾರ್ಟ್​​ ಟೈಮ್ ಕೆಲಸ ಮಾಡುತ್ತಿದ್ದ ನಗರದ ಖಾಸಗಿ ಆಸ್ಪತ್ರೆಯೊಂದನ್ನೂ ಸಹ ಬಂದ್ ಮಾಡಲಾಗಿದೆ. ಇದರಿಂದ ಕಳೆದ ಎರಡು ದಿನಗಳಿಂದ ಮೂರು ಖಾಸಗಿ ಆಸ್ಪತ್ರೆ ಸೀಲ್​​​ಡೌನ್ ಆದಂತಾಗಿದ್ದು, ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.